ಈರುಳ್ಳಿ ಗೊಜ್ಜನ್ನು ಸಾಮಾನ್ಯವಾಗಿ ಎಲ್ಲರೂ ರುಚಿ ನೋಡಿರುತ್ತೀರಿ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಗೊಜ್ಜನ್ನು ತುಂಬಾ ಕಡಿಮೆ ಜನರು ತಿಂದಿರುತ್ತಾರೆ. ಅಲ್ಲದೇ ಈ ಗೊಜ್ಜು ಎಷ್ಟೂ ರುಚಿಯಾಗಿರುತ್ತೆ ಎಂದ್ರೆ ನೀವೇ ಇಷ್ಟಪಟ್ಟು ಪದೇ-ಪದೇ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಬಾಯಲ್ಲಿ ನೀರು ಬರುತ್ತಿದ್ಯ, ಹಾಗಾದ್ರೆ ಓದಿ ಮನೆಯಲ್ಲಿ ಟ್ರೈ ಮಾಡಿ.
Advertisement
ಬೇಕಾಗಿರುವ ಪದಾರ್ಥಗಳು:
* ಕಟ್ ಮಾಡಿದ ಸ್ಪ್ರಿಂಗ್ ಈರುಳ್ಳಿ – 2 ಕಪ್
* ಕಟ್ ಮಾಡಿದ ಟೊಮೆಟೊ – 1 ಕಪ್
* ಬೆಲ್ಲ – 2-3 ಟೀಸ್ಪೂನ್
* ಹುಣಸೆ ಹಣ್ಣಿನ ತಿರುಳು – 1 ಟೀಸ್ಪೂನ್
* ಅರಿಶಿನ – 1/4 ಟೀಸ್ಪೂನ್
* ತೆಂಗಿನ ತುರಿ – 1 ಕಪ್
* ಕಪ್ಪು ಅಲಸಂಡೆ ಕಾಳು – 2 ಟೀಸ್ಪೂನ್
Advertisement
* ಬೆಳೆ – 1 ಟೀಸ್ಪೂನ್
* ಮೆಂತ್ಯ ಬೀಜಗಳು – 1/4 ಟೀಸ್ಪೂನ್
* ಜೀರಿಗೆ – 1/2 ಟೀಸ್ಪೂನ್
* ಎಳ್ಳು – 1/5 ಟೀಸ್ಪೂನ್
* ಕೆಂಪು ಮೆಣಸಿನಕಾಯಿ – 4-8
* ಕರಿಬೇವಿನ ಎಲೆಗಳು – 5 ರಿಂದ 10
* ತುಪ್ಪ / ಎಣ್ಣೆ – 2-3 ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ರುಚಿಗೆ ಉಪ್ಪು
Advertisement
Advertisement
ಮಾಡುವ ವಿಧಾನ:
* ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಪ್ಪು ಅಲಸಂದೆ ಕಾಳು, ಬೆಳೆ, ಮೆಂತ್ಯ ಬೀಜಗಳು, ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ತುಪ್ಪ, ಸಾಸಿವೆ ಹಾಕಿ ಫ್ರೈ ಮಾಡಿ. ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
* ಅದಕ್ಕೆ ತೆಂಗಿನಕಾಯಿ ಸೇರಿಸಿ ಮತ್ತು ಅದನ್ನು ಹುರಿಯಿರಿ. 1 ನಿಮಿಷದ ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ.
* ಮುಂದೆ, ಅದೇ ಬಾಣಲೆಯಲ್ಲಿ ಎಳ್ಳನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿದು ಅದನ್ನು ರುಬ್ಬಿ ಮಸಾಲೆಗೆ ಮಿಶ್ರನ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನೀರು ಸೇರಿಸಿ, ನಯವಾದ ಪೇಸ್ಟ್ ಮಾಡಿ.
* ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಕಟ್ ಮಾಡಿದ ಸ್ಪ್ರಿಂಗ್ ಆನಿಯನ್ಸ್ ಮತ್ತು ಟೊಮೆಟೊಗಳನ್ನು 3-5 ನಿಮಿಷಗಳ ಕಾಲ ಸ್ವಲ್ಪ ಅರಿಶಿನ ಸೇರಿಸಿ ಹುರಿಯಿರಿ.
* ಹುರಿದ ತರಕಾರಿಗಳಿಗೆ ರುಬ್ಬಿದ ಮಸಾಲಾ, ಬೆಲ್ಲ, ಉಪ್ಪು ಮತ್ತು ಹುಣಸೆಹಣ್ಣು ಸೇರಿಸಿ. 1/2 ಕಪ್ ನೀರು ಸೇರಿಸಿ ಗ್ರೇವಿ ದಪ್ಪವಾಗುವವರೆಗೆ ಕುದಿಸಿ.
* ಇನ್ನೊಂದು ಪಾತ್ರೆಯಲ್ಲಿ ಸಾಸಿವೆ, ಹಿಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಇದನ್ನು ಸ್ಪ್ರಿಂಗ್ ಈರುಳ್ಳಿ ಗೊಜ್ಜುನ ಮೇಲೆ ಹಾಕಿ.
– ಅಂತಿಮವಾಗಿ ಅನ್ನ/ ರೊಟ್ಟಿ/ ದೋಸೆ/ ಇಡ್ಲಿಯೊಂದಿಗೆ ಸ್ಪ್ರಿಂಗ್ ಈರುಳ್ಳಿ ಗೊಜ್ಜು ಬಿಸಿ ಇರುವಾಗಲೇ ಬಡಿಸಿ.