ಲಕ್ನೋ: ಎಲೆಕ್ಟ್ರಾನಿಕ್ ತ್ಯಾಜ್ಯ ಅಥವಾ ಇ-ವೇಸ್ಟ್ ನಿಯಂತ್ರಿಸುವ ಬಗ್ಗೆ ದೇಶ-ವಿದೇಶಗಳಲ್ಲಿ ಹೊಸ ಹೊಸ ಕ್ರಮಗಳನ್ನು ಜಾರಿಗೊಳಿಸುತ್ತಲೇ ಇವೆ. ಇದೀಗ ನೋಯ್ಡಾ ಪ್ರಾಧಿಕಾರ ಸೋಮವಾರ ನಗರಾದ್ಯಂತ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಉದ್ದೇಶದಿಂದ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.
ಎಲೆಕ್ಟ್ರಾನಿಕ್ ರಿಪೇರಿಗಳಂತಹ ಅಂಗಡಿ ಹಾಗೂ ನಗರಾದ್ಯಂತ ವಸತಿ ಪ್ರದೇಶಗಳಿಂದ ಇ-ತ್ಯಾಜ್ಯವನ್ನು ಸಂಗ್ರಹಿಸಲು ಹಾಗೂ ವಿಲೇವಾರಿ ಮಾಡಲು 2 ಏಜೆನ್ಸಿಗಳನ್ನು ಸ್ಥಾಪಿಸಲಾಗಿದೆ.
Advertisement
ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹಲವು ಪ್ರಯತ್ನಗಳು ನಡೆಯುತ್ತಿದೆ. ಇ-ತ್ಯಾಜ್ಯ ಮರುಬಳಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ 2 ಏಜೆನ್ಸಿಗಳ ಮೂಲಕ ನಗರದ ವಸತಿ ಪ್ರದೇಶಗಳಿಂದ ಇ-ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ತಿಳಿಸಿದ್ದಾರೆ. ಇದನ್ನೂ ಓದಿ: ಸೂಪರ್ ಹೀರೋ ರೂಪತಾಳಿದ ಚರಣ್‍ಜಿತ್ ಸಿಂಗ್ ಚನ್ನಿ
Advertisement
Advertisement
ಆನ್‌ಲೈನ್ ಟ್ರಾಕಿಂಗ್ ಮೂಲಕ ಇ-ತ್ಯಾಜ್ಯ ಮರುಬಳಕೆ:
ಇ-ತ್ಯಾಜ್ಯ ಸಂಗ್ರಹಣೆಗೆ ಇ-ಬಿನ್‌ಗಳ ಬಳಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇ-ತ್ಯಾಜ್ಯವನ್ನು ಆನ್‌ಲೈನ್ ಟ್ರಾಕಿಂಗ್ ಸಿಸ್ಟಮ್ ಮೂಲಕ ಮರುಬಳಕೆ ಮಾಡಲಾಗುವುದು. ಇದು ಸ್ವಯಂ ಸಮರ್ಥನೀಯ ಮಾದರಿಯಾಗಿದೆ ಎಂದು ರಿತು ತಿಳಿಸಿದ್ದಾರೆ.
Advertisement
ಇ-ತ್ಯಾಜ್ಯ ವಿಲೇವಾರಿ ಏಕೆ ಅಗತ್ಯ:
ಸದ್ಯದ ಪರಿಸ್ಥಿತಿಯಲ್ಲಿ ಇ-ತ್ಯಾಜ್ಯದ ಬಗ್ಗೆ ಗಮನ ಹರಿಸುವುದು ಅತೀ ಅಗತ್ಯ. ಸರಳವಾಗಿ ಹೇಳುವುದಾದರೆ ಇ-ತ್ಯಾಜ್ಯಗಳು ಮುಖ್ಯವಾಗಿ ಫೋನ್, ಲ್ಯಾಪ್‌ಟಾಪ್, ಹಾರ್ಡ್ ಡ್ರೈವ್, ವಯರ್‌ಗಳು ಹೀಗೆ ಮೊದಲಾದವುಗಳೇ ಆಗಿವೆ. ಅವುಗಳು ಕೆಲಸಕ್ಕೆ ಬಾರದ ಸಮಯದಲ್ಲಿ ಇ-ವೇಸ್ಟ್‌ಗಳಾಗಿ ಪರಿವರ್ತನೆ ಹೊಂದುತ್ತದೆ. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ
ಇವುಗಳಲ್ಲಿನ ವಿಷಕಾರಿ ರಾಸಾಯನಿಕಗಳಿಂದ ಭಾರೀ ಅಪಾಯಗಳಾಗುವ ಸಾಧ್ಯತೆ ಇದೆ. ಜೊತೆಗೆ ಪರಿಸರ ಮಾಲಿನ್ಯವೂ ಆಗುವುದರಿಂದ ಇವುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಅಗತ್ಯ.