ಒಟ್ಟಾವಾ: ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಪಾತ್ರವಹಿಸಿದ್ದ ನಾಲ್ಕನೇ ಭಾರತೀಯನನ್ನು ಕೆನಡಾ (Canada) ಅಧಿಕಾರಿಗಳು ಬಂಧಿಸಿದ್ದಾರೆ.
ಕೆನಡಾದ ಬ್ರಾಂಪ್ಟನ್, ಸರ್ರೆ ಮತ್ತು ಅಬಾಟ್ಸ್‌ಫೋರ್ಡ್ ಪ್ರದೇಶಗಳ ನಿವಾಸಿ ಅಮರ್‌ದೀಪ್ ಸಿಂಗ್ (22) ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ – 330 ಜನರ ದುರ್ಮರಣ
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿನ ಪಾತ್ರಕ್ಕಾಗಿ ಅಮರದೀಪ್ ಸಿಂಗ್‌ನನ್ನು ಮೇ 11 ರಂದು ಬಂಧಿಸಲಾಯಿತು ಎಂದು IHIT ತಿಳಿಸಿದೆ. ದಾಖಲೆ ಇಲ್ಲದ ಬಂದೂಕು ಹೊಂದಿದ್ದ ಆರೋಪಕ್ಕಾಗಿ ಆತ ಈಗಾಗಲೇ ಪೀಲ್ ಪ್ರಾದೇಶಿಕ ಪೊಲೀಸರ ವಶದಲ್ಲಿದ್ದ.
2023 ರ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಹೊರಗೆ ಹರ್ದೀಪ್ ನಿಜ್ಜರ್ (45) ಹತ್ಯೆಯಾಗಿತ್ತು. IHIT ತನಿಖಾಧಿಕಾರಿಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಭಾರತೀಯ ಪ್ರಜೆಗಳನ್ನು ಮೇ 3 ರಂದು ಬಂಧಿಸಿದ್ದಾರೆ. ಇದನ್ನೂ ಓದಿ: ಪಿಒಕೆ ನಿವಾಸಿಗಳ ಮೇಲೆ ಪಾಕ್ ದಬ್ಬಾಳಿಕೆ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ
ಕರಣ್ ಬ್ರಾರ್ (22), ಕಮಲಪ್ರೀತ್ ಸಿಂಗ್ (22) ಮತ್ತು 28 ವರ್ಷದ ಕರಣ್‌ಪ್ರೀತ್ ಸಿಂಗ್ ಬಂಧಿತರು. ಎಲ್ಲಾ ಮೂರು ಆರೋಪಿಗಳು ಎಡ್ಮಂಟನ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಾಗಿದ್ದು, ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿದ್ದಾರೆ.