ರಾಮನಗರ: ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ ಎಂದು ಪ್ರಚಾರಕ್ಕೆ ಬಂದ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಮಹಿಳೆಯರು (Women) ತರಾಟೆ ತೆಗೆದುಕೊಂಡಿದ್ದಾರೆ.
Advertisement
ರಾಮನಗರ (Ramanagara) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಾದಿಗೆರೆ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ನಿಖಿಲ್‌ಗೆ ಗ್ರಾಮದ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೇ ನಿಮ್ಮ ತಾಯಿ ಬಂದು ಗುದ್ದಲಿ ಪೂಜೆ ಮಾಡಿದ್ದರು. ಆದರೆ ಕೆಲಸ ಪೂರ್ಣ ಆಗದೇ ಅರ್ಧಕ್ಕೆ ನಿಂತಿದೆ. ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಹೀಗಿದ್ದಮೇಲೆ ನಾವು ಮತ ಹಾಕಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: UPSCಯಿಂದ ನೇಮಕಗೊಂಡ ಅಧಿಕಾರಿಗಳು ಡಕಾಯಿತರು: ಕೇಂದ್ರ ಸಚಿವ
Advertisement
Advertisement
ಈ ವೇಳೆ ಸಮಾಧಾನದಿಂದಲೇ ಮಹಿಳೆಯರ ಅಳಲು ಆಲಿಸಿದ ನಿಖಿಲ್ ಕುಮಾರಸ್ವಾಮಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸದ್ಯ ಮಹಿಳೆಯರು ನಿಖಿಲ್ ಅವರನ್ನು ತರಾಟೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹ್ಯಾಟ್ರಿಕ್ ಸಾಧನೆ ಮಾಡ್ತಾರಾ ಹೆಚ್‍ಕೆ ಪಾಟೀಲ್? – ಕಾಂಗ್ರೆಸ್ ಕೋಟೆ ಛಿದ್ರ ಮಾಡುತ್ತಾ ಬಿಜೆಪಿ?