ಚಿಕ್ಕಬಳ್ಳಾಪುರ: ನಗರದ ರಾಷ್ಟ್ರೀಯ ಹೆದ್ದಾರಿ (National Highway) 44ರ ರಾಮದೇವರಗುಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
Advertisement
ಬೆಂಗಳೂರು ಕಡೆಯಿಂದ ಬರುತ್ತಿದ್ದ ಕ್ಯಾಂಟರ್ (Canter) ಎದುರಿಗೆ ಅಡ್ಡ ಬಂದ ಏಕೋ ಸ್ಪೋರ್ಟ್ಸ್ ಕಾರನ್ನು (Car) ತಪ್ಪಿಸಲು ಹೋಗಿ ಹೈವೇಯ ಮತ್ತೊಂದು ಬದಿಗೆ ನುಗ್ಗಿದೆ. ಮೊದಲು ಬೈಕ್ (Bike) ಹಾಗೂ ತದನಂತರ ಪ್ರಣವ್ ಹೋಟೆಲ್ ಮುಂಭಾಗ ನಿಂತಿದ್ದ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಪಿ ಚೊಕ್ಕನಹಳ್ಳಿ ಗ್ರಾಮದ ಪಿ.ಜನಾರ್ಧನ (20) ಮತ್ತು ಪ್ರಣವ್ ಹೋಟೆಲ್ ಸೆಕ್ಯೂರಿಟಿ ಗಾರ್ಡ್ ನಾರಾಯಣಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು
Advertisement
Advertisement
ಹೋಟೆಲ್‍ಗೆ ತಿಂಡಿಗೆಂದು ಬಂದು ಕಾರಿನಿಂದ ಕೆಳಗೆ ಇಳಿದಿದ್ದ ಕಾಡಿಗುಡಿ ನಿವಾಸಿಗಳಾದ ಸಾಫ್ಟ್‌ವೇರ್ ಇಂಜಿನಿಯರ್ ಹರ್ಷ ದೇಶಪಾಂಡೆ ಅವರ ಪತ್ನಿ ಮಾನಸ ಹಾಗೂ ಅವರ ತಂದೆ ನರಸಿಂಹ ಮೇಲೆ ಕ್ಯಾಂಟರ್ ಹರಿದು ಗಂಭೀರ ಗಾಯಗೊಂಡಿದ್ದಾರೆ. ಮಾನಸ ಗರ್ಭಿಣಿಯಾಗಿದ್ದು ಕಾಲಿನ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ
Advertisement
ಕ್ಯಾಂಟರ್ ಚಾಲಕ ತಮಿಳುನಾಡು ಮೂಲದ ಅಜಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್‌ಗಳ ಬಿಡಿ ಭಾಗಗಳನ್ನು ಸಾಗಿಸುವ ಕ್ಯಾಂಟರ್ ಇದಾಗಿದೆ. ಅಪಘಾತಕ್ಕೀಡಾಗಿ ಜಖಂಗೊಂಡಿರುವ ಕಾರುಗಳನ್ನು ಪೊಲೀಸ್ ಠಾಣೆ ಬಳಿ ರವಾನಿಸಲಾಗಿದೆ. ಅಪಘಾತವಾದ ಸ್ಥಳದಲ್ಲೇ ಮತ್ತೊಬ್ಬ ಕಾರ್ ಚಾಲಕ ಅಪಘಾತ ನೋಡುತ್ತಾ ಬಂದು ಹೈವೇ ಡ್ರೈನೇಜ್‍ಗೆ ಇಳಿಸಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.