-ಸೋಮವಾರವಷ್ಟೇ ಹೊಸ ಕಾರು ಡೆಲಿವರಿ ಪಡೆದಿದ್ದ ಸುಧೀಂದ್ರ
ಬೆಂಗಳೂರು: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಡ್ಯಾನ್ಸರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದಿದೆ.
ಸುಧೀಂದ್ರ ಮೃತ ಡ್ಯಾನ್ಸರ್. ಸುಧೀಂದ್ರ ಸೋಮವಾರವಷ್ಟೇ ಹೊಸ ಮಾರುತಿ ಸುಜುಕಿ ಎಕೋ ಕಾರು ಡೆಲಿವರಿ ಪಡೆದಿದ್ದರು. ಇಂದು ರಸ್ತೆ ಮಧ್ಯೆ ಕಾರು ಕೆಟ್ಟು ನಿಂತಿದ್ದರಿಂದ ಪರೀಕ್ಷಿಸಲು ಕಾರಿನಿಂದ ಕೆಳಗಿಳಿದ ವೇಳೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ಸುಧೀಂದ್ರ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ರಾಜಲಕ್ಷ್ಮಿ ಯೋಗ ಇದೆ, ನ.26ರ ಬಳಿಕ ಸಿಎಂ ಆಗೋದನ್ನ ತಡೆಯೋಕಾಗಲ್ಲ: ವೆಂಕಟೇಶ ಗುರೂಜಿ ಭವಿಷ್ಯ
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ಜೀ ಕನ್ನಡದ ಸೈ ಡ್ಯಾನ್ಸ್ ಶೋ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ ಡಾಬಸ್ ಪೇಟೆಯಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸಿ ನೂರಾರು ಯುವಕ, ಯುವತಿಯರಿಗೆ ಮಕ್ಕಳಿಗೆ ಟ್ರೈನಿಂಗ್ ನೀಡುತ್ತಿದ್ದರು. ಜೊತೆಗೆ ಫ್ಲವರ್ ಡೆಕೋರೇಟರ್, ಇವೆಂಟ್ ನಡೆಸಿ ಜೀವನ ನಡೆಸುತ್ತಿದ್ದರು. ಡಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ 3.1 ತೀವ್ರತೆಯ ಭೂಕಂಪನ ಅನುಭವ – 2 ತಿಂಗಳಲ್ಲಿ 13 ಬಾರಿ ಕಂಪಿಸಿದ ಭೂಮಿ

