ಹಾಲಿವುಡ್ ಸಿನಿಮಾಗಳಲ್ಲಿ ನಟ/ನಟಿಯರು ವೈನ್ ಕುಡಿಯುವ ದೃಶ್ಯಗಳು ಇರೋದು ಕಾಮನ್. ವೈನ್ ಅನ್ನೋದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅದು ಅಲ್ಲಿನ ಟ್ರೆಂಡ್ ಕೂಡ ಹೌದು. ಎಷ್ಟೋ ಸಲ ವೈನ್ ಅನ್ನು ಇತರೆ ಮದ್ಯಗಳಿಗೆ ಹೋಲಿಕೆ ಮಾಡೋದು ಸಾಮಾನ್ಯ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಎಂದು ಭಾವಿಸಿರುವ ಅನೇಕ ಮಂದಿ, ಇತರೆ ಮದ್ಯಗಳ ಸಾಲಿಗೆ ವೈನ್ ಅನ್ನೂ ಸೇರಿಸಿ ಬಿಡ್ತಾರೆ.
ವೈನ್ (Wine) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮಾತು ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ಇದು ಸತ್ಯ. ಅದರಲ್ಲೂ ರೆಡ್ ವೈನ್ (Red Wine) ಮಿತವಾದ ಸೇವನೆಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತೆ ಅಂತಾ ಸಂಶೋಧನೆಗಳು ತಿಳಿಸಿವೆ. ವೈನ್ ನಮ್ಮ ದೇಹಕ್ಕೆ ಅದ್ಭುತ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಹೃದಯದ ಆರೋಗ್ಯವನ್ನು (Heart Health) ಸುಧಾರಿಸುತ್ತೆ. ಜೊತೆಗೆ ದೀರ್ಘಾಯುಷ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇಂತಹ ಆರು ಅದ್ಭುತ ಪ್ರಯೋಜನಗಳು ವೈನ್ ಸೇವಿಸುವವರಿಗೆ ಸಿಗುತ್ತೆ. ಅದು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?
ಹೃದಯದ ಆರೋಗ್ಯ ಸುಧಾರಣೆ
ವೈನ್ ಮಿತವಾದ ಸೇವನೆ ಹೃದಯದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ವೈನ್‌ನಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಪಾಲಿಫಿನಾಲ್‌ಗಳ ಹೆಚ್ಚಿನ ಸಾಂದ್ರತೆಯಿದೆ ಎಂದು ಸಂಶೋಧನೆ ತಿಳಿಸಿದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ. ವೈನ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿಗಳು ಹೇಳಿವೆ.
ಮೂಳೆಗಳು ಬಲಗೊಳ್ಳುತ್ತವೆ
ನಿಮಗೆ ಗೊತ್ತೆ! ವೈನ್ ಸೇವನೆಯು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಧ್ಯಮ ಪ್ರಮಾಣದಲ್ಲಿ ವೈನ್ ಸೇವಿಸುವವರಲ್ಲಿ ಮೂಳೆ ಖನಿಜ ಸಾಂದ್ರತೆಯು ಅಧಿಕವಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಬಿಳಿ ವೈನ್‌ಗಿಂತ ರೆಡ್ ವೈನ್ ಮೂಳೆಗಳಿಗೆ ಹೆಚ್ಚು ಪ್ರಯೋಜನಕಾರಿ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
ಒತ್ತಡ ನಿವಾರಣೆ
ವೈನ್‌ನಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡವನ್ನು ನಿವಾರಿಸುತ್ತದೆ. ವೈನ್ ಸೇವನೆ ಮಿತವಾಗಿರಬೇಕು. ಅತಿಯಾದ ಸೇವನೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗಮನಿಸಬೇಕಾದ ಅಂಶ.
ಕರುಳಿನ ಆರೋಗ್ಯ ಚೆನ್ನಾಗಿರುತ್ತೆ
ವೈನ್ ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ವೈನ್‌ನಲ್ಲಿರುವ ಪಾಲಿಫಿನಾಲ್‌ಗಳು ಪ್ರಿಬಯಾಟಿಕ್ ಆಗಿ ಕೆಲಸ ಮಾಡುತ್ತದೆ. ಆ ಮೂಲಕ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ.
ಬೇಗ ವಯಸ್ಸಾಗಲ್ಲ
ವೈನ್ ಸೇವನೆಯು ದೀರ್ಘಾಯುಷ್ಯವನ್ನು ನೀಡುತ್ತದೆ. ಮೃದುವಾದ ಮತ್ತು ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ನಿಮ್ಮ ತಲೆಗೂದಲು ಆರೋಗ್ಯಕರ, ಹೊಳಪಿನಿಂದ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮುಖದ ಮೇಲೆ ಸುಕ್ಕುಗಳಿಲ್ಲದಂತೆ ಮಾಡುತ್ತದೆ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?
ಮೆದುಳು ಆರೋಗ್ಯ ಸುಧಾರಣೆ
ರೆಡ್ ವೈನ್ ರೆಸ್ವೆರಾಟ್ರೊಲ್ ಅನ್ನು ಹೊಂದಿರುತ್ತದೆ. ಇದು ಮೆದುಳಿಗೆ ಆಗಬಹುದಾದ ಹಾನಿಯನ್ನು ನಿಯಂತ್ರಿಸುತ್ತದೆ. ವೈನ್ ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಆರೋಗ್ಯವನ್ನು ಇನ್ನಷ್ಟು ಸುಧಾರಿಸುತ್ತದೆ. ಜೊತೆಗೆ ದೃಷ್ಟಿ ದೋಷ ಸಮಸ್ಯೆ ನಿವಾರಿಸುತ್ತದೆ.
ಮುಂದಿನ ಬಾರಿ ನೀವು ಕುಡಿಯಲು ಯೋಜಿಸುವಾಗ, ಒಂದು ಲೋಟ ವೈನ್ ಅನ್ನು ಆರಿಸಿಕೊಳ್ಳಿ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಶಿಫಾರಸು ಮಾಡಿದಂತೆ, ಪುರುಷರಿಗೆ ದಿನಕ್ಕೆ ಎರಡು ಗ್ಲಾಸ್ ಮತ್ತು ಮಹಿಳೆಯರು ದಿನಕ್ಕೆ ಒಂದು ಗ್ಲಾಸ್ ವೈನ್ ಸೇವಿಸುವುದು ಉತ್ತಮ. ಅತಿಯಾದ ಮದ್ಯಪಾನವು ಹಾನಿಕಾರಕ. ಯಕೃತ್ತಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್ ಗುಣಗಳೇನು ಗೊತ್ತಾ?
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Can you be more specific about the content of your article? After reading it, I still have some doubts. Hope you can help me. https://www.binance.info/en-IN/register-person?ref=UM6SMJM3