ಪುಷ್ಪ ಸಿನಿಮಾದ ‘ಊ ಅಂಟಾವ ಮಾವ’ ಹಾಡಿನಲ್ಲಿ ನಟಿ ಸಮಂತಾ (Samantha) ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಹಾಡಿನ ಸಾಲು, ಬಿಟ್ಸ್ ಜೊತೆ ಮಾದಕತೆಯನ್ನು ತುಂಬಿಸಿಕೊಂಡು ಸಮಂತಾ ಡಾನ್ಸ್ ಮಾಡಿದ್ದರು. ಈ ಕಾರಣದಿಂದಾಗಿ ಹಾಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ನಾಯಕಿಗಿಂತಲೂ ಸಮಂತಾಗೆ ಹೆಚ್ಚಿನ ಗೌರವ ಸಿಕ್ಕಿತು. ಆದರೆ, ಈ ಹಾಡು ತಮಗೆ ತ್ರಾಸದಾಯಕವಾಗಿತ್ತು ಅಂದಿದ್ದಾರೆ ಸಮಂತಾ.
Advertisement
ಊ ಅಂಟಾವ ಮಾವ ಹಾಡು ಆ ದಿವಸಗಳಲ್ಲಿ ನನಗೆ ಪ್ರಯೋಗವಾಗಿತ್ತು. ಹಾಗಾಗಿ ಹಾಡಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿದೆ. ಮೊದಲ ದಿನ ಡಾನ್ಸ್ ಮಾಡುವಾಗ ಅಕ್ಷರಶಃ ಹೆದರಿದ್ದೆ. ಮೈ ನಡುಗುತ್ತಿತ್ತು. ಅದಕ್ಕೆ ಕಾರಣ ನಾನು ಆರೋಗ್ಯವಾಗಿರಲಿಲ್ಲ. ನನಗೆ ನಾನು ತಗೆದುಕೊಂಡ ಸವಾಲು ಅದಾಗಿತ್ತು ಅಂದಿದ್ದಾರೆ ಸಮಂತಾ.
Advertisement
Advertisement
ಮತ್ತೆ ಇಂತಹ ಹಾಡುಗಳಲ್ಲಿ ತಾವು ಕಾಣಿಸಿಕೊಳ್ಳುವುದಿಲ್ಲವೆಂದು ಸ್ಪಷ್ಟನೆ ಕೂಡ ನೀಡಿದ್ದಾರೆ. ನನ್ನ ದೇಹ ಸೆಕ್ಸಿಯಾಗಿಲ್ಲ. ಮಾದಕತೆ ಎನ್ನುವುದು ನನ್ನ ಪಾಲಿಗೆ ದೂರ. ನಾನು ಅದರಲ್ಲಿ ಇರಲು ಇಷ್ಟ ಪಡುವುದಿಲ್ಲ. ಹಾಗಾಗಿ ಮತ್ತೆ ಆ ರೀತಿಯ ಗೀತೆಗಳಿಗೆ ಹೆಜ್ಜೆ ಹಾಕಲಾರೆ ಹಾಗೂ ಪ್ರಯೋಗಕ್ಕೂ ಮುಂದಾಗಲಾರೆ ಎನ್ನುವುದು ಸಮಂತಾ ಮಾತು.
Advertisement
ಇತ್ತೀಚಿನ ದಿನಗಳಲ್ಲಿ ಅವರ ದೇಹದ ಸೌಂದರ್ಯ ಮತ್ತಷ್ಟು ಕುಗ್ಗುತ್ತಿದೆಯಂತೆ. ಕಾರಣ ಅವರು ಕಾಯಿಲೆಗೆ ತುತ್ತಾಗಿರುವುದು. ಈ ಹಿಂದೆಯೂ ತಾವು ಮಾಸ್ಕ್ ಹಾಕದೇ ಯಾವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ ಎಂದಿದ್ದರು. ತಾವು ನೋಡಲು ಈಗ ಚೆನ್ನಾಗಿಲ್ಲವೆಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ ಸಮಂತಾ.