ಕೊಪ್ಪಳ: ಜಗತ್ತಿನಲ್ಲಿ ಒಬ್ಬನಿಂದ ರೇಪ್ (Rape) ಮಾಡಲು ಸಾಧ್ಯವಿಲ್ಲ. 2 ಕೈ ತಟ್ಟಿದ್ರೇನೇ ಚಪ್ಪಾಳೆ ಆಗೋದು ಎಂದು ಕಾಂಗ್ರೆಸ್‌ನ (Congress) ಹಿರಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ (Amaregouda Bayyapur) ವಿವಾದಿತ ಹೇಳಿಕೆ ನೀಡಿದ್ದಾರೆ.
ಕುಷ್ಟಗಿ ತಾಲೂಕಿನ ಎಂ ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡ ಸಂಗನಗೌಡ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ. ಈ ಹಿನ್ನೆಲೆ ಸಂತ್ರಸ್ತೆಯ ಮಾವ ನ್ಯಾಯಕ್ಕಾಗಿ ಎಸ್‌ಪಿ ಹಾಗೂ ಮಾಜಿ ಶಾಸಕರ ಬಳಿ ಮನವಿಗೆ ಆಗಮಿಸಿದ್ದರು.
ಆದರೆ ಈ ವೇಳೆ ಸಂತ್ರಸ್ತೆಯ ಮಾವನಿಗೆ ಪ್ರಶ್ನಿಸಿದ ಅಮರೇಗೌಡ, ಒಬ್ಬ ಹೇಗೆ ರೇಪ್ ಮಾಡಲು ಸಾಧ್ಯ? 1 ಕೈಯಿಂದ ಚಪ್ಪಾಳೆ ಸಾಧ್ಯಾನಾ? ರೇಪ್ ಆಗಬೇಕಾದರೆ 3-4 ಜನ ಇರಬೇಕು. ಒಬ್ಬಾಕೆನ ಒಬ್ಬ ರೇಪ್ ಮಾಡೋದು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಪ್ಪ ಸಿಎಂ ಹಿಂದೆ ತಿರುಗಾಟ – ಮಗ ಊರೆಲ್ಲಾ ಪುಂಡಾಟ!
ಮರ್ಯಾದೆ ಕಳೆದುಕೊಳ್ತೀರಿ ನೀವು. ಇದರಲ್ಲಿ ಏನೂ ಆಗಲ್ಲ. ನಿನ್ನ ಕಡೆ ವಾದ ಮಾಡೋಕೆ ಆಗಲ್ಲ. ಅದೆಲ್ಲಾ ಮಾಡಬಾರದು, ನಮ್ಮ ಮನೆತನದ ಗೌರವ ನಾವೇ ಕಳೆದುಕೊಂಡ ಹಾಗೆ. ಈಗ ಏನು ಬಂತು ನಿನಗೆ ಬಹಳ ಅಂದ್ರೆ ಅವನನ್ನು ಒಳಗೆ ಹಾಕ್ತಾರೆ ಎಂದು ನಿರ್ಲಕ್ಷ್ಯತನದಿಂದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ: ಮುರುಘಾ ಶ್ರೀ ಆಪ್ತ