ಬೆಳಗಾವಿ: ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜೆಡಿಎಸ್ (JDS) ಸೇರುತ್ತಾರೆ ಎಂಬ ಊಹಾಪೋಹಕ್ಕೆ ಪ್ರತಿಕ್ರಿಯಿಸಿದ್ರು. ನನ್ನ ಮನಸಿಗೆ ಬೇಜಾರಾಗಿ ಒಂದು ವರ್ಷದಿಂದ ಮಾಧ್ಯಮದಿಂದ ದೂರವಿದ್ದೆ. ಅನಿವಾರ್ಯವಾಗಿ ಇಂದು ಒಂದೇ ಒಂದು ವಿಷಯ ಸ್ಪಷ್ಟಪಡಿಸುವೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಜೊತೆ ನಾನು ಮಾತನಾಡಿದ್ದು ನಿಜ. ನನಗೆ ಸುಳ್ಳು ಹೇಳುವ ಚಟವಿಲ್ಲ. ದಿನನಿತ್ಯ ಕುಮಾರಸ್ವಾಮಿ ನನ್ನ ಜೊತೆ ಫೋನ್‍ನಲ್ಲಿ ಟಚ್ ಇದ್ದಾರೆ. ಆದರೆ ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದರು. ಇದನ್ನೂ ಓದಿ: ಕೆಸಿಆರ್, ಕವಿತಾರ ಬಗ್ಗೆ ಮಾತಾಡಿದ್ರೆ ನಾಲಿಗೆ ಕತ್ತರಿಸುತ್ತೇನೆ – ಅರವಿಂದ್ ವಿರುದ್ಧ ಎಂಎಲ್‍ಸಿ ಶಂಬಿಪುರ ಕಿಡಿ
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಹೆಚ್‍ಡಿಕೆ, ಮುಂದಿನ ದಿನಗಳಲ್ಲಿ ಕಾದು ನೋಡಿ, ಜೆಡಿಎಸ್ ಬಿಟ್ಟವರೆಲ್ಲಾ ವಾಪಸ್ ಬರ್ತಾರೆ. ಯಾರ್ಯಾರು ಬರ್ತಾರೆ ಅನ್ನೋದನ್ನು ಕಾದುನೋಡಿ ಎಂದು ಹೇಳಿದ್ದರು.