ಕೊಪ್ಪಳ/ಬಳ್ಳಾರಿ: ಸಿಎಂ ಸಿದ್ದರಾಮಯ್ಯ (CM Siddaramaiah) ಮುಡಾ ಹಗರಣದಲ್ಲಿ (MUDA Scam) ಭಾಗಿಯಾಗಿದ್ದು ನೂರರಷ್ಟು ಸತ್ಯ. ಶೀಘ್ರವೇ ಇದೇ ಪ್ರಕರಣ ಸಂಬಂಧ 15 ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನು ಶಿಕ್ಷೆ ಅನುಭವಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದರು.
Advertisement
ಸಂಡೂರು (Sanduru) ಕ್ಷೇತ್ರದ ಬೊಮ್ಮಘಟ್ಟ, ಚೋರನೂರು, ಬಂಡ್ರಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಮುಡಾದಲ್ಲಿ ಭ್ರಷ್ಟಾಚಾರ ನಡೆದಿದ್ದಕ್ಕೆ ಸಿಎಂ 14 ಸೈಟುಗಳನ್ನು ವಾಪಸ್ಸು ನೀಡಿದರು. ಎಸ್‌ಐಟಿ ರಚಿಸಿರುವ ಲೋಕಾಯುಕ್ತ ತನಿಖೆ ಪಾರದರ್ಶಕವಾಗಿಲ್ಲ. ಇದಕ್ಕಾಗಿಯೇ ಶೀಘ್ರದಲ್ಲಿ ಇಡಿ, ಸಿಐಡಿಯವರು ಸಿದ್ದರಾಮಯ್ಯರನ್ನು ವಿಚಾರಣೆಗೆ ಕರೆಯಲಿದ್ದಾರೆ. ಇನ್ನು 10-15 ದಿನಗಳಲ್ಲಿ ಸಿಎಂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷು ನುಡಿದರು.ಇದನ್ನೂ ಓದಿ: ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ
Advertisement
Advertisement
ಸಂಡೂರು ವಿಧಾನಸಭಾ ಕ್ಷೇತ್ರದ ಚೊರ್ನೂರು ಹಾಗೂ ಎಚ್ ಕೆ ಹಳ್ಳಿ ಯಲ್ಲಿ ಇಂದು ನಮ್ಮ ಭಾರತೀಯ ಜನತಾ ಪಾರ್ಟಿಯ ಧುರೀಣರಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ನವರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು@BSYediyurappa @GaliJanardhanar #Byelections2024 #SanduruByElection #SanduruByElection #BJPKarnataka pic.twitter.com/6qHTCINkGt
— B Sriramulu (@sriramulubjp) November 8, 2024
Advertisement
ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಮೂರು ಕ್ಷೇತ್ರದಲ್ಲೂ ಬಿಜೆಪಿ ಪರವಾದ ವಾತಾವರಣ ಇದೆ. ಸಂಡೂರಿನಲ್ಲೂ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ. ಜನರು ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಲಿದ್ದಾರೆ. ಶ್ರೀರಾಮಲು, ಜನಾರ್ದನರೆಡ್ಡಿ ಜೋಡಿ ಇಲ್ಲಿ ಮೋಡಿ ಮಾಡುತ್ತಿದೆ. ಅವರು ಈ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ನಾನು ಸಿಎಂ ಆಗಿದ್ದಾಗ ರೈತರು, ಬಡವರು ಯಾವುದೇ ಕಷ್ಟ ಅನುಭವಿಸದೇ ಸುಭದ್ರ ಜೀವನ ನಡೆಸುವ ಯೋಜನೆಗಳನ್ನು ಜಾರಿ ಮಾಡಿದ್ದೆ. ಕಾಂಗ್ರೆಸ್ ಸರಕಾರ ಭಾಗ್ಯ ಲಕ್ಷ್ಮಿ ಬಾಂಡ್, ಸೈಕಲ್ ಭಾಗ್ಯ ಸೇರಿ ಹಲವು ಯೋಜನೆಗಳನ್ನು ನಿಲ್ಲಿಸಿದೆ ಎಂದು ಟೀಕಿಸಿದರು.
ಮೋದಿಯನ್ನು ಅನಗತ್ಯವಾಗಿ ಟೀಕಿಸುವ ಸಿದ್ದರಾಮಯ್ಯ ಅವರೇ ಮೊದಲು ನಿಮ್ಮ ಮೇಲಿನ ಕೇಸ್ ಬಗ್ಗೆ ಯೋಚಿಸಿ, ನಿಮ್ಮ ಆಡಳಿತದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ದಿವಾಳಿ ಹಂಚಿಗೆ ತಲುಪಿದೆ. ಯಾವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದರು.
ಮಾಜಿ ಸಚಿವ ಜನಾರ್ದನರೆಡ್ಡಿ (Janardhan Reddy) ಮಾತನಾಡಿ, ಬಳ್ಳಾರಿ ಜನರು ಪ್ರಜ್ಞಾವಂತರಿದ್ದಾರೆ. ಕಾಂಗ್ರೆಸ್‌ನ ಹಸಿ ಸುಳ್ಳುಗಳಿಗೆ ಮಾರುಹೋಗುವುದಿಲ್ಲ. ಸೇಡಿನ ರಾಜಕಾರಣ ಮಾಡಿ ನನ್ನನ್ನು 14 ವರ್ಷ ಬಳ್ಳಾರಿಯಿಂದ ದೂರ ಇಟ್ಟರು. ಈಗ ತಾಯಿ ಚಾಮುಂಡಿ ಸಿದ್ದರಾಮಯ್ಯ ಅವರನ್ನು ದೂರ ಇಡಲಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಒಬ್ಬ ಸಿಎಂ ಸೋಲುವ ಭೀತಿಯಿಂದ ತಮ್ಮ ಇಡೀ ಕ್ಯಾಬಿನೇಟ್‌ನ್ನು ಸಂಡೂರಿಗೆ ಕರೆತಂದು ಕೂತಿದ್ದಾರೆ. ಸಂಡೂರಿನಲ್ಲಿ ಸೋಲುವ ಆತಂಕ ಅವರಲ್ಲಿ ಮೂಡಿದೆ ಇದಕ್ಕಾಗಿ ಹಣ, ಅಧಿಕಾರ ಪ್ರದರ್ಶನ ಮಾಡುವ ಮೂಲಕ ಜನರ ಮತವನ್ನು ಖರೀದಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ಯಾವುದು ಸಂಡೂರಿನಲ್ಲಿ ನಡೆಯಲ್ಲ. ತುಕಾರಂ 20 ವರ್ಷಗಳಿಂದ ಕ್ಷೇತ್ರದಲ್ಲಿ ಯಾವ ಕೆಲಸವನ್ನು ಮಾಡಿಲ್ಲ. ಅವರನ್ನು ಜನರು ಹಳ್ಳಿಗಳಲ್ಲಿಯೇ ಸೇರಿಸುತ್ತಿಲ್ಲ ಇದಕ್ಕಾಗಿ ಮುಖ್ಯಮಂತ್ರಿಯನ್ನೇ ಇಲ್ಲೇ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಹಳಿಗೆ ಹಾರಿ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ – ಕೋಲ್ಕತ್ತಾ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಮಾತನಾಡಿ, ಸರ್ಕಾರದ ಯಾವ ಗ್ಯಾರಂಟಿಗಳು ಇಲ್ಲಿ ಮೋಡಿ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಜಗಜ್ಜಾಹೀರಾಗಿದೆ. ಮುಡಾ, ಬುಡಾ, ಅಬಕಾರಿ ಪ್ರಕರಣವೂ ಈಗ ಸೇರಿಕೊಂಡಿದೆ. ಇಷ್ಟೊಂದು ಭ್ರಷ್ಟಾಚಾರ ನಡೆಸಿ ಯಾವ ಮುಖದಿಂದ ಮತಯಾಚನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.