72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!

Public TV
1 Min Read
CROCODILE

ಫನಂ ಪೆನ್ಹ್: 72 ವರ್ಷದ ವೃದ್ಧರೊಬ್ಬರನ್ನು ಸುಮಾರು 40 ಮೊಸಳೆಗಳು ಕೊಂದ ಭಯಾನಕ ಘಟನೆಯೊಂದು ನಡೆದಿರುವ ಬಗ್ಗೆ ಕಾಂಬೋಡಿಯಾದಲ್ಲಿ ಬೆಳಕಿಗೆ ಬಂದಿದೆ.

ಮೃತನ ಕುಟುಂಬ ಮೊಸಳೆ ಸಾಕಾಣಿಕೆ ಮಾಡುತ್ತಿದೆ. ಅಂತೆಯೇ ಮೊಸಳೆ (Crocodile) ಗಳನ್ನು ಕೂಡಿ ಹಾಕುವ ಪಂಜರದ ಒಳಗೆ ವೃದ್ಧ ಆಯತಪ್ಪಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಶವ ಸಂಸ್ಕಾರದ ವೇಳೆ ಕುತ್ತಿಗೆಯಲ್ಲಿ ಹಗ್ಗದ ಗುರುತು ಪತ್ತೆ – ಈಗ ಕೊಲೆ ಕೇಸ್ ದಾಖಲು

ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಪ್ರಯತ್ನಿಸುತ್ತಿದ್ದರು. ಅಂತೆಯೇ ಕೋಲಿನಿಂದ ಮೊಸಳೆಯನ್ನು ಬೆದರಿಸಲು ಮುಂದಾಗಿದ್ದರು. ಈ ವೇಳೆ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಬಲವಾಗಿ ಎಳೆದಿದೆ. ಇದರಿಂದ ಆ ವೃದ್ಧ ಕೋಲಿನ ಸಮೇತ ಮೊಸಳೆಗಳ ವಾಸಸ್ಥಳದೊಳಗೆ ಬಿದ್ದಿದ್ದಾರೆ. ಕ್ಷಣಮಾತ್ರದಲ್ಲಿ ಅಲ್ಲಿದ್ದ ಮೊಸಳೆಗಳ ಹಿಂಡು ಅವರ ಮೇಲೆ ದಾಳಿ ನಡೆಸಿದ್ದು, ವೃದ್ಧನ ದೇಹವನ್ನು ಛಿದ್ರಗೊಳಿಸಿ ತಿಂದು ಹಾಕಿವೆ.

crocodile

ಈ ಬಗ್ಗೆ ಸೀಯೆಮ್ ರೀಪ್ ಸಮೂಹದ ಪೊಲೀಸ್ ಮುಖ್ಯಸ್ಥ ಮೀ ಸಾವ್ರಿ ಪ್ರತಿಕ್ರಿಯಿಸಿ, ಮೊಟ್ಟೆ ಇರಿಸಿದ್ದ ಪಂಜರದಿಂದ ಮೊಸಳೆಯನ್ನು ಹೊರಗೆ ಓಡಿಸುತ್ತಿದ್ದಾಗ, ಮೊಸಳೆಯು ಕೋಲಿನ ಮೇಲೆ ದಾಳಿ ನಡೆಸಿದೆ. ಇದರಿಂದ ಆಯ ತಪ್ಪಿದ ಅವರು ಆವರಣದ ಒಳಗೆ ಬಿದ್ದಿದ್ದಾರೆ. ಬಳಿಕ ಇತರೆ ಮೊಸಳೆಗಳು ಅವರು ಬಿದ್ದ ಜಾಗದತ್ತ ನುಗ್ಗಿದ್ದವು. ಪರಿಣಾಮ ಅವರಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಗದಂತೆ ದಾಳಿ ನಡೆಸಿದವು. ವೃದ್ಧನ ಕೈಗಳನ್ನು ಕಚ್ಚಿ ಎಳೆದ ಮೊಸಳೆಗಳು ಒಂದು ಕೈಯನ್ನು ನುಂಗಿವೆ ಎಂದು ವಿವರಿಸಿದ್ದಾರೆ.

ಸ್ಥಳೀಯ ಮೊಸಳೆ ಕೃಷಿಕರ ಸಂಘಟನೆಯ ಅಧ್ಯಕ್ಷರಾಗಿದ್ದ ಲುವಾನ್ ಆಮ್ ಅವರ ಬಳಿ ಮೊಸಳೆ ಸಾಕಾಣಿಕೆ ಕೆಲಸವನ್ನು ಬಿಟ್ಟುಬಿಡುವಂತೆ ಕುಟುಂಬ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿತ್ತು. ಆದರೆ ಲುವಾನ್ ಅದನ್ನು ಒಪ್ಪಿರಲಿಲ್ಲ. ಈಗ ಲುವಾನ್ ಅವರೇ ಮೊಸಳೆಗಳಿಗೆ ಬಲಿಯಾದ ಕಾರಣ ತಮ್ಮಲ್ಲಿನ ಎಲ್ಲ ಮೊಸಳೆಗಳನ್ನು ಮಾರಾಟ ಮಾಡಲು ಕುಟುಂಬ ಮುಂದಾಗಿದೆ.

Share This Article