ಬೆಂಗಳೂರು: ಪ್ರಸ್ತುತ ಮಾದಕ ವಸ್ತುಗಳು ಚಾಕ್ಲೆಟ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲಾಗುತ್ತದೆ. ಇದೀಗ ಬೆಂಗಳೂರಿಗೂ (Bengaluru) ಗಾಂಜಾ ಚಾಕ್ಲೆಟ್ (Cannabis chocolate) ಕಾಲಿಟ್ಟಿದ್ದು, ಉತ್ತರಪ್ರದೇಶದಿಂದ (Uttar Pradesh) ಬೆಂಗಳೂರಿಗೆ ತಂದು ಮಾರಾಟ ಮಾಡುವ ಯತ್ನ ನಡೆದಿದೆ.
Advertisement
ಮನೋಕಾ ಹೆಸರಿನ ಗಾಂಜಾ ಚಾಕ್ಲೆಟ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಮೂವರು ಅಂಗಡಿ ಮಾಲೀಕರಿಗೆ ಮಾರಾಟ ಮಾಡಲು ಯತ್ನ ಮಾಡಿದ್ದಾರೆ. ಈ ಕುರಿತು ಸಮೀಮ್ ಅಖ್ತಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, 6 ಲಕ್ಷ ರೂ. ಮೌಲ್ಯದ ಗಾಂಜಾ ಚಾಕ್ಲೆಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಈ ಹಿಂದೆ ಕೂಡ ಗಾಂಜಾ ಚಾಕ್ಲೆಟ್ ಅನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿದ್ದ. ಇದೀಗ ಆರ್‌ಎಂಸಿ ಯಾರ್ಡ್ (RMC Yard) ಬಳಿ ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲು ಯತ್ನಿಸಿದ್ದು, 50 ರೂ.ಗೆ ಮೂರು ಚಾಕ್ಲೆಟ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ 17 ಕೋಟಿ ರೂ. ಮೌಲ್ಯದ ಕೊಕೇನ್ ವಶ – ಇಬ್ಬರು ಕೀನ್ಯಾ ಪ್ರಜೆಗಳ ಬಂಧನ
Advertisement
Advertisement
ಮುನಾಕ್ಕಾ, ಮಹಾಕಾಲ, ಆನಂದ, ಚಾರ್ ಮಿನಾರ್ ಗೊಲ್ಕ್ ಹೆಸರಿನ ಚಾಕ್ಲೇಟ್ ಮಾರಾಟ ಜಾಲ ಪತ್ತೆಯಾಗಿದ್ದು, ರೈಲಿನ ಮೂಲಕ ಉತ್ತರಪ್ರದೇಶದಿಂದ ಬೆಂಗಳೂರಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಪೊಲೀಸರ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಹಲವರು ನಾಪತ್ತೆಯಾಗಿದ್ದಾರೆ. ಸಮೀಮ್‌ನಿಂದ ಚಾಕ್ಲೆಟ್ ಪಡೆಯುತ್ತಿದ್ದ ಮೂವರು ನಾಪತ್ತೆಯಾಗಿದ್ದಾರೆ. ಸಂಜಯ್, ಗೋವಿಂದ ಮತ್ತು ವಿನೋದ್ ಎಂಬವರು ನಾಪತ್ತೆಯಾಗಿದ್ದು, ನಾಪತ್ತೆಯಾದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು
Advertisement
Web Stories