ರಾಯಪುರ: ಕಳೆದ 70 ವರ್ಷಗಳಲ್ಲಿ ದೇಶದ ಸಾಧನೆಗಳನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಛತ್ತೀಸ್‍ಗಢ ಸಿಎಂ ಭೂಪೇಶ್ ಬಘೇಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಬರೆದಿರುವ ‘ಭಾರತ್ ಕೆ ಪ್ರಧಾನಮಂತ್ರಿ – ದೇಶ್, ದಶಾ ಮತ್ತು ದಿಶಾ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಬಘೇಲ್ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸೂಜಿಯನ್ನು ಸಹ ತಯಾರಿಸಲಿಲ್ಲ. ನಂತರ ನವರತ್ನ(ಸಾರ್ವಜನಿಕ ವಲಯದ ಕಂಪನಿಗಳು) ಸ್ಥಾಪಿಸಲಾಯಿತು. ಐಐಟಿಗಳು ಮತ್ತು ಇತರ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಆದರೆ ಈಗಿನ ಪೀಳಿಗೆ ಹಿಂದಿನ ಪೀಳಿಗೆಯವರು 70 ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ, ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದರು. ಇದನ್ನೂ ಓದಿ: ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ
Advertisement
Advertisement
ನಮ್ಮ ಪೂರ್ವಜರು ಮಾಡಿದ ಕಾರ್ಯದ ಬಗ್ಗೆ ಹೆಮ್ಮೆ ಪಡಲು ಸಾಧ್ಯವಾಗದಿದ್ದರೆ, ಅವರನ್ನು ಅವಮಾನಿಸುವ ಹಕ್ಕು ಈಗಿನ ಪೀಳಿಗೆಗೆ ಇಲ್ಲ. ನಾವು ಇಂದು ಇರುವುದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂದು ಇಂದಿನ ಪೀಳಿಗೆ ಚಿಂತಿಸಬೇಕು ಎಂದು ತಿಳಿ ಹೇಳಿದರು.
Advertisement
Advertisement
ಪ್ರತಿಯೊಬ್ಬ ಪ್ರಧಾನ ಮಂತ್ರಿಗಳು ಅವರ ಸೃಜನಶೀಲ, ಸಕಾರಾತ್ಮಕ ಚಿಂತನೆ ಮತ್ತು ದೂರದೃಷ್ಟಿಯನ್ನು ಹೊಂದಿರುತ್ತಾರೆ. ಅವರ ಹೋರಾಟಗಳು, ನಿರ್ಧಾರಗಳು, ತ್ಯಾಗಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖವಾಗಿವೆ ಎಂದು ಹೇಳಿ ಜವಾಹರಲಾಲ್ ನೆಹರು, ಗುಲ್ಜಾರಿ ಲಾಲ್ ನಂದಾ, ಲಾಲ್ ಬಹದ್ದೂರ್ ಶಾಸ್ತ್ರಿ, ಚಂದ್ರಶೇಖರ್ ಮತ್ತು ಹಿಂದಿನ ಪ್ರಧಾನಿಗಳನ್ನು ಸ್ಮರಿಸಿಕೊಂಡಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್