ಒಟ್ಟಾವಾ: ನಾನು ಕೆನಡಾದ (Canada) ಮುಂದಿನ ಪ್ರಧಾನಿಯಾದ್ರೆ, ಭಾರತದ ಜೊತೆಗಿನ ವೃತ್ತಿಪರ ಸಂಬಂಧವನ್ನು (Professional Relationship) ಸ್ಥಾಪಿಸುವುದಾಗಿ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ (Pierre Poilievre) ಅವರು ಕೆನಡಾದಲ್ಲಿರುವ ಭಾರತೀಯ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ವಿಚಾರದಲ್ಲಿ ಉಭಯ ದೇಶಗಳ ನಡುವೆ ರಾಜತಾಂತಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವ ಕೆನಡಾ, ಅದರ ಬೆನ್ನಲ್ಲೇ ಭಾರತಕ್ಕೆ ಪ್ರಯಾಣಿಸುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಭಾರತದಲ್ಲಿನ ತನ್ನ ಬಹುತೇಕ ಎಂಬೆಸ್ಸಿ ಹಾಗೂ ಕಾನ್ಸುಲೇಟ್ಗಳನ್ನು ಮುಚ್ಚಿರುವ ಕೆನಡಾ, ಅಧಿಕ ಮಟ್ಟದಲ್ಲಿ ಜಾಗರೂಕತೆ ವಹಿಸುವಂತೆ ತನ್ನ ನಾಗರಿಕರಿಗೆ ಸಲಹೆ ಕೊಟ್ಟಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕ ಪೊಯ್ಲಿವ್ರೆ, ಕೆನಡಾದಲ್ಲಿ ನೆಲೆಸಿರುವ ಭಾರತೀಯ ರಾಜತಾಂತ್ರಿಕರಿಗೆ ತೋರುತ್ತಿರುವ ಆಕ್ರಮಣಶೀಲತೆಯ ನಡೆಯನ್ನ ಖಂಡಿಸಿದ್ದಾರೆ. ಇದನ್ನೂ ಓದಿ: ನಿಜ್ಜರ್ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ
Advertisement
Advertisement
ಈ ಕುರಿತು ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ ಪೊಯ್ಲಿವ್ರೆ, ಕೆನಡಾದ ಮುಂದಿನ ಪ್ರಧಾನಿಯಾದ್ರೆ, ಭಾರತದ ಜೊತೆಗಿನ ವೃತ್ತಿಪರ ಹಾಗೂ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸುತ್ತೇನೆ. ನಮಗೆ ಭಾರತ ಸರ್ಕಾರದ ಜೊತೆಗಿನ ವೃತ್ತಿಪರ ಸಂಬಂಧದ ಅಗತ್ಯವಿದೆ. ಏಕೆಂದರೆ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತವಾಗಿದೆ. ಇದು ನಮ್ಮ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನ ಹೊಂದಲು ಸಹಕಾರಿಯಾಗಿದೆ. ಆದ್ರೆ ನಾವು ವೃತ್ತಿಪರ ಸಂಬಂಧವನ್ನು ಹೊಂದಿರಲೇಬೇಕು. ನಾನು ಪ್ರಧಾನಿಯಾದ್ರೆ ಖಂಡಿತವಾಗಿಯೂ ಅದನ್ನು ಪುನರ್ಸ್ಥಾಪಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಭಾರತದಿಂದ ಕೆನಡಾದ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಶಾನಿ ಜಸ್ಟಿನ್ ಟ್ರುಡೊ ಕೆನಡಿಯರೇ ಪರಸ್ಪರ ವಿರುದ್ಧ ತಿರುಗಿಬೀಳುವಂತೆ ಮಾಡುತ್ತಿದ್ದಾರೆ. ಅಸಮರ್ಥರಾಗಿದ್ದು, ವಿದೇಶದಲ್ಲಿಯೂ ನಮ್ಮ ಸಂಬಂಧಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
ಜೊತೆಗೆ ನಿನ್ನೆಯಷ್ಟೇ ಒಟ್ಟಾವಾ, ಟೊರೆಂಟೊ ಮತ್ತು ವ್ಯಾಂಕೋವರ್ನಲ್ಲಿ, ಭಾರತದ ಚಾರಿಟಿಗಳಿಗೆ ವಿರುದ್ಧವಾಗಿ ನಡೆಸಿದ ಖಲಿಸ್ತಾನ್ ರ್ಯಾಲಿಯನ್ನ ಖಂಡಿಸಿದ್ದಾರೆ. ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್ ಫೋರ್ಡ್ ಪಟ್ಟಣದಲ್ಲಿರುವ ವೈಷ್ಣೋದೇವಿ ಹಿಂದೂ ದೇವಾಲಯದ ವೇಲೆ ಹಿಂದೂ ಹಾಗೂ ಭಾರತ ವಿರೋಧಿ ಪೋಸ್ಟರ್ಗಳಿಂದ ಅಪವಿತ್ರಗೊಳಿಸಿರುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು
Web Stories