ಇಡೀ ಭೂಮಿ ಈ ಮೊದಲು ವೆಪನ್ ವಾರ್, ಆ ನಂತರ ಬಯೋ ವಾರ್ ನೋಡಿತ್ತು. ಈಗ ಸೈಬರ್ ವಾರ್ ಶುರುವಾಗಿದೆ. ಇತ್ತೀಚೆಗಷ್ಟೇ ಲೆಬನಾನ್, ಸಿರಿಯಾ ದೇಶಗಳಲ್ಲಿ ಸಂಭವಿಸಿದ ಪೇಜರ್ (Pager), ವಾಕಿಟಾಕಿ, ಸೋಲಾರ್ ಪ್ಯಾನಲ್‌ನಂತಹ ಉಪಕರಣಗಳ ಸ್ಫೋಟ ವಿಶ್ವದಾದ್ಯಂತ ಎಚ್ಚರಿಕೆ ಸಂದೇಶ ರವಾನಿಸಿದೆ. ನಾವು ಬಳಸುವ ಎಲೆಕ್ಟ್ರಾನಿಕ್ ಡಿವೈಸ್, ಅದರಲ್ಲೂ ವಿಶೇಷವಾಗಿ ಮೊಬೈಲ್ ಫೋನ್‌ನಂತಹ ಸಂವಹನ ಸಾಧನಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಹುಟ್ಟುಹಾಕಿದೆ? ಒಂದು ಮಿಸೈಲ್ ಸ್ಫೋಟಗೊಳಿಸಿದಾಗ ಆಗುವ ಹಾನಿಗಿಂತ ಸ್ಮಾರ್ಟ್‌ಫೋನ್‌ನಿಂದ ಆಗುವ ಹಾನಿಯೇ ಹೆಚ್ಚಿರುತ್ತದೆ. ಅದಕ್ಕಾಗಿಯೇ ಈ ಯುಗವನ್ನು ʻಇನ್‌ಫರ್ಮೇಶನ್ ಏಜ್ʼ (Information Age) ಎಂದು ಕರೆದಿದ್ದಾರೆ.
ಪೇಜರ್ ಸ್ಫೋಟ ಸಂಭವಿಸಿದ ಬಳಿಕ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ (Smart Phone Hacking) ಮಾಡಿ ಸ್ಫೋಟಿಸಬಹುದು ಎಂಬ ವದಂತಿಗಳು ಎದ್ದಿವೆ. ಹ್ಯಾಕ್ ಮಾಡಿ ಸ್ಫೋಟಿಸಲು ಸಾಧ್ಯವೇ? ನಮ್ಮ ಶತ್ರುರಾಷ್ಟ್ರಗಳು ಹೀಗೆ ಮಾಡಿದರೆ ನಮ್ಮ ಗತಿಯೇನು? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…..
Advertisement
Advertisement
ಸದ್ಯಕ್ಕಿರುವ ತಂತ್ರಜ್ಞಾನದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಕೆಲವರ ವಾದ, ಆದ್ರೆ ಕ್ಷಣಕ್ಕೊಮ್ಮೆ ಕಸದಂತೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಹಣ ಕಳೆದುಕೊಂಡವರನ್ನು ನೋಡಿದಾಗ ಹ್ಯಾಕಿಂಗ್ ಇದೇ ಎಂಬ ಅನುಭವವೂ ಆಗುತ್ತದೆ. ಹಾಗಾಗಿಯೇ ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳು ಹಾಗೂ ಅವುಗಳನ್ನು ಬಳಸುವ ನಾವುಗಳು ಸಹ ಮುಂದೆ ಒಂದು ದಿನ ನಮ್ಮ ಶತ್ರು ರಾಷ್ಟ್ರದ ತಂತ್ರಜ್ಞರ ವಿಕೃತಿಗೆ ಬಲಿಯಾಗಲಿದ್ದೇವೆಯೇ ಎಂಬಿತ್ಯಾದಿ ಆತಂಕಗಳು ಮೂಡಿದೆ. ಇದಕ್ಕೆ ವಿಜ್ಞಾನಿಗಳು, ತಂತ್ರಜ್ಞರ ವಾದ ಏನಿದೆ? ಎಂಬುದನ್ನು ಮುಂದೆ ನೋಡಿ…
Advertisement
ಸಾಮಾನ್ಯವಾಗಿ ಪೇಜರ್‌ಗಳಲ್ಲಿ ಬಳಕೆಯಾಗುವುದು ಲೀಥಿಯಂ ಅಯಾನ್ ಬ್ಯಾಟರಿಗಳು (Lithium Ion Battery), ಕಡಿಮೆ ಅವಧಿಯಲ್ಲಿ ಬೇಗನೇ ಚಾರ್ಜ್ ಆಗುವಂಥವು. ಹೆಚ್ಚು ಕಾಲ ಚಾರ್ಚ್ ಅನ್ನು ಹಿಡಿದಿಟ್ಟುಕೊಳ್ಳುವಂಥ ಸಾಮರ್ಥ್ಯವಿರುವ ಈ ಬ್ಯಾಟರಿಗಳನ್ನು ಪೇಜರ್‌ಗಳಲ್ಲಿ ಮಾತ್ರವಲ್ಲ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಎಲ್ಲಾ ಬ್ಯಾಟರಿ ಆಧಾರಿತ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುತ್ತಿದೆ. ಬ್ಯಾಟರಿಗಳ ಇತಿಹಾಸದಲ್ಲೇ ಇವು ಈಗ ಅತ್ಯಂತ ಸುಧಾರಿತ ಬ್ಯಾಟರಿಗಳು. ಇವೇ ಬ್ಯಾಟರಿಗಳು ನಮ್ಮ ಸ್ಮಾರ್ಟ್ ಫೋನಿನಲ್ಲೂ ಇವೆ. ಪೇಜರ್‌ಗಳಿಗಿಂತ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸಂಖ್ಯೆಯಲ್ಲಿ ಬಳಕೆಯಲ್ಲಿವೆ ಹಾಗೂ ಅವು ರೇಡಿಯೋ ತರಂಗಗಳನ್ನು ಮೀರಿದ ಮೊಬೈಲ್ ನೆಟ್‌ವರ್ಕ್ ತರಂಗಗಳನ್ನು ಬಳಸುವುದರಿಂದ ಅವು ಹೆಚ್ಚು ಸಕ್ರಿಯವಾಗಬಲ್ಲದು. ಆದರೆ, ಇದಕ್ಕೂ ಹ್ಯಾಕರ್‌ಗಳ ಕಾಟ ಈಗಾಗಲೇ ಆರಂಭವಾಗಿದೆ. ಆದರೆ, ಆ ಹ್ಯಾಕರ್‌ಗಳು ಕೇವಲ ನಿಮ್ಮ ಮಾಹಿತಿ ಕದಿಯಲು (ಪೆಗಾಸಸ್ ಹಗರಣ) ಮತ್ತು ಹಣ ಕದಿಯಲು ಬಳಸುತ್ತಿದ್ದಾರೆ. ಕೆಲವು ದೇಶಗಳಲ್ಲಿ ಮೊಬೈಲ್ ಫೋನ್ ನಲ್ಲಿರುವ ಕ್ಯಾಮೆರಾಗಳನ್ನೇ ಸಿಸಿಟಿವಿ ಕ್ಯಾಮೆರಾಗಳಂತೆ ಅನ್ಯ ದೇಶದ ಹ್ಯಾಕರ್ ಗಳು ಬಳಸಿದ್ದೂ ಉಂಟು. 2018ರಲ್ಲಿ ಭಾರೀ ಸದ್ದು ಮಾಡಿದ್ದ ʻಇರುಂಬುತಿರೈʼ ತಮಿಳು ಚಿತ್ರ ಇದಕ್ಕೆ ಕನ್ನಡಿ ಹಿಡಿದಿತ್ತು.
Advertisement
ಹ್ಯಾಕರ್‌ಗಳ ವಿಚಾರ ಪಕ್ಕಕ್ಕಿಟ್ಟು ಯೋಚಿಸಿದರೂ ಮೊಬೈಲ್ ಫೋನ್‌ಗಳು ಸಹಜ ಬಳಕೆಯಲ್ಲಿದ್ದಾಗಲೇ ಹೀಟ್ ಆಗಿ ಸ್ಫೋಟಗೊಂಡಿರುವ ಉದಾಹರಣೆಗಳೂ ಇವೆ. ಈಗ ನಮ್ಮ ಮುಂದಿನ ಪ್ರಶ್ನೆಯೇನೆಂದರೆ, ವೈರಸ್ ಮೂಲಕ ನಮ್ಮ ಮೊಬೈಲ್ ಸ್ಫೋಟಗೊಳಿಸಲು ಸಾಧ್ಯವೇ ಎಂಬುದು. ಇದಕ್ಕೆ ಉತ್ತರ ಹೌದು, ಈಗಲ್ಲದಿದ್ದರೂ ಮುಂದೊಂದು ದಿನ ಅದು ಸಾಧ್ಯವಾಗಬಹುದು ಎನ್ನುತ್ತಾರೆ ಕೆಲವರು.
ಜ್ಯೂಸ್-ಜಾಕಿಂಗ್ ಅಂದ್ರೆ ಏನು?
ಕೆಲ ದಿನಗಳ ತಿಂಗಳುಗಳ ಹಿಂದೆ ಭಾರತ ಸರ್ಕಾರ ಸಾರ್ವಜನಿಕರ ಡೇಟಾ ಕದಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಜ್ಯೂಸ್ ಜಾಕಿಂಗ್ ದಂಧೆ ಹುಟ್ಟಿಕೊಡ್ಡಿಂದು ಅದರಿಂದ ಪಾರಾಗಲು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಜ್ಯೂಸ್ ಜಾಕಿಂಗ್ ಅಂದರೆ ಇದು ಸೈಬರ್ ದಾಳಿಯ ಒಂದು ತಂತ್ರ. ವೈರಸ್ ಇರುವ ಯುಎಸ್‌ಬಿ ಸ್ಟೇಷನ್‌ಗಳಲ್ಲಿ ಚಾರ್ಜಿಂಗ್ ಉಪಕರಣ ಬಳಸುವುದರಿಂದ, ಬಳಕೆದಾರರು ʻಜ್ಯೂಸ್-ಜಾಂಕಿಂಗ್ʼ ಎನ್ನುವ ಸೈಬರ್ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ. ಸೈಬರ್ ಖದೀಮರು ಬಳಕೆದಾರರ ದತ್ತಾಂಶಗಳನ್ನು (ಡೇಟಾ) ಕದಿಯಲು ಅಥವಾ ತಮ್ಮ ಉಪಕರಣಗಳಿಗೆ ಸಂಪರ್ಕಿಸಿರುವ ಮಾಲ್‌ವೇರ್‌ಗಳನ್ನು (ವೈರಸ್) ಬಳಕೆದಾರರ ಸಾಧನಗಳಲ್ಲಿ ಇನ್‌ಸ್ಟಾಲ್ ಮಾಡಲು ಈ ಚಾರ್ಜಿಂಗ್ ಸ್ಟೇಷನ್‌ಗಳನ್ನು ಬಳಸುತ್ತಾರೆ. ಈ ಬಗ್ಗೆ ಬಳಕೆದಾರರಿಗೆ ಸಣ್ಣ ಅನುಮಾನವೂ ಬಾರದಂತೆ ನೋಡಿಕೊಳ್ಳುತ್ತಾರೆ. ಈ ರೀತಿ ಸ್ಟೇಷನ್‌ಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಿದಾಗ ಸೈಬರ್ ಕಳ್ಳರು ಮೊಬೈಲ್‌ಗಳಿಂದ ಸುಲಭವಾಗಿ ಡೇಟಾಗಳನ್ನ ಎಗರಿಸುತ್ತಾರೆ. ಅಥವಾ ಸಂಪರ್ಕಿತ ಉಪಕರಣಗಳಲ್ಲಿ ಮಾಲ್‌ವೇರ್ ಅಥವಾ ransomware ಅನುಷ್ಟಾನಗೊಳಿಸುತ್ತಾರೆ. ಇದರಿಂದ ನಿಮ್ಮ ಪಾಸ್‌ವರ್ಡ್ ಲಾಕ್ ಓಪನ್ ಮಾಡಬಹುದು. ಬಳಿಕ ಡೇಟಾಗಳನ್ನ ಅಪಾಯಕಾರಿ ಕೃತ್ಯಗಳಿಗೆ ಬಳಸುವ ಸಾಧ್ಯತೆಗಳೂ ಇರುತ್ತವೆ ಎಂದೂ ಸಹ ಹೇಳಲಾಗಿದೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿತ್ತು. ಅನಗತ್ಯ ವೈರಸ್ ಇನ್‌ಸ್ಟಾಲ್ ಮಾಡುವ ಮೂಲಕ ಬ್ಯಾಟರಿ ಓವರ್ ಹೀಟ್ ಆದ್ರೆ ಮಾತ್ರ ಸ್ಫೋಟಿಸಬಹುದೇ ಹೊರತು, ಸ್ಫೋಟಕವನ್ನು ಬಳಸಿ ಮಾಡಲು ಸಾಧ್ಯವಿಲ್ಲ ಎಂದು ವರದಿಗಳು ಹೇಳಿವೆ.
ಸುರಕ್ಷಿತವಾಗುವುದು ಹೇಗೆ?
* ಎಲೆಕ್ಟ್ರಿಕಲ್ ವಾಲ್ ಔಟ್‌ಲೆಟ್‌ಗಳಿಗೆ (ಗೋಡೆಗಳಿಗೆ ಅಳವಡಿಸಿದ ಪ್ಲಗ್ ಪಾಯಿಂಟ್) ಗಳಿಂದ ಚಾರ್ಜ್ ಮಾಡುವುದಕ್ಕೆ ಆದ್ಯತೆ ನೀಡಿ.
* ಇಲ್ಲದಿದ್ದರೆ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್‌ಗಳನ್ನು ಜೊತೆಯಲ್ಲೇ ಕೊಂಡು ಹೋಗಿ.
* ನಿಮ್ಮ ಮೊಬೈಲ್ ಅನ್ನು ಲಾಕ್ ಮಾಡಿ ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರಿಂಗ್ ಮಾಡಲಾಗದಂತೆ ಆಯ್ಕೆಯಲ್ಲಿ ಡಿಸೆಬಲ್ ಮಾಡಿ
* ಚಾರ್ಜ್ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿರುವಂತೆ ನೋಡಿಕೊಳ್ಳಿ.
* ಒಂದು ವೇಳೆ ಸೈಬರ್ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಾಗ ಅಂತಗ ಘಟನೆಗಳನ್ನು www.cybercrime.gov.in ವೆಬ್‌ಸೈಟ್ ಮೂಲಕ ದೂರು ನೀಡಿ, ಅಥವಾ ಸಹಾಯವಾಣಿ 1930ಗೆ ಕರೆ ಮಾಡಿ.
ಕುತಂತ್ರಾಂಶಗಳಿವೆ ಎಚ್ಚರಿಕೆ
ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ನಮ್ಮ ಕೆಲಸದಲ್ಲಿ ಸಹಾಯಮಾಡಲು ತಂತ್ರಾಂಶಗಳು (ಸಾಫ್ಟ್‌ವೇರ್) ಇರುವ ಹಾಗೆ ನಮಗೆ ತೊಂದರೆ ಕೊಡುವ ವೈರಸ್, ವರ್ಮ್ ಮುಂತಾದ ಕುತಂತ್ರಾಂಶಗಳು (ಮಾಲ್‌ವೇರ್) ಕೂಡ ಇವೆ. ಇವುಗಳಿಂದ ಪಾರಾಗಲು ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ಯಾರೋ ಹೇಳಿದರೆಂದು ಸಿಕ್ಕಸಿಕ್ಕ ಆಪ್‌ಗಳನ್ನು, ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಬೇಡಿ. ಹಾಗೆಯೇ ಅಪರಿಚಿತರಿಂದ ಬರುವ ಮೆಸೇಜ್ ಅಥವಾ ಇಮೇಲ್‌ನಲ್ಲಿರುವ ಕೊಂಡಿಗಳ ಮೇಲೂ ಕ್ಲಿಕ್ ಮಾಡಬೇಡಿ, ಅದರಿಂದಲೂ ವೈರಸ್ ಬರಬಹುದು!
ಪಬ್ಲಿಕ್ ವೈಫೈ ಬಳಸುವ ಮುನ್ನ ಎಚ್ಚರ!
ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಅಭ್ಯಾಸ ಇದೀಗ ವ್ಯಾಪಕವಾಗುತ್ತಿದೆ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಇನ್ನು ನಮ್ಮ ಮನೆಗಳಲ್ಲಿ ವೈ-ಫೈ ಸಂಪರ್ಕ ಇರುತ್ತದಲ್ಲ, ಅದನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಬೇರೆಯವರಿಂದ ಅದರ ದುರುಪಯೋಗ ಆಗದಂತೆ ನೋಡಿಕೊಳ್ಳಲು ನಮ್ಮ ಪಾಸ್‌ವರ್ಡ್ ಅನ್ನು ಜೋಪಾನ ಮಾಡಿಕೊಳ್ಳುವುದೂ ಅನಿವಾರ್ಯ.