BollywoodCinemaDistrictsKarnatakaLatestMain Post

ಇಂದಿನಿಂದ ಕಾನ್ ಚಿತ್ರೋತ್ಸವ : ರಂಗಾಗಿದೆ ರೆಟ್ ಕಾರ್ಪೆಟ್

ಇಂದಿನಿಂದ ವಿಶ್ವದ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾದ ಕಾನ್ ಫಿಲ್ಮ್ ಫೆಸ್ಟಿವೆಲ್ ಶುರುವಾಗಲಿದೆ. ಇಂದು ಸಂಜೆ 7 ಗಂಟೆಯಿಂದ ಶುರುವಾಗುವ ಕ್ಯಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಹೆಜ್ಜೆ ಹಾಕಲಿದ್ದು, ಈಗಾಗಲೇ ಫ್ರಾನ್ಸ್ ನ ಕಾನ್ ನಗರದ ಫ್ರೆಂಚ್ ರಿವೇರಿಯಾಗೆ ಈ ತಾರೆಯರು ಬಂದಿಳಿದಿದ್ದಾರೆ.

ಮೇ 17 ರಿಂದ ಮೇ 28ರವರೆಗೆ ನಡೆಯಲಿರುವ ಕಾನ್ ಸಿನಿಮೋತ್ಸವವು ವಿಶ್ವದ ನಾನಾ ಸಿನಿಮಾ ರಂಗವನ್ನು ಒಟ್ಟಾಗಿಸುವುದು ಫೆಸ್ಟಿವೆಲ್ ನ ವಿಶೇಷ. ಒಟ್ಟು 12 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಸಿನಿ ಜಗತ್ತಿನ ಅನೇ ಗಣ್ಯರು ಭಾಗಿಯಾಗಲಿದ್ದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

ಕಳೆದ ಎರಡು ವರ್ಷಗಳಿಂದ ಕೊರೋನಾ ಕರಿನೆರಳಿನಿಂದಾಗಿ ಚಿತ್ರೋತ್ಸವ ಅಷ್ಟೇನೂ ಅದ್ಧೂರಿಯಾಗಿ ನಡೆದಿರಲಿಲ್ಲ. 2020ರಲ್ಲಿ ಚಿತ್ರೋತ್ಸವವನ್ನೇ ರದ್ದುಗೊಳಿಸಿದ್ದರೆ, 2021ರಲ್ಲಿ ಸೀಮಿತ ಮಾದರಿಯಲ್ಲಿ ಮಾತ್ರ ಚಿತ್ರೋತ್ಸವ ನಡೆಸಿದ್ದರು. ಈ ವರ್ಷ ಪ್ರತಿ ಸಲದಂತೆ ರಂಗುರಂಗಾಗಿ ಆಯೋಜಿಸಲಾಗಿದೆ. ರೆಡ್ ಕಾರ್ಪೆಟ್ ಸೇರಿದಂತೆ ಸಿನಿಮಾ ಪ್ರದರ್ಶನ, ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಾಕಷ್ಟು ಸಲ ಕೇವಲ ಬಾಲಿವುಡ್ ಸಿಲೆಬ್ರಿಟಿಗಳಿಗೆ ಮಾತ್ರ ಕಾನ್ ನಲ್ಲಿ ಅವಕಾಶ ಸಿಗುತ್ತಿತ್ತು. ಈ ಬಾರಿ ದಕ್ಷಿಣದ ಅನೇಕ ತಾರೆಯರು ಈ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿರುವುದು ವಿಶೇಷ. ಪೂಜಾ ಹೆಗ್ಡೆ, ನಯನತಾರಾ, ತಮನ್ನಾ ಭಾಟಿಯಾ, ಮಾಧವನ್, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ನವಾಜುದ್ದೀನ್ ಸಿದ್ಧಿಖಿ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಹೀಗೆ ಅನೇಕ ಕಲಾವಿದರು ಭಾಗಿಯಾಗಲು ಈಗಾಗಲೇ ಫ್ರಾನ್ಸ್ ಗೆ ಹೋಗಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

ಅದರಲ್ಲೂ ಈ ಬಾರಿಯ ಕಾನ್ಸ್ ಫೆಸ್ಟಿವೆಲ್ ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಈ ಬಾರಿ ಫೆಸ್ಟಿವೆಲ್ ನಲ್ಲಿ ಪ್ರದರ್ಶನಗೊಳ್ಳಲಿವೆ.

Leave a Reply

Your email address will not be published.

Back to top button