ಚಂಡೀಗಢ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಮಾಡಿದ್ದು ನಾನೇ ಎಂದು ಕೆನಡಾದ ಗ್ಯಾಂಗ್‍ಸ್ಟಾರ್ ಬಹಿರಂಗವಾಗಿ ಹೇಳಿಕೊಂಡಿದ್ದಾನೆ.
ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಸಿಧು ಮೂಸೆ ವಾಲಾ ಹತ್ಯೆಯ ಮಾಡಿರುವುದಾಗಿ ಅವನೇ ಫೇಸ್‍ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾನೆ. ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್‍ಯ ಸಹವರ್ತಿ ಗೋಲ್ಡಿ ಬ್ರಾರ್, ಸಿಧು ಮೂಸೆ ವಾಲಾ ಮೇಲೆ ದಾಳಿ ಮಾಡಿರುವುದು ನಾವೇ ಎಂದು ಒಪ್ಪಿಕೊಂಡಿದ್ದಾನೆ. ಸಿಧು ಮೂಸೆ ವಾಲಾ ಹತ್ಯೆಯ ಹಿಂದೆ ಸಚಿನ್ ಬಿಷ್ಣೋಯ್ ಧತ್ತಾರನ್‍ವಾಲಿ, ಲಾರೆನ್ಸ್ ಬಿಷ್ಣೋಯ್ ಮತ್ತು ನಾನು ಇದ್ದೇವೆ ಎಂದು ಗೋಲ್ಡಿ ಬ್ರಾರ್ ಹೇಳಿದ್ದಾನೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
Advertisement
Advertisement
ವಿಕ್ಕಿ ಮಿದ್ದುಖೇರಾ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಾವು ಮೂಸೆ ವಾಲಾ ಅವರನ್ನು ಕೊಂದಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾನೆ.
Advertisement
ಕಾರಣವೇನು?
ಮೂಲಗಳ ಪ್ರಕಾರ, 2021 ಆಗಸ್ಟ್ 8 ರಂದು ಮೊಹಾಲಿಯಲ್ಲಿ ಹಗಲು ಹೊತ್ತಿನಲ್ಲಿ ವಿಕ್ಕಿ ಮಿದ್ದುಖೇರಾ ಕೊಲೆಯಾಗಿತ್ತು. ವಿಕ್ಕಿ ಪಂಜಾಬ್ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‍ಗೆ ತುಂಬಾ ಹತ್ತಿರವಾಗಿದ್ದನು. ಹತ್ಯೆಗೆ ಸಂಬಂಧಿಸಿದಂತೆ ಮೂಸೆ ವಾಲಾ ಮ್ಯಾನೇಜರ್ ಶಗನ್ ಪ್ರೀತ್ ಸಿಂಗ್ ಹೆಸರು ಕೇಳಿಬಂದಿತ್ತು. ಆದರೆ ಪೊಲೀಸರು ಶಗನ್ ಪ್ರೀತ್ ಸಿಂಗ್‍ನನ್ನು ಬಂಧಿಸುವ ಮೊದಲೇ ಭಾರತದಿಂದ ಆಸ್ಟ್ರೇಲಿಯಾಗೆ ಓಡಿ ಹೋಗಿದ್ದನು. ಅದಕ್ಕೆ ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು.
Advertisement
ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಗೋಲ್ಡಿ ಬ್ರಾರ್ ತಮ್ಮ ಸ್ವಂತ ಸಹೋದರ ಗುರ್ಲಾಲ್ ಬ್ರಾರ್ ಹತ್ಯೆಯ ಹಿಂದೆ ಸಿಧು ಮೂಸೆ ವಾಲಾ ಕೂಡ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ಮೂಸೆ ವಾಲಾ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ನಾವೇ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಗೋಲ್ಡಿ ಬ್ರಾರ್ ಆರೋಪಿಸಿದ್ದಾನೆ.
#WATCH | Punjab: A CCTV video shows two cars trailing Sidhu Moose Wala's vehicle moments before he was shot dead in Mansa district. pic.twitter.com/SsJag33XHb
— ANI (@ANI) May 30, 2022
ಪಂಜಾಬ್‍ನ ಪೊಲೀಸ್ ಮಹಾನಿರ್ದೇಶಕ ವಿಕೆ ಭಾವರಾ ಈ ಕುರಿತು ಮಾತನಾಡಿದ್ದು, ದಾಳಿಯಲ್ಲಿ ಕನಿಷ್ಠ ಮೂರು ಆಯುಧಗಳನ್ನು ಬಳಸಲಾಗಿದೆ. 30 ಸುತ್ತು ಗುಂಡು ಹಾರಿಸಲಾಗಿದೆ. ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಘೋಷಿಸಿದರು. ಇದನ್ನೂ ಓದಿ: 424 ವಿಐಪಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದ ಪಂಜಾಬ್ ಸರ್ಕಾರ
ನಡೆದಿದ್ದು ಏನು?
ಜವಾಹರ್ ಕೆ ಗ್ರಾಮದ ದೇವಸ್ಥಾನದ ಬಳಿ ಸಿಧು ಮೂಸೆ ವಾಲಾ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅವರ ಕಾರಿನ ಮೇಲೆ 10 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆ ಸುದ್ದಿ ತಿಳಿದು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಶಾಕ್ ಆಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದರು. ಕೃತ್ಯ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ಕೊಟ್ಟಿದ್ದರು. ಹತ್ಯೆ ಮಾಡಿದ ಆರೋಪಿಗಳೇ ನಾವೇ ಹತ್ಯೆ ಮಾಡಿದ್ದು, ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ನಮ್ಮ ಹಳೆ ವೈಷಮ್ಯ ಕಾರಣ ಎಂದು ತಿಳಿಸಿದ್ದಾರೆ.