– ಎರಡನೇ ಬಾರಿ ಕ್ಯಾನ್ಸರ್ ಬರುವುದನ್ನು ತಡೆಯುತ್ತೆ ಮಾತ್ರೆ
– 10 ವರ್ಷಗಳ ಕಾಲ ದೀರ್ಘ ಸಂಶೋಧನೆ
– FSSAI ಅನುಮೋದನೆಗಾಗಿ ಕಾಯುತ್ತಿದ್ದಾರೆ ಸಂಶೋಧಕರು
ಮುಂಬೈ: ಎರಡನೇ ಬಾರಿಗೆ ಕ್ಯಾನ್ಸರ್ (Cancer) ಬರುವುದನ್ನು ತಡೆಯುವ ಮಾತ್ರೆಯನ್ನು (Tablet) ನಾವು ಅಭಿವೃದ್ಧಿ ಪಡಿಸಿರುವುದಾಗಿ ಭಾರತದ ಪ್ರಸಿದ್ಧ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಟಾಟಾ ಸ್ಮಾರಕ ಕೇಂದ್ರ (TMC) ಹೇಳಿಕೊಂಡಿದೆ.
ಸಂಶೋಧಕರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಮಾತ್ರೆ ಅಭಿವೃದ್ಧಿ ಪಡಿಸಿದ್ದು ವಿಕಿರಣ (Radiation) ಮತ್ತು ಕೀಮೋಥೆರಪಿಯಂತಹ (Chemotherapy) ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.
Advertisement
ಸಂಶೋಧನಾ ಗುಂಪಿನ ಭಾಗವಾಗಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ ಪ್ರತಿಕ್ರಿಯಿಸಿ, ಸಂಶೋಧನೆಗಾಗಿ ಆರಂಭದಲ್ಲಿ ಇಲಿಗಳಲ್ಲಿ (Rat) ಮಾನವನ ಕ್ಯಾನ್ಸರ್ ಕೋಶಗಳನ್ನು ಸೇರಿಸಲಾಯಿತು. ಆ ಕೋಶಗಳು ಇಲಿಗಳಲ್ಲಿ ಗೆಡ್ಡೆಯನ್ನು ರೂಪಿಸಿತು. ನಂತರ ಇಲಿಗಳಿಗೆ ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಈ ಕ್ಯಾನ್ಸರ್ ಕೋಶಗಳು ಸತ್ತಾಗ ಅವು ಕ್ರೊಮಾಟಿನ್ ಕಣಗಳೆಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಈ ಸಣ್ಣ ತುಂಡುಗಳು ರಕ್ತದೊಂದಿಗೆ ಸೇರಿ ಆರೋಗ್ಯ ಹೊಂದಿದ ಜೀವಕೋಶಗಳನ್ನು ಪ್ರವೇಶಿಸಿದಾಗ ಕ್ಯಾನ್ಸರ್ ಬರುತ್ತದೆ ಎಂದು ತಿಳಿಸಿದರು.
Advertisement
Advertisement
ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ವೈದ್ಯರು ಇಲಿಗಳಿಗೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ (R+Cu) ಪ್ರೊ-ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೊಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
Advertisement
R+Cu ಅನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಆಮ್ಲಜನಕ ಮುಕ್ತ ಕಣಗಳನ್ನು ಚಲಾವಣೆಯಲ್ಲಿರುವ ಕ್ರೊಮಾಟಿನ್ ಕಣಗಳನ್ನು ನಾಶಮಾಡುತ್ತವೆ ಮತ್ತು ‘ಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ ತಡೆಯುತ್ತದೆ ಎಂದು ಹೇಳಿದರು.
ಈ ಟ್ಯಾಬ್ಲೆಟ್ ಕ್ಯಾನ್ಸರ್ ಚಿಕಿತ್ಸೆಯ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಎರಡನೇ ಬಾರಿಗೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸುಮಾರು 30% ಪರಿಣಾಮಕಾರಿಯಾಗಿದೆ. ಇದು ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್‌ನ ಮೇಲೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸಿದರು.
ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ
ಈ ಮಾತ್ರೆ ಸೇವನೆಯ ಬಳಿಕ ಇಲಿಗಳು ಮತ್ತು ಮನುಷ್ಯರ ಮೇಲೆ ಆಗುವ ಅಡ್ಡ ಪರಿಣಾಮವನ್ನು ಪರೀಕ್ಷಿಸಲಾಗಿದೆ. ಮಾನವನ ಮೇಲಿನ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಐದು ವರ್ಷ ಬೇಕಾಯಿತು. ಸಂಶೋಧನೆಯ ಸಮಯದಲ್ಲಿ ಸವಾಲುಗಳು ಇದ್ದವು. ಈ ಸಂಶೋಧನೆ ಮಾಡುವಾಗ ಸಮಯ ಮತ್ತು ಹಣ ವ್ಯರ್ಥ ಎಂದು ಹಲವರು ಹೇಳಿದ್ದರು. ಆದರೆ ಇಂದು ನಾವೆಲ್ಲ ಸಂತೋಷವಾಗಿದ್ದು ದೊಡ್ಡ ಯಶಸ್ಸು ಸಿಕ್ಕಿದೆ ಎಂದು ವೈದ್ಯರು ಬಣ್ಣಿಸಿದರು.
ಕ್ಯಾನ್ಸರ್ ಎರಡನೇ ಬಾರಿ ಹೇಗೆ ಬರುತ್ತೆ?
ಕೆಲವೊಮ್ಮೆ ಕ್ಯಾನ್ಸರ್ ಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆ. ಇದನ್ನು ಕ್ಯಾನ್ಸರ್ ಮರುಕಳಿಸುವಿಕೆ ಎಂದು ಕರೆಯಲಾಗುತ್ತದೆ. ಮೂಲ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದ ವಾರ, ತಿಂಗಳುಗಳು ಅಥವಾ ವರ್ಷಗಳ ನಂತರವೂ ಇದು ಬರಹುದು.
ಕೆಲವು ರೀತಿಯ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ಎರಡನೇ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಗು, ಹದಿಹರೆಯ ಅಥವಾ ಯುವ ವಯಸ್ಕರಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದರೆ ಅಪಾಯವು ಹೆಚ್ಚು. ರೋಗಿಗೆ ಚಿಕಿತ್ಸೆ ಮುಗಿದ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.