ಮೈಸೂರು: ಹೊಸತೊಡಕು ಹಿನ್ನೆಲೆಯಲ್ಲಿ ಮಾಂಸ ಖರೀದಿ ಜೋರಾಗಿ ನಡೆಯುತ್ತಿದೆ. ಈ ನಡುವೆ ಮುಸ್ಲಿಂ ಬಾಂಧವರ ನಡುವೆ ಸಾಮರಸ್ಯ ಸಾರಿ, ಹಲಾಲ್ ಕಟ್ ಮಾಂಸ ಖರೀದಿಗೆ ಉತ್ತೇಜನ ನೀಡಲು ಪ್ರಗತಿಪರರು ವಿಶೇಷ ಅಭಿಯಾನವನ್ನೇ ಆರಂಭಿಸಿದ್ದಾರೆ. ಮಾಂಸದ ಅಂಗಡಿಗಳಲ್ಲೂ ಬೇವು-ಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದಾರೆ.
ಮೈಸೂರಿನಲ್ಲಿ ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರತಿಪರ ಸಂಘಟನೆಗಳಿಂದ ಮೈಸೂರಿನ ಉದಯಗಿರಿ ರಸ್ತೆಯಲ್ಲಿರುವ ಮುಸ್ಲಿಂ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸುವ ಅಭಿಯಾನವೂ ನಡೆದಿದೆ. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ
ಸಾಹಿತಿ ದೇವನೂರ ಮಹಾದೇವ, ಸಮಾಜವಾದಿ ಪ.ಮಲ್ಲೇಶ್, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಿ.ಮರಂಕಯ್ಯ, ಬಸವರಾಜು, ಕಲ್ಲಹಳ್ಳಿ ಕುಮಾರ ಅವರು ಅಜೀಜ್ ಸೇಠ್ ಮುಖ್ಯ ರಸ್ತೆಯಲ್ಲಿನ ಸೈಯ್ಯದ್ ರಿಜ್ವಾನ್ ಅವರ ಕರ್ನಾಟಕ ಮಟನ್ ಅಂಡ್ ಚಿಕನ್ ಸ್ಟಾಲ್‌ನಲ್ಲಿ ಸಾಮೂಹಿಕವಾಗಿ ಹಲಾಲ್ ಕಟ್ ಮಾಂಸವನ್ನು ಖರೀದಿಸಿದ್ದಾರೆ.