ಸಿಎಂರನ್ನು ಜಿಲ್ಲಾ ಮಟ್ಟದ ಅಧಿಕಾರಿ ವಿಚಾರಣೆ ಮಾಡಲು ಸಾಧ್ಯನಾ?: ಬಿಜೆಪಿ ಶಾಸಕ ಶ್ರೀವತ್ಸ

Public TV
1 Min Read
TS Srivatsa BJP MLA

– ರಾಜೀನಾಮೆ ಕೊಟ್ಟು ವಿಚಾರಣೆಗೆ ಬರಲಿ

ಮೈಸೂರು: ಸಿಎಂ (Siddaramaiah) ರಾಜೀನಾಮೆ ಕೊಟ್ಟು ವಿಚಾರಣೆಗೆ ಬರಬೇಕು. ಸಿಎಂ ಸ್ಥಾನದಲ್ಲಿ ಇರುವವರನ್ನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಪ್ರಶ್ನೆ ಮಾಡಲು ಸಾಧ್ಯನಾ? ಅಂತಹ ಧೈರ್ಯ ಅಧಿಕಾರಿಗಳಿಗೆ ಇರುತ್ತಾ? ಎಂದು ಮೈಸೂರಿನ (Mysuru) ಬಿಜೆಪಿ ಶಾಸಕ ಶ್ರೀವತ್ಸ (T. S. Srivatsa) ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂರನ್ನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಕಠಿಣ ವಿಚಾರಣೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡುವುದೇ ತಪ್ಪು. ಸಿಎಂಗೆ ವಿಚಾರಣೆ ವೇಳೆ ಇರಿಸುಮುರಿಸು ಮಾಡಬೇಡಿ ಎಂದು ಲೋಕಾಯುಕ್ತ ಎಸ್ಪಿಗೆ ಗೃಹ ಇಲಾಖೆಯ ನಿರ್ದೇಶನ ಇರುತ್ತದೆ ಎಂದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; 10 ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

ಮುಖ್ಯಮಂತ್ರಿಯವರನ್ನು ವಿಚಾರಣೆ ಮಾಡುವ ಎಸ್ಪಿ ಸಿಎಂ ಪತ್ನಿಯನ್ನು ಯಾಕೆ ಕಚೇರಿಗೆ ವಿಚಾರಣೆಗೆ ಕರೆದಿಲ್ಲ? ಕದ್ದುಮುಚ್ಚಿ ಯಾಕೆ ವಿಚಾರಣೆ ಮಾಡಿದ್ದಾರೆ? ಇದನ್ನೆಲ್ಲಾ ನೋಡಿದರೆ ನ್ಯಾಯಾಲದ ನಿರ್ದೇಶನಕ್ಕೋಸ್ಕರ ಮಾಡುತ್ತಿರುವ ಹಾಗಿದೆ. ಇದು ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಬಿಜೆಪಿ ಬುಧವಾರ ಮೈಸೂರಿನಲ್ಲಿ ಬೆಳಗ್ಗೆ 9:30ರಿಂದ ‘ಗೋ ಬ್ಯಾಕ್ ಸಿಎಂ’ ಚಳವಳಿ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕುಡಿಯಲು ಹಣ ನೀಡದ್ದಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಕೊಂದ ಮಗ

Share This Article