Connect with us

Latest

ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

Published

on

ವಿಜಯವಾಡ: ನಾಲಿಗೆ ಚಪ್ಪರಿಸಿ ಗುಂಟೂರು ಮೆಣಸಿನಕಾಯಿ ಉಪ್ಪಿನಕಾಯಿ ತಿನ್ನುವ ಮಂದಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಮೆಣಸಿನಕಾಯಿ ಮಾದರಿಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ವಿಷಕಾರಿ ಎಫ್ಲಾಟಾಕ್ಸಿನ್‍ಗಳು ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿವೆ ಎನ್ನುವ ಆತಂಕಕಾರಿ ವರದಿ ಪ್ರಕಟವಾಗಿದೆ.

ಕ್ಯಾನ್ಸರ್ ತರುವಂತಹ ಸಾಮಥ್ರ್ಯ ಹೊಂದಿರುವ ಫಂಗಸ್ ಅಥವಾ ಶಿಲೀಂಧ್ರ ದಲ್ಲಿರುವ ವಿಷಕಾರಿ ವಸ್ತುವೇ ಎಫ್ಲಾಟಾಕ್ಸಿನ್ ಆಗಿದ್ದು, ಈ ವಸ್ತು ಗುಂಟೂರು ಮೆಣಸಿನಕಾಯಿಯಲ್ಲಿದೆ ಎಂದು ಏಷ್ಯನ್ ಜರ್ನಲ್ ಆಫ್ ಫಾರ್ಮಾಸಿಟಿಕ್ಸ್ ಜರ್ನಲ್ ಹೇಳಿದೆ.

ಗುಂಟೂರು ಮೆಣಸಿನಕಾಯಿ ಸಾಕಷ್ಟು ರುಚಿ ಹಾಗೂ ತೀಕ್ಷ್ಣತೆಯಿದ್ದು, ಖಾರವಾಗಿರುತ್ತದೆ. ಹಾಗಾಗಿ ಈ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಸಿದ್ಧಿ ಪಡೆದಿದೆ.

ಗುಂಟೂರು ಜಿಲ್ಲೆಯೊಂದರಲ್ಲಿ ವಾರ್ಷಿಕವಾಗಿ ಸುಮಾರು 2.80 ಲಕ್ಷ ಟನ್ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಅಲ್ಲದೇ ಈ ಮೆಣಸಿಕಾಯಿಯನ್ನು ಇಂಗ್ಲೆಂಡ್, ಅಮೆರಿಕ ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮೆಣಸಿನಕಾಯಿಯನ್ನು ಮಣ್ಣಿನಲ್ಲಿ ಹರಡುವುದು, ಅವೈಜ್ಞಾನಿಕ ನಿರ್ವಹಣೆ ಹಾಗೂ ತೇವಾಂಶ ಒಟ್ಟುವಿಕೆಯಿಂದ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.

ಸಂಶೋಧಕರು ಎಫ್ಲಾಟಾಕ್ಸಿನ್ ಪತ್ತೆ ಹಚ್ಚಿ ವೈಜ್ಞಾನಿಕ ನಿರ್ವಹಣೆಯ ವಿಧಾನಗಳನ್ನು ಹೇಳಿದ್ದಾರೆ. ಈ ಮೆಣಸಿನಕಾಯಿಯನ್ನು ದಕ್ಷಿಣ ಭಾರತದ ಜನರು ಅಡುಗೆಗೆ ಬಳಸುತ್ತಾರೆ. ಹೆಚ್ಚಾಗಿ ತೆಲುಗು ಭಾಷೆಯವರು ಈ ಮೆಣಸಿನಕಾಯಿಯನ್ನು ಬಳಸುತ್ತಾರೆ. ಗುಂಟೂರು ಮೆಣಸಿನಕಾಯಿಯನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಮಚಿಲಿಪಟ್ಟಣದ ಕೃಷ್ಣಾ ವಿಶ್ವಾವಿದ್ಯಾನಿಲಯದ ಸಂಶೋಧಕರು, ವಿಜಯವಾಡದ ಕೆಬಿಎನ್‍ಬಿಜಿ ಕಾಲೇಜು ಹಾಗೂ ಪಿ.ಬಿ ಸಿದ್ಧಾರ್ಥ್ ಕಾಲೇಜು ಜೊತೆ ಸೇರಿ ಗುಂಟೂರು ನಗರದೆಲ್ಲೆಡೆ ಮೆಣಸಿನಕಾಯಿಯನ್ನು ಸ್ಯಾಂಪಲ್ ಪಡೆದು ಅಧ್ಯಯನ ನಡೆಸಿದ್ದಾರೆ. ಮೆಣಸಿನಕಾಯಿ ಮಣ್ಣಿನಲ್ಲಿ ಹೆಚ್ಚು ಇದ್ದರೆ ಅದು ಫಂಗಸ್ ಅಥವಾ ಶಿಲೀಂಧ್ರ ವಿಷಕಾರಿ ಅಂಶಗಳನ್ನು ಸೇರಿಸಿಕೊಳ್ಳಬಹುದು ಎಂದು ವರದಿಯಾಗಿದೆ. 7 ಸ್ಯಾಂಪಲ್‍ಗಳಲ್ಲಿ 5ರಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ ಪತ್ತೆಯಾಗಿದ್ದು, ಎಫ್ಲಾಟಾಕ್ಸಿನ್ ಮೆಣಸಿನಕಾಯಿಯಲ್ಲಿ ಸ್ವಲ್ಪವಿದ್ದರೂ ಇದು ಕ್ಯಾನ್ಸರ್ ತರುತ್ತದೆ. ಈ ಮೆಣಸಿನಕಾಯಿ ಹಿರಿಯರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ಎರಡು ವರ್ಷಗಳ ಹಿಂದೆ ಈ ಬಗ್ಗೆ ಕೇರಳ ಕೃಷಿ ಕಾಲೇಜಿನಲ್ಲಿ 51 ಗುಂಟೂರು ಮೆಣಸಿನಕಾಯಿ ಸ್ಯಾಂಪಲ್ ಅನ್ನು ಅಧ್ಯಯನ ನಡೆಸಲಾಗಿತ್ತು. ಈ ವೇಳೆ 21 ಮಾದರಿಗಳಲ್ಲಿ ಬೈಫೆಂಟ್ರಿನ್, ಈಥಿಯೋನ್, ಕ್ಲೋರಿಪಿರಿಫೊಸ್, ಸೈಪರ್ಮೆಥರಿನ್ ಹಾಗೂ ಮ್ಯಾಲಥಿಯಾನ್ ಎನ್ನುವ ವಿಷಕಾರಿ ಅಂಶಗಳು ಪತ್ತೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *