ಬೆಂಗಳೂರು: ಅಕ್ರಮವಾಗಿ ಗಣಿ ಭೂಮಿ ಮಂಜೂರು ಆರೋಪದಲ್ಲಿ ಚಾರ್ಜ್‌ಶೀಟ್‌ನಲ್ಲಿ ಹೆಸರು ಇರುವ ಕುಮಾರಸ್ವಾಮಿ (H.D.Kumaraswamy) ಅವರು ಕೇಂದ್ರ ಸಚಿವರಾಗಬಹುದಾ ಎಂದು ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕುಮಾರಸ್ವಾಮಿ ಬಹಳ ದೊಡ್ಡ ನಾಯಕರಿದ್ದಾರೆ. ದಯವಿಟ್ಟು ಕೇಂದ್ರ ಸಚಿವರಾಗಿ ಮೇಕೆದಾಟಿಗೆ ಅನುಮತಿ ಕೊಡಿಸಲಿ. ಕೆಲವೊಮ್ಮೆ ರಾಜಕೀಯದಲ್ಲಿ ಯೋಗ್ಯತೆಗಿಂತ ಹೆಚ್ಚು ಯೋಗ ಬೇಕಾಗುತ್ತದೆ. ಇಬ್ಬರು ಸಂಸದರನ್ನು ಇಟ್ಟುಕೊಂಡು ಇವರು ಕೇಂದ್ರ ಸಚಿವರಾಗಿದ್ದಾರೆ. ಅದು ಅವರ ಯೋಗ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ
ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪಗಳಿವೆ. ಲೋಕಾಯುಕ್ತ ತನಿಖಾ ಸಂಸ್ಥೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯುಷನ್ ಕೇಳಿದೆ. ಇದನ್ನು ತಿರುಚಿ ಅವರು ಮಾತನಾಡುತ್ತಿದ್ದಾರೆ. ಲೋಕಾಯುಕ್ತ ಚಾರ್ಜ್‌ಶೀಟಲ್ಲಿ ಕಾನೂನುಬಾಹಿರ ರೆಕಮಂಡೇಷನ್ ಇದೆ ಎಂದು ಪ್ರಸ್ತಾಪ ಮಾಡಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಭ್ರಷ್ಟಾಚಾರದ ಹೆಸರು ಇರುವವರು ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದಾ ಎಂದು ಪ್ರಶ್ನಿಸಿದ್ದಾರೆ.
ವಿನಯ್ ಗೋಯೆಲ್ ಫ್ರಾಡ್. ಅವನು ಗಣಿಗೆ ಅರ್ಜಿಯೇ ಹಾಕಿರಲಿಲ್ಲ. ಕುಮಾರಸ್ವಾಮಿ ಅವನಿಗೆ ಅನುಕೂಲ ಮಾಡಿಕೊಡಲು ಗಣಿ ಸಂಪತ್ತು, ಅದಕ್ಕೆ ಕಾನೂನುಬಾಹಿರ ಅನುಮತಿ ನೀಡಿದ್ದರು. ಚಾರ್ಜ್‌ಶೀಟಲ್ಲಿ ಹೆಸರು ಇರುವವರು ಮಂತ್ರಿ ಆಗಬಹುದಾ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ