ಮೇಟಿ ಸಿಡಿ ನೋಡಿದ್ರಾ? ನನ್ನದು ಸೆಕ್ಸ್ ಸಿಡಿ ಇದೆಯಂತೆ, ನಾನು ಗಂಡಸು ತಾನೇ: ಶಾಸಕ ವರ್ತೂರು ಪ್ರಕಾಶ್

Public TV
1 Min Read
Vartur Prakash

ಕೋಲಾರ: ಒಂದಿಲ್ಲೊಂದು ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಕೋಲಾರದ ಪಕ್ಷೇತರ ಶಾಸಕ ಆರ್.ವರ್ತೂರು ಪ್ರಕಾಶ್ ಹೊಸತೊಂದು ಬಾಂಬ್ ಸಿಡಿಸಿದ್ದಾರೆ.

ನನ್ನದು ಅಶ್ಲೀಲ ಸಿಡಿ ಇದೆಯಂತೆ, ಅದನ್ನ ನನ್ನ ವಿರೋಧಿಗಳು ಬಿಡುಗಡೆ ಮಾಡ್ತೀನಿ ಅಂತಾ ಹೇಳಿತ್ತಿದ್ದಾರಂತೆ, ರಿಲೀಸ್ ಮಾಡಲಿ ಬಿಡಿ ನಾನು ಗಂಡಸೇ ಅಲ್ವಾ ಅಂತಾ ಹೇಳಿದ್ದಾರೆ.

ಕೋಲಾರದ ಬೈರೇಗೌಡ ನಗರದ ತಮ್ಮ ನಿವಾಸ ಸಮೀಪ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನ ಕರೆದಿರುವ ಶಾಸಕ ವರ್ತೂರು ಪ್ರಕಾಶ್ ಹೀಗೊಂದು ಗೊಂದಲದ ಹೇಳಿಕೆ ನೀಡಿದ್ದಾರೆ. ನನ್ನ ವಿರೋಧಿಗಳು ಹಾಗೂ ವಿರೋಧ ಪಕ್ಷದವರು ಕ್ಷೇತ್ರದಲ್ಲಿ ಹೀಗೊಂದು ಸುದ್ದಿ ಹರಡಿಸಿದ್ದಾರೆ ಎಂದು ಹೇಳಿದ್ದಾರೆ.

vlcsnap 2018 03 10 15h52m21s482

ರಿಲೀಸ್ ಮಾಡ್ಲಿ ಬಿಡಿ ನಾನು ಗಂಡಸು ಆಲ್ಲವಾ? ಸಿಡಿಯಲ್ಲಿ ಏನಿದೆ ಅಂಥ ನೋಡೋಣ ಎಂದು ಸ್ವತಃ ಸಿಡಿ ಇರುವ ಬಗ್ಗೆ ಹೇಳಿಕೆ ನೀಡಿದರಲ್ಲದೆ, ಸಿಡಿ ಬಿಡುಗಡೆ ಮಾಡಲಿ ನೋಡೋಣ ಎಂದು ಶಾಸಕರು ಸವಾಲು ಎಸೆದಿದ್ದಾರೆ.

ಅಶ್ಲೀಲ ಸಿಡಿ ಬಿಡುಗಡೆಯಾದ ಶಾಸಕರು ಮತ್ತೊಮ್ಮೆ ಶಾಸಕರಾಗಿದ್ದಾರೆ ಎನ್ನುವ ಮೂಲಕ ಸಿಡಿ ಬಿಡುಗಡೆಯಾದ ಶಾಸಕರ ಪರವಾಗಿ ಬ್ಯಾಟ್ ಬೀಸಿದರು. ಮಾಜಿ ಸಚಿವ ಹೆಚ್.ವೈ.ಮೇಟಿ ಸಿಡಿ ನೋಡಿದ್ದಿರಲ್ಲ, ಸಿಡಿ ಹೊರಗಡೆ ಬಂದ ಮೇಲೆ ಮೇಟಿ ಎಪಿಎಂಸಿ ಗೆದ್ದಕೊಂಡ್ರು ಮತ್ತೆ ಬಾಗಲಕೋಟೆಯಲ್ಲಿ ಎಂಎಲ್‍ಎ ಅಗುತ್ತಾರೆ ಎಂದು ಭವಿಷ್ಯ ನುಡಿದ್ರು.

ನನ್ನ ವಿರೋಧಿಗಳು ರಾಜಕೀಯವಾಗಿ ನನ್ನನ್ನು ಮುಗಿಸಲು ಹಲವು ಪ್ರಯತ್ನಗಳನ್ನ ಮಾಡುತ್ತಿದ್ದಾರೆ, ನನ್ನ ವಿರುದ್ಧ ಜಾತಿ ನಿಂದನೆ ಸೇರಿದಂತೆ ಲೋಕಾಯುಕ್ತ, ಭೂ-ಕಬಳಿಕೆ ಪ್ರಕರಣಗಳನ್ನ ದಾಖಲಿಸಿದ್ದಾರೆ. ಕ್ಷೇತ್ರದ ಜನರು ತಲೆ ತಗ್ಗಿಸುವಂತಹ ಕೆಲಸವನ್ನು ನಾನು ಮಾಡಿಲ್ಲ ಮತ್ತು ಮುಂದೆಯೂ ಮಾಡೋದಿಲ್ಲ. ಏನೇ ಆದ್ರೂ ಕ್ಷೇತ್ರದ ಜನ ನನ್ನ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

https://youtu.be/fB20oIuMqSc

Share This Article
Leave a Comment

Leave a Reply

Your email address will not be published. Required fields are marked *