ಮುಂಬೈ: ನಿನ್ನೆ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಹಿನ್ನೆಲೆ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ತಾವು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾಗ ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮನಿಶಾ ಕೊಯಿರಾಲಾ ಅವರು ಚಿಕಿತ್ಸೆಯ ವೇಳೆ ತಾವು ಎದುರಿಸಿದ ಕಠಿಣ ಸಮಯದ ಕುರಿತು ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದು, ಎಲ್ಲರಿಗೂ ಸ್ಪೂರ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ವಿರುದ್ಧ ಹೋರಾಡಿದ ಮನಿಶಾ ಅವರು ಚಿಕಿತ್ಸೆ ಪಡೆಯುತ್ತಿದ್ದಾಗ ತಮ್ಮ ಕೆಲವು ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು
View this post on Instagram
ಈ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು, ಕಠಿಣ ಸಮಯವನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನಾನು ಶುಭ ಹಾರೈಸುತ್ತೇನೆ. ನಿಮ್ಮ ಚಿಕಿತ್ಸೆ ಯಶಸ್ಸು ಆಗಲಿ ಎಂದು ನಾನು ಬಯಸುತ್ತೇನೆ. ಈ ಕಾಯಿಲೆಗೆ ಬಲಿಯಾದವರಿಗೆ ನಮನ ಸಲ್ಲಿಸುತ್ತ, ಗೆದ್ದು ಬಂದವರೊಂದಿಗೆ ಈ ಖುಷಿಯನ್ನು ಆಚರಿಸಿಲು ಇಷ್ಟ ಪಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
View this post on Instagram
ನಾವು ಈ ರೋಗದ ಬಗ್ಗೆ ಜಾಗೃತಿಯನ್ನು ಹರಡಬೇಕು. ರೋಗಿಗಳಿಗೆ ಭರವಸೆಯ ಮಾತುಗಳನ್ನು ಆಡಬೇಕು. ಈ ಕಾಯಿಲೆಯಿಂದ ಗೆದ್ದು ಬಂದವರು ಅವರ ಕಥೆಗಳನ್ನು ಹೇಳಬೇಕು. ಈ ಮೂಲಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಭರವಸೆ ಮೂಡಿಸಬೇಕು. ನಮ್ಮ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ದಯೆ ತೋರೋಣ. ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
2012ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಮನಿಷಾ ಕೆಲ ವರ್ಷಗಳ ಹಿಂದೆ ಆ ಕಾಯಿಲೆಯಿಂದ ಚೇತರಿಸಿಕೊಂಡಿದ್ದರು. ಅವರು ತಮ್ಮ ಆತ್ಮಚರಿತ್ರೆ ‘ಹೀಲ್ಡ್: ಹೌ ಕ್ಯಾನ್ಸರ್ ಗಿವ್ ಮಿ ಎ ನ್ಯೂ ಲೈಫ್’ ಎಂಬ ಪುಸ್ತಕವನ್ನು 8 ಜನವರಿ 2018 ರಂದು ಮುಂಬೈನಲ್ಲಿ ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾಗ ಅವರು ಅನುಭವಿಸಿದ ನೋವು, ಕಷ್ಟಗಳ ಕುರಿತು ಬರೆದಿದ್ದಾರೆ. ಇದನ್ನೂ ಓದಿ: ಹತ್ಯೆ ಪ್ರಕರಣ – ಆರು ಜನ ಹಂತಕರನ್ನು ಬಂಧಿಸಿದ ಕಲಬುರಗಿ ಪೊಲೀಸರು
Forever greatful for second chance to life ????????????????????????gm friends.. this is an amazing life and a chance to live a happy& healthy one ???????????? pic.twitter.com/LzCL25mWVc
— Manisha Koirala (@mkoirala) December 1, 2019
2019 ರಲ್ಲಿ, ನಟಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಸಮಯ ಟ್ವಿಟ್ಟರ್ ನಲ್ಲಿ, ನಾನು ಜೀವನ ನಡೆಸಲು ಮತ್ತೆ ಇನ್ನೊಂದು ಅವಕಾಶ ಸಿಕ್ಕಿದೆ. ಇದಕ್ಕೆ ನಾನು ಎಂದೆಂದಿಗೂ ಕೃತಜ್ಞಳಾಗಿರುತ್ತೇನೆ. ಶುಭೋದಯ, ಸ್ನೇಹಿತರೇ ಎಂದು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದರು.
ಮನಿಷಾ ಅವರು 1991 ರ ‘ಸೌದಾಗರ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ಅವರು 1942: ಎ ಲವ್ ಸ್ಟೋರಿ, ಬಾಂಬೆ, ಅಕೇಲೆ ಹಮ್ ಅಕೇಲೆ ತುಮ್, ಖಾಮೋಶಿ: ದಿ ಮ್ಯೂಸಿಕಲ್, ದಿಲ್ ಸೇ ಮತ್ತು ಮಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.