ಕ್ಯಾಪ್ಟನ್ ಕೊಹ್ಲಿ ಕಲಿಯಬೇಕಾದದ್ದು ಸಾಕಷ್ಟಿದೆ – ಮತ್ತೊಮ್ಮೆ ಗಂಭೀರ್ ಟೀಕೆ

Public TV
1 Min Read
virat kohli

ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಮತ್ತೊಮ್ಮೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟೀಕೆ ಮಾಡಿದ್ದು, ಕೊಹ್ಲಿ ನಾಯಕರಾಗಿ ಕಲಿಯುವುದು ಸಾಕಷ್ಟಿದೆ ಎಂದಿದ್ದಾರೆ.

ಬ್ಯಾಟಿಂಗ್ ವಿಚಾರವಾಗಿ ಕೊಹ್ಲಿ ಮಾಸ್ಟರ್ ಆಗಿದ್ದು, ಆದ್ರೆ ನಾಯಕನಾಗಿ ಕಲಿಯಬೇಕಾದದ್ದು ಸಾಕಷ್ಟಿದೆ. ತಂಡದ ಬೌಲರ್ ಗಳನ್ನು ಹೊಣೆ ಮಾಡುವ ಮುನ್ನ ಕೊಹ್ಲಿ ತಮ್ಮನ್ನು ತಾವೇ ಹೊಣೆ ಮಾಡಿಕೊಳ್ಳಬೇಕಿದೆ ಎಂದು ಸಂದರ್ಶನವೊಂದರಲ್ಲಿ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆಯೂ ಕೊಹ್ಲಿ ನಾಯಕತ್ವದ ಕುರಿತು ಟೀಕೆ ಮಾಡಿದ್ದ ಗಂಭೀರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಹ್ಲಿರನ್ನು ನಾಯಕರಾಗಿ ಮುಂದುವರಿಸುತ್ತಿರುವುದು ಅಚ್ಚರಿಯಾಗಿದೆ. ಇದುವರೆಗೂ ಐಪಿಎಲ್ ಟೂರ್ನಿಯನ್ನು ಗೆದ್ದಿಲ್ಲ. ಒಬ್ಬ ನಾಯಕ ತನ್ನ ದಾಖಲೆಗಳಂತೆಯೇ ಉತ್ತಮವಾಗಿರಬೇಕು ಎಂದಿದ್ದರು.

gautam gambhir

ಬೆಂಗಳೂರು ತಂಡದ ಹರಾಜಿನ ಸಂದರ್ಭದಿಂದ ಆರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲುಂಡ ಪಂದ್ಯದ ವರೆಗೂ ಆರ್ ಸಿಬಿ ಮಾಡಿದ್ದ ತಪ್ಪುಗಳನ್ನು ವಿವರಿಸಿ ಸಲಹೆ ನೀಡಿದ್ದರು. ಉಳಿದಂತೆ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ತಂಡದ ಪರ 2 ಬಾರಿ ಐಪಿಎಲ್ ಟೈಟಲ್ ಗೆದ್ದಿದ್ದರು.

ಇಂದು ನಡೆಯುತ್ತಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗ್ರೀನ್ ಜರ್ಸಿಯಲ್ಲಿ ಕಣಕ್ಕೆ ಇಳಿದಿದ್ದು, ಪ್ಲಾಸ್ಟಿಕ್ ಮರುಬಳಕೆ ಸೇರಿದಂತೆ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಹಸಿರು ಬಣ್ಣದ ಜರ್ಸಿಯನ್ನು ತೊಟ್ಟು ಕಣಕ್ಕೆ ಇಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *