ರಾಮನಗರ: ರಾಜಕೀಯ (Politics) ಜಂಜಾಟದ ನಡುವೆ ನಮ್ಮ ಕ್ಷೇತ್ರದ ಜನರಿಗೆ ಹಾಗೂ ನಮ್ಮ ಮನೆಗೆ ಟೈಂ ಕೊಡಲು ಆಗುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇನ್ನೇನು ಅಧಿವೇಶನಕ್ಕೆ ಹತ್ತು ದಿನ ಬೆಳಗಾವಿಗೆ (Belagavi) ಹೋಗಬೇಕು. ಹೀಗಾಗಿ ಜನರ ಕಷ್ಟ ಕೇಳಲು ಕನಕಪುರಕ್ಕೆ (Kanakapura) ಬಂದಿದ್ದೇನೆ. ಈಗಾಗಲೇ ಸಂಸದರು ಗ್ರಾ.ಪಂ ಮಟ್ಟದ ಜನಸಂಪರ್ಕ ಸಭೆ ನಡೆಸಿದ್ದಾರೆ. ಈ ಹಿಂದೆ ಪ್ರತಿ ಗ್ರಾಮಗಳಿಗೂ ಪ್ರವಾಸ ಮಾಡುತ್ತಿದ್ದೆ. ಕಳೆದ ಎರಡು ಅವಧಿಯಿಂದ ರಾಜ್ಯ ರಾಜಕೀಯ ಕೆಲಸ ಹೆಚ್ಚಾಗಿದೆ. ಹೀಗಾಗಿ ಕ್ಷೇತ್ರ ಪ್ರವಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇಂದು ಸಂಜೆಯವರೆಗೂ ಕನಕಪುರದಲ್ಲೇ ಇದ್ದು ಜನರ ಕಷ್ಟ-ಸುಖ ಕೇಳುತ್ತೇನೆ. ಗ್ರಾ.ಪಂ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈ ಬಗ್ಗೆ ರಾಜ್ಯವ್ಯಾಪಿ ಆದೇಶ ಜಾರಿ ಮಾಡಲಾಗುವುದು ಎಂದರು. ಇದನ್ನೂ ಓದಿ: ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೇರಿದೆ : ಬೇಳೂರು ಗೋಪಾಲಕೃಷ್ಣ
Advertisement
Advertisement
ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ಧತೆ ಮಾಡಿಕೊಳ್ಳುವ ವಿಚಾರದ ಕುರಿತು ಮಾತನಾಡಿ, ನಮ್ಮಲ್ಲಿ ತೆಂಗಿನ ನಾರಿನ ಒಳ್ಳೆಯ ಹಗ್ಗ ಸಿಗುತ್ತದೆ. ಅದನ್ನು ನಾವೇ ವಿರೋಧ ಪಕ್ಷಕ್ಕೆ ಕಳುಹಿಸುತ್ತೆವೆ. ನಮ್ಮನ್ನು ಅಧಿವೇಶನದಲ್ಲಿ ಅದರಿಂದಲೇ ಕಟ್ಟಿಹಾಕಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನೀನು ಎಷ್ಟು ಟ್ಯಾಕ್ಸ್ ಕಟ್ತೀಯಾ ಹೇಳು – ರೈತನ ವಿರುದ್ಧ ಸುರೇಶ್ ಗರಂ
Advertisement