ಮಗಳ ಮದುವೆಯಲ್ಲಿ ಅಳದೇ ಇರೋಕೆ ಆಗುತ್ತಾ? : ಆಮೀರ್ ಖಾನ್

Public TV
2 Min Read
ira khan 4

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ, ಅವರೊಂದಿಗೆ ಸಖತ್ ಭಾವನಾತ್ಮಕ ಸಂಬಂಧ ಇರಿಸಿಕೊಂಡಿದ್ದಾರೆ. ಅದರಲ್ಲೂ ಮೊದಲನೇ ಪತ್ನಿ ಮಗಳು ಇರಾ ಖಾನ್ ಅಂದರೆ, ಆಮೀರ್ ಗೆ ಅಭಿಮಾನ ಪ್ರೀತಿ. ಇರಾ ಖಾನ್ ಮದುವೆ ಸದ್ಯದಲ್ಲೇ ನಡೆಯಲಿದೆ. ಅದೊಂದು ಎಮೋಷನಲ್ ಸನ್ನಿವೇಶ. ಕಂಡಿತಾ ಕಣ್ಣೀರು ಬರತ್ತೆ ಎಂದು ಹೇಳಿಕೊಂಡಿದ್ದಾರೆ ಆಮೀರ್.

ira khan 1

ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan)  ಮದುವೆ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಕುಟುಂಬದಿಂದ ಅಧಿಕೃತ ಮಾಹಿತಿ ಇರದೇ ಇದ್ದರೂ, ಅಕ್ಟೋಬರ್ 3ರಂದು ಇರಾ ಮತ್ತು ನೂಪುರ್ ಶಿಖಾರೆ ರಿಜಿಸ್ಟರ್ ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು 2024ರಲ್ಲಿ ಈ ಜೋಡಿ ಮದುವೆಯಾಗಲಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ ಬದುಕಿಗೆ ಕಾಲಿಡಲಿದ್ದಾರೆ ಎಂದು ಸ್ವತಃ ಆಮೀರ್ ಖಾನ್ ಹೇಳಿಕೊಂಡಿದ್ದಾರೆ.

ira khan

ಕಳೆದ ವರ್ಷ ನವೆಂಬರ್ ನಲ್ಲಿ ನಿಶ್ಚಿತಾರ್ಥ (Engaged) ಮಾಡಿಕೊಂಡು, ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ಅವರು ಘೋಷಣೆ ಮಾಡಿತ್ತು ಈ ಜೋಡಿ. ಇದೀಗ ಇರಾ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಾಗಂತ ರಿಜಿಸ್ಟರ್ ಮದುವೆಯಷ್ಟೇ ಆಗುವುದಿಲ್ಲವಂತೆ. ರಿಜಿಸ್ಟರ್ ಮದುವೆಯ ನಂತರ ಉದಯಪುರದಲ್ಲಿ (Udaipur) ಸಂಪ್ರದಾಯಿಕವಾಗಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಒಟ್ಟು ಮೂರು ದಿನಗಳ ಕಾಲ ಈ ಮದುವೆ ನಡೆಯಲಿದೆ ಎಂದು ಅವರು ಆಪ್ತರು ಮಾಹಿತಿ ನೀಡಿದ್ದಾರೆ. ಮದುವೆಗೆ ಖ್ಯಾತ ತಾರೆಗಳು ಆಗಮಿಸಲಿದ್ದು, ಆ ಪಟ್ಟಿ ಕೂಡ ಸಿದ್ಧವಾಗಿದೆಯಂತೆ.

ira khan and nupur shikhare 1

ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇದೀಗ ಮತ್ತೊಂದು ಹಂತ ಪಡೆದುಕೊಂಡಿದೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಸತಿ ಪತಿಯಾಗಲು ಹೊರಟಿದೆ.

ira khan and nupur shikhare 4

ನೂಪುರ್ ಶಿಖಾರೆ (Nupur Shikhare) ಮತ್ತು ಇರಾ ಖಾನ್ ಪ್ರೀತಿಗೆ ಹಲವು ವರ್ಷಗಳು. ಆಕೆಗೆ ಫಿಸಿಕಲ್ ಟ್ರೈನರ್ ಆಗಿದ್ದ ನೂಪುರ್ ನನ್ನು ಇರಾ ಇಷ್ಟಪಡುತ್ತಾಳೆ. ಅವನ ಜೊತೆಯೇ ಹಲವು ಟ್ರಿಪ್ ಗಳನ್ನು ಕೂಡ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಮನೆಯಲ್ಲೇ ಹಲವು ದಿನಗಳಿಂದ ವಾಸಿಸುತ್ತಿದ್ದರು. ಇದೊಂದು ಸಹಜೀವನ ಎಂದೇ ಬಾಲಿವುಡ್ ಮಾತಾಡಿಕೊಂಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡುವಂತಹ ಕೆಲಸವನ್ನು ಈ ಜೋಡಿ ಮಾಡಿದೆ.

ira khan and nupur shikhare 2

ಇರಾ ಹುಟ್ಟು ಹಬ್ಬವನ್ನು ಆಚರಿಸಿಕೊಂಡಾಗ ಮತ್ತು ಪೂಲ್ ಸೈಡ್ ಪಾರ್ಟಿ ಮಾಡಿದಾಗಲೂ ನೂಪುರ್ ಶಿಖಾರೆ ಜೊತೆಯಲ್ಲೇ ಇದ್ದರು. ಅಲ್ಲದೇ ಈಜುಕೊಳದಲ್ಲಿ ಇಬ್ಬರೂ ತಬ್ಬಿಕೊಂಡ ಫೋಟೋವನ್ನು ಸ್ವತ: ಇರಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನಿಶ್ಚಿತಾರ್ಥಕ್ಕಿಂತ ಮುಂಚೆನೇ ಈ ಜೋಡಿ ಸಖತ್ ಫೇಮಸ್ ಮತ್ತು ವೈರಲ್ ಕೂಡ ಆಗಿತ್ತು. ಬಹಿರಂಗವಾಗಿಯೇ ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು.

 

ಕೊನೆಗೂ ತಾನು ಮೆಚ್ಚಿದ್ದ ಮತ್ತು ಜೊತೆ ಜೊತೆಯಲ್ಲೇ ಓಡಾಡುತ್ತಿದ್ದ ಹುಡುಗನನ್ನೇ ಮದುವೆ ಆಗುತ್ತಿರುವ ಇರಾ ಬಗ್ಗೆ ಬಾಲಿವುಡ್ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ಈ ಜೋಡಿಗೆ ಶುಭ ಹಾರೈಸಿದೆ. ಮೆಚ್ಚಿದವರ ಜೊತೆಯೇ ಜೀವನ ನಡೆಸುವುದು ಸಂತೋಷಕ್ಕೆ ಮಹಾದಾರಿಯನ್ನುವ ಸಂದೇಶವನ್ನೂ ಈ ಜೋಡಿ ನೀಡಿದೆ.

Web Stories

Share This Article