ಒಟ್ಟಾವಾ: ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ ನಡೆಸಿದ ಕೆನಡಾ ವೈದ್ಯನ ಪರಾವನಗಿಯನ್ನು ರದ್ದು ಮಾಡಲಾಗಿದೆ.
ಈ ಕೃತ್ಯವನ್ನು ಎಸಗಿದ 80 ವರ್ಷದ ಬರ್ನಾರ್ಡ್ ನಾರ್ಮನ್ ಬಾರ್ವಿನ್ ಅವರಿಗೆ ಕಾಲೇಜ್ ಆಫ್ ಫಿಸಿಶಿಯನ್ಸ್ ಆ್ಯಂಡ್ ಸರ್ಜನ್ಸ್ ಆಫ್ ಒಂಟಾರಿಯೊ ಶಿಸ್ತಿನ ಸಮಿತಿಯು 10 ಸಾವಿರ ಡಾಲರ್(6.93 ಲಕ್ಷ ರೂ.) ದಂಡವನ್ನು ವಿಧಿಸಿದೆ. ಜೊತೆಗೆ ಈ ಕೃತ್ಯವನ್ನು `ಭಯಾನಕ ಮತ್ತು ಖಂಡನೀಯ’ ಎಂದು ಪರಿಗಣಿಸಿ, ಬಾರ್ವಿನ್‍ಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
Advertisement
Advertisement
ರೋಗಿಗಳ ನಂಬಿಕೆಗೆ ದ್ರೋಹ ಬಗೆದಿದ್ದು, ಈ ಕೃತ್ಯದಿಂದ ಜನರು ಮತ್ತು ಅವರ ಕುಟುಂಬಗಳ ಮೇಲೆ ಆಳವಾದ ಪರಿಣಾಮ ಬೀರುತ್ತಿದೆ. ಇದು ತಲೆಮಾರುಗಳನ್ನು ವ್ಯಾಪಿಸುವಂತಹ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತಿದೆ ಎಂದು ಹೇಳಿ ಮೆಡಿಕಲ್ ರೆಗ್ಯುಲೇಟರ್ ತನ್ನ ನಿರ್ಧಾರವನ್ನು ಪ್ರಕಟಿಸಿದೆ.
Advertisement
ಮೂರು ಮಹಿಳೆಯರಿಗೆ ಸರಿಹೊಂದದ ವೀರ್ಯದಿಂದ ಕೃತಕವಾಗಿ ಗರ್ಭಧಾರಣೆ ಮಾಡಿದ ಆರೋಪ ಸಾಬೀತಾದ ಬಳಿಕ ಬಾರ್ವಿನ್ 2014ರಲ್ಲೇ ತನ್ನ ವೈದ್ಯಕೀಯ ಪರವಾನಗಿಯನ್ನು ತ್ಯಜಿಸಿದ್ದ. ಈ ವೇಳೆ ಸಣ್ಣ ತಪ್ಪಿನಿಂದಾಗಿ ಈ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದ. ಈಗ ಲೈಸೆನ್ಸ್ ರದ್ದುಗೊಳಿಸಲಾಗಿದ್ದು, ಹೊಸ ಅನ್ವೇಷಣೆಯನ್ನು ಮಾಡದಂತೆ ಮೆಡಿಕಲ್ ರೆಗ್ಯುಲೇಟರ್ ಎಚ್ಚರಿಸಿದೆ.
Advertisement
ಬಾರ್ವಿನ್ 50-100 ಜನರಿಗೆ ತಪ್ಪು ವೀರ್ಯ ಬಳಸಿರುವುದು ಬೆಳಕಿಗೆ ಬಂದಿದ್ದು, 11 ಪ್ರಕರಣಗಳಲ್ಲಿ ಬಾರ್ವಿನ್ ತನ್ನ ವೀರ್ಯ ಬಳಸಿ ಕೃತಕ ಗರ್ಭದಾರಣೆ ಮಾಡಿದ್ದಾನೆ. ಈ ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮಕ್ಕಳಲ್ಲಿ ಓರ್ವ ಯುವತಿ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದಾಳೆ. ತನ್ನ ಪೋಷಕರಿಗೆ ಈ ಕಾಯಿಲೆ ಇಲ್ಲ ಆದರೆ ತನಗೆ ಹೇಗೆ ಈ ಕಾಯಿಲೆ ಬಂತು ಎಂದು ಅವಳ ವಂಶ ವೃಕ್ಷದ ಬಗ್ಗೆ ಸಂಶೋಧನೆ ನಡೆಸಿದ ಬಳಿಕ ವೈದ್ಯನ ದುಷ್ಕೃತ್ಯ ಬೆಳಕಿಗೆ ಬಂದಿದೆ. ಜೊತೆಗೆ ಇನ್ನೊಬ್ಬರು ಉದರದ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.
ಈ ಬಗ್ಗೆ ಮಾತನಾಡಿದ ಯುವತಿ, ಬಾರ್ವಿನ್ ಈ ರೀತಿ ಕೃತ್ಯವೆಸೆಗಿರುವುದು ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ. ಇಷ್ಟು ವರ್ಷ ನನ್ನನ್ನು ಪ್ರೀತಿಯಿಂದ ಸಾಕಿದ ಅಪ್ಪ ನನ್ನ ತಂದೆಯಲ್ಲ ಎಂದು ಅರಿತ ಮೇಲೆ ಅವರ ಮನಸ್ಸಿಗೆ ನೋವಾಗಿದೆ. ನನ್ನ ತಾಯಿ ಕೂಡ ನೋವನ್ನು ಅನುಭವಿಸುತ್ತಿದ್ದಾರೆ. ವೈದ್ಯನ ಎಡವಟ್ಟಿಗೆ ನನ್ನ ರೀತಿ ಹಲವರು ಜನಿಸಿದ್ದಾರೆ. ಈವೆರೆಗೆ ವೈದ್ಯನ ಎಡವಟ್ಟಿನಿಂದ ಜನಿಸಿದ 15 ಮಂದಿಯನ್ನು ನಾನು ಪತ್ತೆ ಮಾಡಿದ್ದೇನೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.