ಕೇಪ್ ಟೌನ್: ಹರಿಣಗಳ ನಾಡು ಇಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಅಂಡರ್-19 ವಿಶ್ವಕಪ್ ಸೆಮಿಫೈನಲ್ ತಲುಪಿರುವ ಭಾರತ-ಪಾಕಿಸ್ತಾನ ಸೆನ್ವೆಸ್‍ಪಾರ್ಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ರಶಸ್ತಿ ಸುತ್ತಿಗೆ ಎಂಟ್ರಿ ಪಡೆಯಬೇಕಾದರೆ ಇಂದಿನ ಪಂದ್ಯ ನಿರ್ಣಾಯಕವಾಗಿದ್ದು ಭಾರೀ ಕುತೂಹಲ ಗರಿಗೆದರಿದೆ.
ಲೀಗ್ ಪಂದ್ಯದಲ್ಲಿ ಸೋಲನ್ನೇ ಕಾಣದ ಭಾರತದ ಯುವಪಡೆ ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗಿ ಸಾಗಿಬಂದಿದೆ. ನಾಯಕ ಪ್ರಿಯಾಂ ಗಾರ್ಗ್ ಸಾರಥ್ಯದಲ್ಲಿ ಟೀಂ ಇಂಡಿಯಾ ಹುಡುಗರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಮಿಂಚುವ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಪಾಕ್ ತಂಡವೂ ಸಹ ಕಳಪೆ ಮಾಡುವಂತಿಲ್ಲ. ನಾಜೀರ್ ನಾಯಕತ್ವದಲ್ಲಿ ಪಾಕ್ ಪಡೆ ಉತ್ತಮ ಪ್ರದರ್ಶನ ತೋರಿದ್ದು, ಇಂದು ಬಿಗ್ ಫೈಟ್ ಮ್ಯಾಚ್‍ನ್ನೇ ನಿರೀಕ್ಷಿಸಬಹುದಾಗಿದೆ.
Advertisement
Advertisement
ಉಭಯ ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದೆ. ಯಾವ ತಂಡ ಗೆಲವು ಸಾಧಿಸುತ್ತೋ, ಆ ತಂಡ ಫೈನಲ್‍ಗೆ ಲಗ್ಗೆ ಇಡಲಿದೆ. ಹಾಗಾಗಿ ಇಂದಿನ ಪಂದ್ಯ ಎಲ್ಲರ ಗಮನ ಸೆಳೆದಿದೆ.
Advertisement
ಅಂಡರ್-19 ವಿಶ್ವಕಪ್‍ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಈವರೆಗೆ 9 ಬಾರಿ ಎದುರಾಗಿವೆ. ಇದರಲ್ಲಿ ಪಾಕ್ ತಂಡದ್ದೇ ಮೇಲುಗೈ. ಪಾಕಿಸ್ತಾನ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತದ 4 ಪಂದ್ಯಗಳಲ್ಲಿ ಜಯಿಸಿದೆ. ಆದರೆ 2012ರಿಂದ ಈವರೆಗೆ ಪಾಕ್ ವಿರುದ್ಧ ಭಾರತ ಸೋಲುಂಡಿಲ್ಲ. 2012, 2014, 2018 ರ ವಿಶ್ವಕಪ್‍ನಲ್ಲಿ ಭಾರತ ಜಯಭೇರಿ ಬಾರಿಸಿದೆ.
Advertisement
ಮುಖಾಮುಖಿ ಮಾಹಿತಿ:
ಅಂಡರ್ 19 ವಿಶ್ವಕಪ್ 1988 – ಪಾಕಿಸ್ತಾನಕ್ಕೆ 68 ರನ್‍ಗಳ ಜಯ
ಅಂಡರ್ 19 ವಿಶ್ವಕಪ್ 1998 – ಭಾರತಕ್ಕೆ 5 ವಿಕೆಟ್‍ಗಳ ಗೆಲುವು
ಅಂಡರ್ 19 ವಿಶ್ವಕಪ್ 2002 – ಪಾಕಿಸ್ತಾನಕ್ಕೆ 2 ವಿಕೆಟ್‍ಗಳ ಜಯ
ಅಂಡರ್ 19 ವಿಶ್ವಕಪ್ 2004 – ಪಾಕಿಸ್ತಾನಕ್ಕೆ 5 ವಿಕೆಟ್‍ಗಳ ಗೆಲುವು
ಅಂಡರ್ 19 ವಿಶ್ವಕಪ್ 2006 – ಪಾಕಿಸ್ತಾನಕ್ಕೆ 38 ರನ್‍ಗಳ ಜಯ
ಅಂಡರ್ 19 ವಿಶ್ವಕಪ್ 2010 – ಪಾಕಿಸ್ತಾನಕ್ಕೆ 2 ವಿಕೆಟ್‍ಗಳ ಗೆಲುವು
ಅಂಡರ್ 19 ವಿಶ್ವಕಪ್ 2012 – ಭಾರತಕ್ಕೆ 1 ವಿಕೆಟ್ ಜಯ
ಅಂಡರ್ 19 ವಿಶ್ವಕಪ್ 2014 – ಭಾರತಕ್ಕೆ 40 ರನ್‍ಗಳ ಗೆಲುವು
ಅಂಡರ್ 19 ವಿಶ್ವಕಪ್ 2018 – ಭಾರತಕ್ಕೆ 203 ರನ್‍ಗಳ ಜಯ