ಚಿಕ್ಕಬಳ್ಳಾಪುರ: ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಅಯ್ಯಪ್ಪ ಭಕ್ತರಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ಧರಣೀಶ್(22) ನಿರಂಜನ್ ಸಿಂಗ್(54) ಮೃತರು. ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೊಡ್ಡಪ್ಯಾಯಲಗುರ್ಕಿ ಬಳಿ ಈ ಅಪಘಾತ ಸಂಭವಿಸಿದೆ. ಮೃತರಿಬ್ಬರನ್ನು ಆಂಧ್ರ ಮೂಲದ ಗುಂತಕಲ್ ನಿವಾಸಿಗಳೆಂದು ಗುರುತಿಸಲಾಗಿದೆ.
Advertisement
Advertisement
ಕೇರಳದ ಶಬರಿಮಲೆಯಿಂದ ಆಂಧ್ರಕ್ಕೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾರು ಪಂಕ್ಚರ್ ಆಗಿತ್ತು. ಇದರಿಂದಾಗಿ ಕಾರು ಹೆದ್ದಾರಿ ಮಧ್ಯೆ ನಿಂತಿತ್ತು. ಈ ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು. ಪಂಕ್ಚರ್ ಆದ ಕಾರಿನಿಂದ ನಾಲ್ವರು ಕೆಳಗೆ ಇಳಿದಿದ್ದರು. ನಿರಂಜನ್ ಸಿಂಗ್ ಮಾತ್ರ ಕಾರಲ್ಲೇ ನಿದ್ದೆ ಮಾಡುತ್ತಿದ್ದು, ಧರಣೀಶ್ ಸ್ಟೆಪ್ನಿ ಟೈರ್ ತೆಗೆದುಕೊಳ್ಳುವ ಸಲುವಾಗಿ ಡಿಕ್ಕಿ ತೆಗೆದು ಲಗೇಜ್ ಕೆಳಗೆ ಇಳಿಸಿಕೊಳ್ಳುತ್ತಿದ್ದ. ಈ ವೇಳೆ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದಿರುವ ಕ್ಯಾಂಟರ್ ನಿಂತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಿರಂಜನ್ ಸಿಂಗ್ ಹಾಗೂ ಧರಣೀಶ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ!
Advertisement
Advertisement
ಪೇರೇಸಂದ್ರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನಗಳನ್ನು ಸ್ಥಳಾಂತರಿಸಿ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್ನಲ್ಲಿ ಕೊರೊನಾ!