ಮುಂಬೈ: ಚಂಡೀಗಢ ವಿಶ್ವವಿದ್ಯಾಲಯದ (Chandigarh University) ವಿದ್ಯಾರ್ಥಿನಿಯರ ಬಾತ್‌ರೂಮ್ ವೀಡಿಯೋ (Bathroom Video) ಲೀಕ್ ಪ್ರಕರಣ ಮಾಸುವುದಕ್ಕೂ ಮೊದಲೇ ಇಂತಹುದೇ ಮತ್ತೊಂದು ಆಘಾತಕಾರಿ ಘಟನೆ ಐಐಟಿ ಬಾಂಬೆಯಲ್ಲಿ (IIT Bombay) ನಡೆದಿದೆ. ವಿದ್ಯಾರ್ಥಿನಿಯರ ವಸತಿ ನಿಲಯದ (Hostel) ಸ್ನಾನಗೃಹದಲ್ಲಿ ಕ್ಯಾಂಟೀನ್ ಕೆಲಸಗಾರನೊಬ್ಬ (Canteen Staff) ಇಣುಕಿ ನೋಡಿರುವ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ವಿದ್ಯಾರ್ಥಿನಿಯೊಬ್ಬಳು ಸ್ನಾನಗೃಹದಲ್ಲಿದ್ದಾಗ ಆರೋಪಿ ಕಿಟಕಿಯ ಸೀಳುಗಳ ಮೂಲಕ ಇಣುಕಿ ನೋಡಿದ್ದಾನೆ. ವಿದ್ಯಾರ್ಥಿನಿಗೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಕಿರುಚಿಕೊಂಡಿದ್ದಾಳೆ. ಬಳಿಕ ಹಾಸ್ಟೆಲ್‌ನ ಕ್ಯಾಂಟೀನ್ ಉದ್ಯೋಗಿ ವಿದ್ಯಾರ್ಥಿನಿಯರ ಸ್ನಾನ ಗೃಹದಲ್ಲಿ ಇಣುಕಿ ನೋಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ
Advertisement
Advertisement
ಇದೀಗ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಆರೊಪಿ ತನ್ನ ಫೋನ್‌ನಿಂದ ವಿದ್ಯಾರ್ಥಿನಿಯರ ಯಾವುದೇ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿಲ್ಲ. ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ, ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂದು ಐಐಟಿ ಬಾಂಬೆ ತಿಳಿಸಿದೆ. ಇದನ್ನೂ ಓದಿ: ನೀರು ಕೇಳಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ – ಫುಡ್ ಡೆಲಿವರಿ ಏಜೆಂಟ್ ಅರೆಸ್ಟ್
Advertisement
ಇದೀಗ ವಿದ್ಯಾರ್ಥಿನಿಲಯದ ಕ್ಯಾಂಟೀನ್ ಅನ್ನು ಮುಚ್ಚಲಾಗಿದ್ದು, ಮಹಿಳಾ ಸಿಬ್ಬಂದಿಯನ್ನು ಮಾತ್ರವೇ ನೇಮಿಸಿ. ಬಳಿಕ ಮತ್ತೆ ಕ್ಯಾಂಟೀನ್ ಅನ್ನು ತೆರೆಯುತ್ತೇವೆ ಎಂದು ಸಂಸ್ಥೆ ತಿಳಿಸಿದೆ.