ನವದೆಹಲಿ: ಭಾರತವು ತನ್ನ ಗಡಿಯಲ್ಲಿನ ಒಂದಿಂಚು ಭೂಮಿಯಲ್ಲಿಯೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುಜರಾತಿನ ಕಚ್ ಪ್ರದೇಶದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ನಂತರ ಮೋದಿ ಅವರು ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ದೇಶವನ್ನು ರಕ್ಷಿಸಲು ಅದರ ಮಿಲಿಟರಿಯ ಶಕ್ತಿಯನ್ನು ಜನರು ನಂಬುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ವಾಪಸಾತಿ ಬಳಿಕ ಗಡಿಯಲ್ಲಿ ದೀಪಾವಳಿ ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು
Advertisement
Advertisement
ಭಾರತವು ತನ್ನ ಗಡಿಯ ಇಂಚಿನಲ್ಲೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಮ್ಮ ನೀತಿಗಳು ನಮ್ಮ ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದಿದ್ದಾರೆ.
Advertisement
ನಾವು ನಮ್ಮ ಸೈನಿಕರ ದೃಢತೆಯನ್ನು ನಂಬುತ್ತೇವೆಯೇ ಹೊರತು, ನಮ್ಮ ಶತ್ರುಗಳ ಮಾತನ್ನಲ್ಲ. ನಿಮ್ಮಿಂದ (ಸೈನಿಕರಿಂದ) ತಮ್ಮ ದೇಶ ಸುರಕ್ಷಿತವಾಗಿದೆ ಎಂದು ಭಾರತದ ಜನರು ಭಾವಿಸುತ್ತಾರೆ ಎಂದು ಸೈನಿಕರನ್ನು ಪ್ರಧಾನಿ ಹೊಗಳಿದ್ದಾರೆ. ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಶೀಘ್ರದಲ್ಲೇ ಜಾರಿ: ಮೋದಿ
Advertisement
ಜಗತ್ತು ನಿಮ್ಮನ್ನು ನೋಡಿದಾಗ ಭಾರತದ ಶಕ್ತಿಯೇ ಕಾಣುತ್ತದೆ. ಆದರೆ ಶತ್ರುಗಳು ನಿಮ್ಮನ್ನು ನೋಡಿದಾಗ, ಅವರು ತಮ್ಮ ಕೆಟ್ಟ ಯೋಜನೆಗಳ ಅಂತ್ಯವನ್ನು ನೋಡುತ್ತಾರೆ ಎಂದು ಯೋಧರನ್ನು ಮೋದಿ ಹುರಿದುಂಬಿಸಿದ್ದಾರೆ.