ರಾಯಚೂರು: ಕಾಲುವೆಗೆ ಈಜಾಡಲು ಹೋಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವರಭೂಪುರ ಕಾಲುವೆ ಬಳಿ ನಡೆದಿದೆ. ಇದನ್ನೂ ಓದಿ: ನಿದ್ದೆ ಮಾಡುವುದಾಗಿ ಹೇಳಿ ಬೆಡ್‍ರೂಮ್‍ಗೆ ಹೋದ ಮಗಳು ದುರಂತ ಸಾವು
ಎರಡು ದಿನಗಳ ಹಿಂದೆ ಕಾಲುವೆಗೆ ಈಜಲು ತೆರಳಿದ್ದ ಲಿಂಗಸುಗೂರಿನ ಪಿಂಚಣಿಪುರ ನಿವಾಸಿ ರಾಮು(25) ನೀರುಪಾಲಾಗಿದ್ದ. ಬಳಿಕ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಇಂದು ಕಾಲುವೆ ಬಳಿ ರಾಮುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಗ್ರಾಹಕರಿಗೆ ಇನ್ನಷ್ಟು ಹೊರೆ- ಸಿಲಿಂಡರ್ ದರದಲ್ಲಿ 15 ರೂ. ಏರಿಕೆ ಇದನ್ನೂ ಓದಿ: ಅ.8ರಂದು ಸಿಎಂ ಮತ್ತೆ ದೆಹಲಿ ಪ್ರವಾಸ
ಸ್ನೇಹಿತರೊಂದಿಗೆ ಕಾಲುವೆಗೆ ಈಜಾಡಲು ತೆರಳಿದ್ದ ರಾಮು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದ. ಬಳಿಕ ಸ್ನೇಹಿತರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರು. ನಂತರ ಪೊಲೀಸರು ಆಗಮಿಸಿ ರಾಮುವಿನ ಪತ್ತೆಗಾಗಿ ಎರಡು ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು ಇಂದು ಶವ ಪತ್ತೆಯಾಗಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!