ಬೆಂಗಳೂರು: ತನಿಖೆ ನಡೆಯುತ್ತಿದ್ದರೂ ಸಂಬಂಧಿತರು ಸೈಟ್ ವಾಪಸ್ ಕೊಟ್ಟರೆ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಮೈಸೂರಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಘನಂದನ್ ಹೇಳಿದ್ದಾರೆ.
ಸಿಎಂ ಪತ್ನಿ ಸೈಟ್ ವಾಪಸ್ ನೀಡುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾರ್ವತಮ್ಮ ಸಿದ್ದರಾಮಯ್ಯ (Parvathi Siddaramaiah) ಅವರು ಈಗ ಸ್ವ ಇಚ್ಛೆಯಿಂದ ಸೈಟ್ ವಾಪಸ್ ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ. ಈಗ 14 ನಿವೇಶನ ಮುಡಾ ವ್ಯಾಪ್ತಿಗೆ ಬಂದಿವೆ. ಈ ಸೈಟ್‌ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಂಚಬಾರದ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಪಾರ್ವತಿ ಅವರ ಸೈಟ್‌ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಅಂತಿಮ ಹಂತದ ಚುನಾವಣೆ ಸಂಪನ್ನ – ಶೇ.65ಕ್ಕೂ ಹೆಚ್ಚು ಮತದಾನ
Advertisement
Advertisement
ಇನ್ನು ಈ ಕುರಿತು ಮೈಸೂರು ಮುಡಾ (MUDA) ಕಾರ್ಯದರ್ಶಿ ಪ್ರಸನ್ನ ಕುಮಾರ್ ಪ್ರತಿಕ್ರಿಯಿಸಿ, 1991ನ ರೂಲ್ಸ್ 8ನಲ್ಲಿ ಸ್ವ ಇಚ್ಚೆಯಿಂದ ಸೈಟ್ ಕೊಡಬಹುದು. ಆ ಸೈಟ್ ಅನ್ನು ನಾವು ಪಡೆದುಕೊಳ್ಳಲು ಅವಕಾಶವಿದೆ. ನಮ್ಮ ಬಳಿ ಮಾಲೀಕರು ಬಂದಿಲ್ಲ. ಅವರೇ ಖಾಸಗಿಯಾಗಿಯೂ ಅಧಿಕಾರಿಗಳನ್ನು ಕರೆಸಿಕೊಳ್ಳಬಹುದು. ಅದರಂತೆ ಅವರ ಸ್ಥಳಕ್ಕೆ ಹೋಗಿ ಪ್ರಕ್ರಿಯೆ ನಡೆಸಲಾಗುತ್ತದೆ. ನಾವು ಈಗ ಸೈಟ್ ವಾಪಸ್ ಪಡೆದುಕೊಂಡಿದ್ದೇವೆ. ಈಗ ಇದನ್ನು ರಿಜಿಸ್ಟರ್‌ಗೆ ಕಳುಹಿಸಿಕೊಟ್ಟಿದ್ದೇವೆ. ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ರಿಜಿಸ್ಟರ್ ಮಾಡುತ್ತಾರೆ ಎಂದರು. ಇದನ್ನೂ ಓದಿ: 2 ವರ್ಷಗಳ ನಂತ್ರ ಭೇಟಿಯಾದ ಗೆಳೆಯನೊಂದಿಗೆ ಸೆಕ್ಸ್ – ರಕ್ತಸ್ರಾವದಿಂದ ಯುವತಿ ಸಾವು
Advertisement
Advertisement
24 ಗಂಟೆಯಲ್ಲಿ ಕಾನೂನು ಪ್ರಕಾರ ರದ್ದು ಮಾಡುವ ಅವಕಾಶವಿದೆ. ನಮ್ಮಲ್ಲಿ ಇರುವ ವಕೀಲ ತಜ್ಞರ ಬಳಿಯೂ ಕೇಳಿದ್ದೇವೆ. ಅವರು ಸಹ ಅನುಮತಿ ಇದೆ ಎಂದು ಹೇಳಿದ್ದಾರೆ. ಇದರಿಂದ ಮುಡಾಗೆ ಆದಾಯವು ಸಹ ಇದೆ. ಯಾರೇ ಸೈಟನ್ನು ವಾಪಸ್ ಕೊಟ್ಟರೆ ಇಷ್ಟೇ ವೇಗವಾಗಿ ಮಾಡುತ್ತೇವೆ. ಈ ರೀತಿ ಬಂದರೆ ಮುಡಾ ಆರ್ಥಿಕವಾಗಿ ಸಬಲವಾಗುತ್ತೆ. ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ. ಮುಡಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ ಎಂದು ಪ್ರಸನ್ನ ಕುಮಾರ್ ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ