ಬೆಂಗಳೂರು: ಸ್ವಚ್ಛ, ಸ್ವಾಸ್ತ್ಯ, ಸುಂದರ ಬೆಂಗಳೂರು ನಿರ್ಮಾಣಕ್ಕಾಗಿ ಟೊಂಕಕಟ್ಟಿ ಶ್ರಮಿಸುತ್ತಿರುವ ನಮ್ಮ ಪೌರಕಾರ್ಮಿಕರಿಗಾಗಿ ಬಿಬಿಎಂಪಿ ಆವರಣದಿಂದ ವಾಕಥಾನ್ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲೇ ಈ ವಾಕಥಾನ್ ಆಯೋಜಿಸಲಾಗಿತ್ತು. ವಿಶೇಷವಾಗಿ ಪೌರ ಕಾರ್ಮಿಕರಿಗಾಗಿಯೇ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸಹ ಆಯೋಜನೆ ಮಾಡಲಾಗಿತ್ತು.
Advertisement
“ಸಂಕಲ್ಪ” ಚೇಸ್ ಕ್ಯಾನ್ಸರ್ ಫೌಂಡೇಶನ್ ಆ್ಯಂಡ್ ರೀಸರ್ಚ್ ಟ್ರಸ್ಟ್, ನವೋದಯನ್ಸ್ ನವೋದಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಈ ಜಾಗೃತಿ ವಾಕಥಾನ್ ಅನ್ನು ಆಯೋಜನೆ ಮಾಡಲಾಗಿತ್ತು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು “ಕ್ಯಾನ್ ವಾಕ್” 2020ಕ್ಕೆ ಚಾಲನೆ ನೀಡಲು ಸಚಿವ ಡಾ. ಸುಧಾಕರ್ ಬಂದಿದ್ದರು. ಸಚಿವ ಡಾ. ಸುಧಾಕರ್ ಕೆ, ಬಿಗ್ ಬಾಸ್ 7 ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಸೇರಿ ಹಲವರು ವಾಕಥಾನ್ ಅಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು.
Advertisement
Advertisement
ನಂತರ ಮಾತನಾಡಿದ ಸಚಿವ ಡಾ. ಕೆ ಸುಧಾಕರ್ ಕ್ಯಾನ್ಸರ್ ಜೊತೆ ಹೋರಾಡಬೇಕು ಎಂದರೆ ಮೊದಲಿಗೆ ಅದರ ಬಗ್ಗೆ ಅರಿವಿರಬೇಕು. ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಬೇಕು. ಜನರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮದ ಅಗತ್ಯವಿದೆ. ಯುವ ಜನತೆ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ. ವೈದ್ಯಕೀಯ ಸಚಿವನಾಗಿ, ಸ್ವತಃ ವೈದ್ಯನಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿಯಾಗಿದೆ ಎಂದರು.