ಡೆಹ್ರಾಡೂನ್: ಪ್ರೀತಿಗೆ ಯಾವುದೇ ಗಡಿಯಿಲ್ಲ. ಪರಸ್ಪರರು ಪ್ರೀತಿಸಿದರೆ ದೇಶ, ಭಾಷೆ, ಗಡಿ ಎಲ್ಲವನ್ನೂ ಮೀರಿ ಒಂದಾಗಲು ಪ್ರಯತ್ನಿಸುತ್ತಾರೆ. ಅಂತೆಯೇ ಭಾರತೀಯ ಯುವತಿಯನ್ನು ಕೆನಡಾದ ಯುವಕ ಮದುವೆಯಾಗಿದ್ದಾನೆ. ಭಾರತೀಯ ಸಂಪ್ರದಾಯದಂತೆ ಯುವತಿಯ ಕೈ ಹಿಡಿದಿದ್ದಾನೆ.
ಕೆನಡಾದ ಶಾನ್ ತಾಯಿ ಕರೋಲ್ ಹ್ಯೂಸ್ ಅವರು ಕೆನಡಾದ ಹೌಸ್ ಆಫ್ ಕಾಮನ್ಸ್ ಸದಸ್ಯರಾಗಿದ್ದಾರೆ. ಫೆಡರಲ್ ಚುನಾವಣೆಗಳಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಭಾರತದ ಶೀತಲ್ ಅವರ ಮಾವ ಕೀತ್ ಹ್ಯೂಸ್ ಕೆನಡಾದ ನಿಕಲ್ ಮೈನಿಂಗ್‌ನಲ್ಲಿ ಅಧಿಕಾರಿಯಾಗಿದ್ದಾರೆ. ದೇಶ, ಸಂಪ್ರದಾಯದಲ್ಲಿ ಭಿನ್ನತೆ ಇದ್ದರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಇದನ್ನೂ ಓದಿ: ಹೀಗೊಂದು ಪ್ರೇಮ ಕಥೆ? – ಅವಳ ಗಂಡನನ್ನು ಇವಳು, ಇವಳ ಪತಿಯನ್ನು ಅವಳು ಮದುವೆಯಾದ್ರು!
Advertisement
Advertisement
ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ರಿಷಿಕೇಶದಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾನ್ ಭಾರತೀಯ ಸಂಪ್ರದಾಯದಂತೆ ಶೀತಲ್ ಅವರೊಂದಿಗೆ ಸಪ್ತಪದಿ ತುಳಿದರು.
Advertisement
ಶೀತಲ್ ಅವರ ತಂದೆ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಆಕೆಯ ಚಿಕ್ಕಪ್ಪ ನಟವರ್ ಶ್ಯಾಮ್ ಮತ್ತು ಅವರ ಕುಟುಂಬವನ್ನು ನೋಡಿಕೊಂಡರು. ಶೀತಲ್ ಅವರು ರಿಷಿಕೇಶದ ಓಂಕಾರಾನಂದ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ಕೆನಡಾದಲ್ಲಿ ಪಿಹೆಚ್‌ಡಿ ಮಾಡಿದ್ದರು. ಪ್ರಸ್ತುತ ಕೆನಡಾದಲ್ಲಿ ನೇತ್ರಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್ ಜೈನ್ ಯಾರು?
Advertisement
ಮದುವೆಯ ನಂತರ ಶಾನ್ ಭಾರತೀಯ ವೈದಿಕ ಸಂಪ್ರದಾಯ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪದ್ಧತಿಗಳಿಂದ ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನದಲ್ಲಿ ಅವಿಸ್ಮರಣೀಯವಾಗಿ ಉಳಿಯುತ್ತಾರೆ ಎಂದು ಹೇಳಿದರು.