ಕಲಬುರಗಿ: ಸಾಮಾನ್ಯವಾಗಿ ಹೇರ್ ಅನ್ನು ಕತ್ತರಿಯಿಂದ ಕಟ್ಟಿಂಗ್ ಮಾಡುತ್ತಾರೆ. ಆದರೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ರಾಜ್ ಮೆನ್ಸ್ ಪಾರ್ಲರ್ ಆ್ಯಂಡ್ ಬ್ಯುಟಿ ಕೇರ್ ನಲ್ಲಿ ಮೇಣದ ಬತ್ತಿಯಿಂದ ಹೇರ್ ಕಟ್ಟಿಂಗ್ ಮಾಡುತ್ತಾರೆ.
ಮಾಲೀಕ ದಶರತ್ ಕೊಟನೂರ್ ಮೇಣದ ಬತ್ತಿಯಿಂದ ಕಟ್ಟಿಂಗ್ ಮಾಡುತ್ತಾರೆ. ಇವರು 15 ವರ್ಷಗಳಿಂದ ಹೇರ್ ಕಟ್ಟಿಂಗ್ ಮಾಡುತ್ತಿದ್ದಾರೆ. ಒಂದು ದಿನ ರಾತ್ರಿ ವೇಳೆ ಕಟ್ಟಿಂಗ್ ಮಾಡುವಾಗ ಕರೆಂಟ್ ಹೋಗಿತ್ತು. ಆಗ ಕ್ಯಾಂಡಲ್ ಬೆಳಕಿನಿಂದ ಕಟ್ಟಿಂಗ್ ಮಾಡುತ್ತಿದ್ದರು. ಈ ವೇಳೆ ಕ್ಯಾಂಡಲ್ ಕಿಡಿ ಗ್ರಾಹಕನೋರ್ವನ ಮೇಲೆ ಬಿತ್ತು. ಅಲ್ಲಿಂದ ದಶರತ್ ಕ್ಯಾಂಡಲ್ ಹೇರ್ ಕಟ್ಟಿಂಗ್ ಶುರು ಮಾಡಿದ್ದಾರೆ.
Advertisement
Advertisement
ಸುತ್ತಮುತ್ತಲಿನ ಸಾರ್ವಜನಿಕರು ಕೂಡ ಈ ಅಂಗಡಿಗೆ ಬಂದು ಕ್ಯಾಂಡಲ್‍ನಿಂದ ಕಟ್ಟಿಂಗ್ ಮಾಡಿಸಿಕೊಂಡು ಹೋಗುತ್ತಾರೆ. ಪ್ರತಿ ನಿತ್ಯ ಮೂರ್ನಾಲ್ಕು ಜನರಿಗೆ ಕ್ಯಾಂಡಲ್ ಕಟ್ಟಿಂಗ್ ಮಾಡುವುದರ ಜೊತೆಗೆ ಸಾಮಾನ್ಯ ಕಟ್ಟಿಂಗ್ ಕೂಡ ಮಾಡುತ್ತಾರೆ. ಕ್ಯಾಂಡಲ್ ಕಟ್ಟಿಂಗ್‌ಗೆ 75 ರಿಂದ 100 ರೂಪಾಯಿವರೆಗೆ ಪಡೆದರೆ, ಸಾಮಾನ್ಯ ಕಟ್ಟಿಂಗ್‌ಗೆ 50 ರಿಂದ 60 ರೂಪಾಯಿ ಪಡೆಯುತ್ತಾರೆ.
Advertisement
ದಿನ ಬೆಳಗಾದರೆ ಸಾಕು ಅಕ್ಕಪಕ್ಕದ ಗ್ರಾಮಸ್ಥರು ಇವರ ಅಂಗಡಿಗೆ ಬಂದು ಕ್ಯೂನಲ್ಲಿರುತ್ತಾರೆ. ಎಷ್ಟೇ ತಡವಾದರೂ ಸಹ ಸಾರ್ವಜನಿಕರು ಕೂಡ ತಾಳ್ಮೆಯಿಂದ ಕಾಯುತ್ತಾರೆ. ಜೊತೆಗೆ ದಶರತ್ ಕೂಡ ಗ್ರಾಹಕರೊಂದಿಗೆ ಉತ್ತಮವಾದ ಬಾಂಧವ್ಯ ಇಟ್ಟುಕೊಂಡಿದ್ದಾರೆ.