ಬೆಂಗಳೂರು: ಮುಡಾ 50:50 ಅನುಪಾತ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದು, ಗೃಹಸಚಿವ ಜಿ. ಪರಮೇಶ್ವರ್ (G. Parameshwar) ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಕುರಿತು ವೆರಿಫೈ ಮಾಡುತ್ತಿದ್ದಾರೆ. ಎಲ್ಲವನ್ನೂ ಸಿಬಿಐ ಗೆ ಕೊಡಲು ಸಾಧ್ಯವಿಲ್ಲ. ಅವರು ಕೇಳ್ತಾರೆ ಅಂತಾ ಎಲ್ಲವನ್ನೂ ಸಿಬಿಐಗೆ ಕೊಡಲು ಆಗಲ್ಲ ಎಂದು ಹೇಳಿದರು.
ಸಿಎಂ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಿಬಿಐ ತನಿಖೆಗೆ ಕೊಟ್ರೆ ಇಲ್ಲೇನೂ ಮಾಡೋ ಆಗಿಲ್ವಾ..?. ಅಸೆಂಬ್ಲಿಯಲ್ಲಿ ಅವರು ಯಾವ ವಿಷಯ ಚರ್ಚೆಗೆ ತಗೋತಾರೋ ಗೊತ್ತಿಲ್ಲ. ಸ್ಪೀಕರ್ ಗೆ ಯಾವ ವಿಚಾರದ ಬಗ್ಗೆ ಲೆಟರ್ ಕೊಡ್ತಾರೋ ನೋಡಬೇಕು. ಬಿಜೆಪಿಯವರಿಗೆ ನಾವು ಉತ್ತರ ಕೊಡ್ತೀವಿ, ಹಿಂಜರಿವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ- ತರುಣ್ ಮದುವೆ ಬಗ್ಗೆ ಮಾಲತಿ ಸುಧೀರ್ ಪ್ರತಿಕ್ರಿಯೆ
ರಾಜ್ಯದಲ್ಲಿ ಹೊಸ ಕಾನೂನು ನೀತಿ ಜಾರಿಗೆ ತರುವುದಕ್ಕೆ ಕಾನೂನು ಸಚಿವರು ಪ್ರಸ್ತಾಪ ಮಾಡಿದ್ದಾರೆ. ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬರಲಿದೆ. ಗ್ರಾಮ ಮಟ್ಟದಲ್ಲಿ ನ್ಯಾಯ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಬಗ್ಗೆ ಚರ್ಚೆ ಆಗಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿ ನಾಯಕರು ವಾಗ್ದಾಳಿ: ಮುಡಾ 50:50 ಅನುಪಾತ ಅವ್ಯವಹಾರ ಆರೋಪದ ಕುರಿತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಆರ್. ಅಶೋಕ್ (R. Ashok) ಆಗ್ರಹಿಸಿದರೆ, ಸಿದ್ದರಾಮಯ್ಯ ಅವರ ತಪ್ಪು ಇಲ್ಲ ಅಂದ್ರೆ ಸಿಬಿಐಗೆ ಕೊಡಲಿ. ಸಿಎಂ ಸಿದ್ದರಾಮಯ್ಯ ಮುಡಾದ ಫಲಾನುಭವಿಗಳು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲಿ ಎಂದು ಸಿ.ಟಿ ರವಿ ಆಗ್ರಹಿಸಿದ್ದಾರೆ.