ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ(Bengaluru Airport) ಕಾರ್ಯಾಚರಣೆ ನಡೆಸಿ 5 ಕೋಟಿ ರೂ. ಮೌಲ್ಯದ 2 ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದಾರೆ.
ಆರೋಪಿಗಳು ಬಾಂಗ್ಲಾದೇಶದ ಮೂಲಕ ಬೆಂಗಳೂರಿಗೆ ಕ್ಯಾಪ್ಸುಲ್ ರೂಪದಲ್ಲಿ ಚಿನ್ನವನ್ನು (Gold) ಸಾಗಾಟ ಮಾಡುತ್ತಿದ್ದರು. ಶೌಚಾಲಯದಲ್ಲಿ ದೇಹದ ಖಾಸಗಿ ಭಾಗದಲ್ಲಿ ಈ ಚಿನ್ನವನ್ನು ಇರಿಸಿದ್ದರು. ಇದನ್ನೂ ಓದಿ: ಉದ್ಯಮಿಯ ಮಗನ ಶೋಕಿಗೆ ಬಿತ್ತು ಹೆಣ – ಬೈಕ್‌ಗೆ ಮಿನಿ ಕೂಪರ್ ಡಿಕ್ಕಿಯಾಗಿ ಯುವತಿ ಸಾವು, ಚಾಲಕ ಅರೆಸ್ಟ್

