ನವದೆಹಲಿ: ಭಯೋತ್ಪಾದನೆಯ ವಿಚಾರ ಬಂದಾಗ ಪಾಕಿಸ್ತಾನದ (Pakistan) ವಿರುದ್ಧ ಭಾರತ (India) ಕಠಿಣ ಪದಗಳನ್ನು ಬಳಸಿ ಕಿಡಿಕಾರುವುದು ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಕೆನಡಾ (Canada) ವಿರುದ್ಧ ಭಾರತ ಕಠಿಣ ಪದಗಳನ್ನು ಬಳಸಿ ದೂಷಿಸಿದೆ.
ಭಯೋತ್ಪಾದಕರಿಗೆ (Terrorists) ಕೆನಡಾ ಸುರಕ್ಷಿತ ನೆಲೆ ಒದಗಿಸಿದೆ ಎಂದು ಭಾರತ ನೇರಾನೇರವಾಗಿ ದೂಷಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ (Khalistani Terrorist Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ಬೆನ್ನಲ್ಲೇ ಭಾರತ ಕೆನಡಾವನ್ನು ಬಹಿರಂಗ ವೇದಿಕೆಯಲ್ಲಿ ಟೀಕಿಸಲು ಆರಂಭಿಸಿದೆ.
Advertisement
#WATCH | MEA Spokesperson Arindam Bagchi says, "Safe haven is being provided in Canada, we want the Canadian govt to not do so and take action against those who have terrorism charges or send them here to face justice…We've sought either extradition request or assistance… pic.twitter.com/0ikMJFu8M6
— ANI (@ANI) September 21, 2023
Advertisement
ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ, ಭಯೋತ್ಪಾದನೆಗೆ ನಮ್ಮ ನೆರೆಯ ಪಾಕಿಸ್ತಾನ ಪಶ್ಚಿಮಾತ್ಯ ದೇಶಗಳಿಗೆ ಧನಸಹಾಯ ಮತ್ತು ಬೆಂಬಲ ನೀಡುತ್ತದೆ. ಉಗ್ರರಿಗೆ ಕೆನಡಾ ಸೇರಿದಂತೆ ವಿದೇಶಗಳು ಕಾರ್ಯನಿರ್ವಹಿಸಲು ಸ್ಥಳಗಳನ್ನು ನೀಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆ – ಹೊಣೆ ಹೊತ್ತುಕೊಂಡ ಬಿಷ್ಣೋಯ್ ಗ್ಯಾಂಗ್
Advertisement
ಕೆನಡಾ ಸರ್ಕಾರವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ನೀಡಬಾರದು. ಭಯೋತ್ಪಾದನೆ ಆರೋಪಗಳನ್ನು ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಆರೋಪಗಳನ್ನು ಎದುರಿಸಲು ಅವರನ್ನು ಭಾರತಕ್ಕೆ ಕಳುಹಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
Advertisement
ಭಾರತವು ವರ್ಷ ವರ್ಷ ಕನಿಷ್ಠ 20-25 ವ್ಯಕ್ತಿಗಳನ್ನು ಹಸ್ತಾಂತರಿಸುವಂತೆ ಕೋರಿದೆ. ಆದರೆ ಕೆನಡಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಈ ವರ್ಷ ಜೂನ್ 18 ರಂದು ಇಬ್ಬರು ಅಪರಿಚಿತ ದುಷ್ಕರ್ಮಿಗಳಿಂದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾದಿಂದ ಭಾರತಕ್ಕೆ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ ಎಂದು ಬಾಗ್ಚಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕೆನಡಾ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಾವು ಈ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಸಿದ್ಧರಿದ್ದೇವೆ. ಆದರೆ ಇಲ್ಲಿಯವರೆಗೆ ನಮಗೆ ಕೆನಡಾದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಾಗ್ಚಿ ಹೇಳಿದರು.
ಭಾರತದ ಜೊತೆಗಿನ ವ್ಯಾಪಾರ ಒಪ್ಪಂದ ಮುಂದೂಡಿ, ಭಾರತದ ರಾಯಭಾರಿಯನ್ನು ಉಚ್ಛಾಟಿಸಿದ್ದ ಕೆನಡಾ ಸರ್ಕಾರಕ್ಕೆ ಭಾರತ ಮತ್ತೊಂದು ಪೆಟ್ಟು ನೀಡಿದೆ. ಭಾರತಕ್ಕೆ ಬರುವ ಕೆನಡಾ ಪ್ರಜೆಗಳಿಗೆ ವೀಸಾ ನೀಡಿಕೆಯನ್ನು ಕೇಂದ್ರ ಸರ್ಕಾರ ತಾತ್ಕಲಿಕವಾಗಿ ಸ್ಥಗಿತ ಮಾಡಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿ ಇರಲಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಜಿ-20 ಶೃಂಗಸಭೆಗೆ ಬರುವ ಮೊದಲು ಖಲಿಸ್ತಾನಿ ಉಗ್ರ ಪನ್ನೂ ಸೇರಿ ಹಲವರ ಜೊತೆ ಸಭೆ ಮಾಡಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
Web Stories