ವಾಷಿಂಗ್ಟನ್: ಇಲ್ಲಿಯವರೆಗೆ ನಾನು ಡೆಮಾಕ್ರಟಿಕ್ ಪರವಾಗಿ ಮತ ಹಾಕುತ್ತಿದ್ದೆ. ಇನ್ನು ಮುಂದೆ ರಿಪಬ್ಲಿಕ್ ಪರವಾಗಿ ಮತ ಹಾಕುತ್ತೇನೆ ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.
ನಾನು ಇನ್ನು ರಿಪಬ್ಲಿಕ್ ಪಕ್ಷಕ್ಕೆ ಮತ ಹಾಕುತ್ತೇನೆ. ಏಕೆಂದರೆ ಅದು ತುಂಬಾ ದಯೆಯುಳ್ಳ ಪಕ್ಷ ಎಂದಿದ್ದಾರೆ. ಮಸ್ಕ್ ಅವರ ಈ ಹೇಳಿಕೆಯಿಂದ ಟೆಸ್ಲಾ ಕಂಪನಿ ಷೇರು ಮೌಲ್ಯ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಶೇ.7.51 ರಷ್ಟು ಇಳಿಕೆಯಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ
Advertisement
In the past I voted Democrat, because they were (mostly) the kindness party.
But they have become the party of division & hate, so I can no longer support them and will vote Republican.
Now, watch their dirty tricks campaign against me unfold … ????
— Elon Musk (@elonmusk) May 18, 2022
Advertisement
ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಈ ಹಿಂದೆ ನಾನು ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಿದ್ದೇನೆ. ಆಗ ಅವರು ದಯೆಯುಳ್ಳ ಪಕ್ಷವಾಗಿತ್ತು. ಈಗ ದ್ವೇಷದ ಪಕ್ಷವಾಗಿ ವಿಭಜನೆಯಾಗುತ್ತಿದೆ. ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಆದ್ದರಿಂದ ರಿಪಬ್ಲಿಕ್‌ಗೆ ಮತ ಹಾಕುತ್ತೇನೆ. ಇನ್ನು ಮುಂದೆ ನನ್ನ ವಿರುದ್ಧ ನಡೆಸುವ ಕ್ಯಾಂಪೇನ್ ತಂತ್ರಗಳು ಹಾಗೂ ರಾಜಕೀಯ ದಾಳಿಗಳನ್ನು ನೋಡಬಹುದು. ಬರುವ ಚುನಾವಣೆಯಲ್ಲಿ ನಾನು ರಿಪಬ್ಲಿಕನ್ನರಿಗೆ ಮತ ಹಾಕುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ
Advertisement
Political attacks on me will escalate dramatically in coming months
— Elon Musk (@elonmusk) May 18, 2022
Advertisement
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಟ್ವಿಟ್ಟರ್ ಹೇರಿದ ನಿಷೇಧವನ್ನು ರದ್ದು ಮಾಡುತ್ತೇನೆ. ನಾನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.