ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನವು (Pakistan) ತನ್ನ ಚುನಾವಣೆಯಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ಕೆನಡಾ (Canada) ಆರೋಪಿಸಿದೆ. ಆದರೆ ಈ ಆರೋಪವನ್ನು ಭಾರತ ನಿರಾಕರಿಸಿದೆ.
2019 ಮತ್ತು 2021 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ರಹಸ್ಯ ಚಟುವಟಿಕೆ ನಡೆಸಿರುವ ಆರೋಪ ಹೊತ್ತಿವೆ. ವಿದೇಶಿ ಹಸ್ತಕ್ಷೇಪವನ್ನು ಪರಿಶೀಲಿಸುವ ಫೆಡರಲ್ ವಿಚಾರಣೆಯ ಭಾಗವಾಗಿ ಕೆನಡಾದ ಬೇಹುಗಾರಿಕಾ ಸಂಸ್ಥೆಯು ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ 2025 ರೊಳಗೆ ಭಾರತದೊಂದಿಗೆ ವಿಲೀನಗೊಳ್ಳುತ್ತೆ: ಜ್ಯೋತಿಷಿ ಭವಿಷ್ಯ
Advertisement
Advertisement
ಕೆನಡಾವು ತಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ತಿಳಿಸಿದೆ. ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್ (CSIS) ವರದಿಯು, ಕೆನಡಾದ ಚುನಾವಣಾ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಭಾರತ ಮತ್ತು ಪಾಕಿಸ್ತಾನದ ಸಂಘಟಿತ ಪ್ರಯತ್ನ ನಡೆಸಿದೆ ಎಂಬುದನ್ನು ಸೂಚಿಸಿದೆ. ಆದರೆ ಕೆನಡಾ ಆರೋಪವನ್ನು ಭಾರತ ‘ಆಧಾರ ರಹಿತ’ ಎಂದು ತಳ್ಳಿಹಾಕಿದೆ.
Advertisement
CSIS ದಾಖಲೆಗಳು, ಭಾರತ ಸರ್ಕಾರವು ಖಲಿಸ್ತಾನಿ ಚಳವಳಿ ಅಥವಾ ಪಾಕಿಸ್ತಾನ ಪರವಾದ ನಿಲುವುಗಳ ಬಗ್ಗೆ ಸಹಾನುಭೂತಿ ಹೊಂದಿರುವ ಭಾರತೀಯ ಮೂಲದ ಮತದಾರರಿಗೆ ಆಶ್ರಯ ನೀಡುವ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಕೇಜ್ರಿವಾಲ್ ಬಂಧನ ಖಂಡಿಸಿ ದೇಶಾದ್ಯಂತ ಎಎಪಿಯಿಂದ ಸಾಮೂಹಿಕ ಉಪವಾಸ
Advertisement
ಇತರ ರಾಷ್ಟ್ರಗಳ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ವಿಚಾರದಲ್ಲಿ ಬದ್ಧವಾಗಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿದೆ. ಕೆನಡಾದ ವಿದೇಶಿ ಮಧ್ಯಸ್ಥಿಕೆಯ ವಿಚಾರಣೆಯು ಎರಡು ದೇಶಗಳ ನಡುವಿನ ಈಗಾಗಲೇ ಸಂಬಂಧ ಹದಗೆಟ್ಟಿರುವುದನ್ನು ಮತ್ತಷ್ಟು ಹೆಚ್ಚಿಸಿದೆ.