ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡುವ ನಿಯಮ ರಾಜ್ಯದಲ್ಲೂ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸಾರಿಗೆ ಇಲಾಖೆಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಯೋಜನೆಯಡಿ ನೂತನ 65 ಅಂಬುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ನಿಯಮ ಪಾಲನೆ ಮಾಡುವಂತೆ ಜನರಿಗೆ ಕರೆ ಕೊಟ್ಟರು. ಹೊಸ 65 ಅಂಬುಲೆನ್ಸ್ ಸೇರ್ಪಡೆ ಆಗುತ್ತಿವೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಈ ಅಂಬುಲೆನ್ಸ್ ಕೊಡ್ತಿದ್ದೇವೆ.108 ಅಂಬುಲೆನ್ಸ್ ಕೆಲಸ ಮಾಡ್ತಿವೆ. ಇದರ ಜೊತೆಗೆ 65 ಅಂಬುಲೆನ್ಸ್ ಬರ್ತಿವೆ. 39 ಬೇಸಿಕ್ ಲೈಫ್ ಸಪೋರ್ಟ್, 26 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಅಂಬುಲೆನ್ಸ್‌ಗಳಾಗಿವೆ. ಅಡ್ವಾನ್ಸ್ಡ್ ಅಂಬುಲೆನ್ಸ್‌ನಲ್ಲಿ ವೆಂಟಿಲೇಟರ್ ಇರುತ್ತದೆ. ಅಪಘಾತಕ್ಕೆ ಈಡಾದವರಿಗೆ ಜೀವ ಉಳಿಸೋ ಕೆಲಸ ಮಾಡ್ತಾವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೂ ರಾಜ್ಯಪಾಲರು ರಿಪೋರ್ಟ್ ಕೇಳೋದು ಸರಿಯಲ್ಲ: ಸಿದ್ದರಾಮಯ್ಯ
Advertisement
Advertisement
ಪ್ರತಿ ವರ್ಷ 40 ಸಾವಿರ ಅಪಘಾತ ಆಗುತ್ತದೆ. ಇದರಲ್ಲಿ 10 ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಜಾಸ್ತಿ ಯುವಕರಿಗೆ, ಶಾಲಾ ಮಕ್ಕಳಿಗೆ ಅಪಘಾತ ಆಗ್ತಿದೆ. ಇದರಿಂದ ಅವರಿಂದ ಸಮಾಜಕ್ಕೆ ಆಗೋ ಒಳ್ಳೆ ಕೆಲಸ ಕಳೆದುಕೊಳ್ಳುತ್ತೇವೆ. ಹೀಗಾಗಿ ಸಾವು ತಡೆಯಲು ರಸ್ತೆ ಸುರಕ್ಷತಾ ಪ್ರಾಧಿಕಾರದ ನಿಧಿಯಿಂದ ವರ್ಷಕ್ಕೆ 45 ಕೋಟಿ ಹಣ ಆರೋಗ್ಯ ಇಲಾಖೆಗೆ ಕೊಡ್ತಾರೆ. ಇದರಲ್ಲಿ ಅಂಬುಲೆನ್ಸ್ ಖರೀದಿ ಮಾಡಿದ್ದಾರೆ. ಮುಂದಿನ ವರ್ಷದಿಂದ ಮತ್ತಷ್ಟು ಹಣ ಅಂಬುಲೆನ್ಸ್‌ಗೆ ಕೊಡ್ತೀವಿ ಎಂದರು.
Advertisement
ಅಪಘಾತದಿಂದ ಇಡೀ ಜೀವಮಾನ ನರಳಬೇಕಾಗುತ್ತವೆ. ಆಕ್ಸಿಡೆಂಟ್ ಆದ ಒಂದು ಗಂಟೆ ಬಹಳ ಮುಖ್ಯ. ಒಂದು ಗಂಟೆ ಒಳಗೆ ಚಿಕಿತ್ಸೆ ಸಿಕ್ಕರೆ ಪ್ರಾಣ ಉಳಿಸಬಹುದು. ಗೋಲ್ಡನ್ ಹವರ್ ತುಂಬಾ ಮುಖ್ಯ. ಈ ಸಮಯದಲ್ಲಿ ಜೀವ ಉಳಿಸಬಹುದು ಎಂದು ಸಿಎಂ ತಿಳಿಸಿದರು. ಅಪಘಾತ ಕಡಿಮೆ ಆಗಲು ಕಾರ್, ಸ್ಕೂಟರ್, ವಾಹನಗಳು ಓಡಿಸೋರು ನಿಯಮ ಪಾಲನೆ ಮಾಡಬೇಕು. ಬಳಹ ಜನ ಕುಡಿದು ಓಡಿಸ್ತಾರೆ. ಕುಡಿದು ಗಾಡಿ ಓಡಿಸೋದು ಅಪಾಯ ಅಂತಾ ಬೋರ್ಡ್ ಇದ್ದರೂ, ಅದನ್ನು ನೋಡಿಕೊಂಡೇ ಕುಡೀತಾರೆ. ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಬೋರ್ಡ್ ಹಾಕಿದ್ರೂ, ಅಲ್ಲೆ ಮೂತ್ರ ವಿಸರ್ಜನೆ ಮಾಡ್ತಾರೆ. ಇದು ನಮ್ಮ ಜನ. ನಮ್ಮ ಜನ ಚಾಪೆ ಕೆಳಗೆ ನುಗ್ಗದೇ ರಂಗೋಲೆ ಕೆಳಗೆ ನುಗ್ಗುತ್ತಾರೆ. ಇನ್ಮುಂದೆ ಎಲ್ಲರೂ ನಿಯಮಗಳನ್ನು ಪಾಲನೆ ಮಾಡಿ ಎಂದು ಕರೆಕೊಟ್ಟರು. ಇದನ್ನೂ ಓದಿ: ಅಪಘಾತಕ್ಕೀಡಾದವರ ರಕ್ಷಣೆಗೆ “ಆಪತ್ಕಾಲಯಾನ”: 65 ನೂತನ ಅಂಬುಲೆನ್ಸ್ ಚಾಲನೆ ನೀಡಿದ ಸಿಎಂ
Advertisement
ವಿದೇಶಗಳಲ್ಲಿ ನಿಯಮ ಪಾಲನೆ ಮಾಡದೇ ಹೋದ್ರೆ ಲೈಸೆನ್ಸ್ ರದ್ದು ಮಾಡ್ತಾರೆ. ನಮ್ಮಲ್ಲೂ ಲೈಸೆನ್ಸ್ ರದ್ದು ಮಾಡೋ ನಿಯಮ ಮಾಡಬೇಕು ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವರಿಗೆ ಸಿಎಂ ಸೂಚನೆ ನೀಡಿದರು. ಇನ್ಮುಂದೆ ನಿಯಮ ಪಾಲನೇ ಮಾಡದೇ ಹೋದ್ರೆ ನೋಟಿಸ್ ಕೊಡಬೇಡಿ, ಲೈಸೆನ್ಸ್ ಕ್ಯಾನ್ಸಲ್ ಮಾಡಿ. ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ. ಕುಡಿದು ವಾಹನ ಓಡಿಸೋದು, ವೇಗವಾಗಿ ಓಡಿಸೋರು ಸೇರಿ ನಿಯಮ ಪಾಲನೆ ಮಾಡದೇ ಹೋದರೆ ಲೈಸೆನ್ಸ್ ರದ್ದು ಮಾಡಿ ಎಂದು ಸಾರಿಗೆ ಇಲಾಖೆಗೆ ಸೂಚನೆ ಕೊಟ್ಟರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, MLC ನಾಗರಾಜ್ ಯಾದವ್ ಸೇರಿ ಹಲವರು ಭಾಗಿಯಾಗಿದ್ದರು.