– ಸಿಪಿವೈಗೆ ಚನ್ನಪಟ್ಟಣದಲ್ಲಿ ಗೆಲುವಿನ ವಾತಾವರಣವಿದೆ
ಹುಬ್ಬಳ್ಳಿ: ಚುನಾವಣೆ ಸ್ಪರ್ಧೆ ಮುಖ್ಯವಲ್ಲ. ಗೆಲುವು ಮುಖ್ಯ. ಸಿ.ಪಿ ಯೋಗೇಶ್ವರ್ (C P Yogeshwar) ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ. ಚನ್ನಪಟ್ಟಣದಲ್ಲಿ ಅವರಿಗೆ ಗೆಲುವಿನ ವಾತಾವರಣವಿದೆ ಅವರೇ ಎನ್‌ಡಿಎ ಅಭ್ಯರ್ಥಿಯಾಗಬೇಕು ಎನ್ನುವ ಮೂಲಕ ಸಿಪಿವೈ ಪರ ವಿಧಾನಸಭಾ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ.
Advertisement
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯೋಗೇಶ್ವರ್ ಮೇಲೆ ಜನರ ಪ್ರೀತಿ, ಅನುಕಂಪವಿದೆ. ಕುಮಾರಸ್ವಾಮಿ ಅವರು ಅತ್ಯಂತ ಪ್ರಬುದ್ಧ ರಾಜಕಾರಣಿ. ಅವರು ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಬಳಿಕ ಅಲ್ಲಿ ಎನ್‌ಡಿಎಯಿಂದ ಹೊಸ ಅಭ್ಯರ್ಥಿ ಆಗಬೇಕು. ಈ ಹಿಂದೆ ಕುಮಾರಸ್ವಾಮಿ ಮತ್ತು ಡಾ. ಮಂಜುನಾಥ್ ಚುನಾವಣೆಯಲ್ಲಿ ಯೋಗೇಶ್ವರ್ ಒಳ್ಳೆಯ ಕಾರ್ಯ ಮಾಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಪಿವೈಗೆ ಟಿಕೇಟ್ ನೀಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ಸುದೀಪ್ ಸರ್‌ನ ನೋಡೋಕೆ ಆಗುತ್ತಿಲ್ಲ: ಲಹರಿ ವೇಲು
Advertisement
Advertisement
ಮುಡಾ ವಿಚಾರವಾಗಿ ಸಿಎಂ ಕುಣಿಕೆ ಗಟ್ಟಿಯಾಗುತ್ತಿದೆ ಇನ್ನೂ ಕೆಲವೇ ದಿನದಲ್ಲಿ ಸಿಎಂ ರಾಜಿನಾಮೆ ನೀಡುತ್ತಾರೆ. ಜಿ ಪರಮೇಶ್ವರ್ (G Parameshwar) ಅವರು ಸಿಎಂ ಅವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪರವಾಗಿ ಮಾತನಾಡಿ ಅವರ ಅನುಗ್ರಹದಿಂದ ಸಿಎಂ ಆಗುವ ಆಸೆಯಲ್ಲಿದ್ದಾರೆ. ಈಗಾಗಲೇ ಪರಮೇಶ್ವರ್ ಸಿಎಂ ಸೀಟ್‌ಗೆ ಟೆವಲ್ ಹಾಕಿದ್ದಾರೆ. ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂಬಿ ಪಾಟೀಲ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ.. ಅವರಿಗೆ ಯಾರು ಬೇಕೋ ಹೆಸರು ಘೋಷಣೆ ಮಾಡ್ತಾರೆ: ಬಿಎಸ್‌ವೈ
Advertisement
ಭರತ್ ಬೊಮ್ಮಾಯಿ (Bharath Bommai) ಅವರಿಗೆ ಟಿಕೇಟ್ ನೀಡಿದ್ದು ಕುಟುಂಬ ರಾಜಕೀಯ ಅಲ್ಲಾ. ಸ್ಥಳೀಯ ಕಾರ್ಯಕರ್ತರೇ ಭರತ್ ಅವರನ್ನಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ರಾಜಾಭವನ ದಾಸ ಶಿಗ್ಗಾಂವಿಯಲ್ಲಿ ಪ್ರವಾಸ ಮಾಡಿ ಎಲ್ಲರ ಅಭಿಪ್ರಾಯ ಪಡೆದೇ ಭರತ್ ಹೆಸರು ಅಂತಿಮಗೊಳಿಸಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಅವಶ್ಯಕತೆ ಇದೆ. ಹೀಗಾಗಿ ಜನರ ಅಭಿಪ್ರಾಯದಿಂದ ಅಭ್ಯರ್ಥಿ ಆಯ್ಕೆ ಅಂತಿಮವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ತಮ್ಮ ಕುಟುಂಬದಲ್ಲೆ ನಾಮಿನೇಟ್ ಮಾಡುತ್ತಾರೆ. ಅದು ಕುಟುಂಬ ರಾಜಕೀಯ. ನಮ್ಮ ಪಕ್ಷದಲ್ಲಿ ಜನರ ಅಭಿಪ್ರಾಯ ಪಡೆಯತ್ತಾರೆ. ನಮ್ಮದು ಪ್ರಜಾಪ್ರಭುತ್ವ ಪಕ್ಷ ಎಂದು ತಿಳಿಸಿದರು. ಇದನ್ನೂ ಓದಿ: ಮಂಗಳೂರಲ್ಲಿ ರೈಲು ಹಳಿ ತಪ್ಪಿಸಲು ಸಂಚು? – ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ದುಷ್ಕರ್ಮಿಗಳು ಪರಾರಿ
ಹುಬ್ಬಳ್ಳಿ ಗಲಭೆ ಕೇಸ್‌ಗಳಲ್ಲಿ ವಿವಿಧ ನ್ಯಾಯಾಲಯದಲ್ಲಿ 17 ಬಾರಿ ಜಾಮೀನು ಅರ್ಜಿ ವಜಾ ಆಗಿತ್ತು. ಸಾಕಷ್ಟು ಬಾರಿ ಸುಪ್ರೀಂ ಕೋರ್ಟ್ನಲ್ಲಿ ಸಹ ಜಾಮೀನು ಅರ್ಜಿ ವಜಾ ಆಗಿತ್ತು. ಗಲಭೆಯಲ್ಲಿ ರಾಷ್ಟ್ರೀಯ ಭದ್ರತಾ ವಿಚಾರ ಸಹ ಕೇಳಿ ಬಂದಿತ್ತು. ಹೀಗಾಗಿ ಇದರಲ್ಲಿ ಎನ್‌ಐಎ ಪ್ರವೇಶ ಆಗಿತ್ತು. ಇಂತಹ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದು ಗಂಭೀರ ತಪ್ಪು ಮಾಡುತ್ತಿದೆ ಎಂದು ಹರಿಯಾಯ್ದರು. ಇದನ್ನೂ ಓದಿ: ಕಲಬುರಗಿ ಜೈಲಿನೊಳಗೆ ಗುಟ್ಕಾ, ಬೀಡಿ, ಪಾನ್ ಮಸಾಲಾ ಸಾಗಣೆ ಯತ್ನ