ಬೋಳು ತಲೆ ಅಂತ ಕರೆಯುವುದೂ ಲೈಂಗಿಕ ಕಿರುಕುಳ- ಉದ್ಯೋಗ ನ್ಯಾಯಮಂಡಳಿ ತೀರ್ಪು

Public TV
1 Min Read
man bald (1)

ಲಂಡನ್: ಸಾಮಾನ್ಯವಾಗಿ ಯಾವುದೇ ಕಚೇರಿಯಲ್ಲಿರುವ ಸಹೋದ್ಯೋಗಿಗಳಿಗೆ ಕಡಿಮೆ ಕೂದಲು ಕಂಡರೇ ಸಾಕು, ಅವರನ್ನು ಬೋಳು ತಲೆ ಎಂದು ಹೀಯಾಳಿಸುವುದುಂಟು. ಆದರೆ ಇನ್ಮುಂದೆ ಹಾಗೇ ಮಾಡುವಂತೆ ಇಲ್ಲ. ಒಂದು ವೇಳೆ ಬೋಳು ತಲೆಯವನು ಎಂದರೆ ಜೈಲಿಗೆ ಹಾಕುವ ಸಾಧ್ಯತೆಯೂ ಇದೆ.

ಯಾವುದೇ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ಬೋಳುತಲೆ ಅಂತ ಕರೆಯುವುದೂ ಲೈಂಗಿಕ ಅಪರಾಧ ವ್ಯಾಪ್ತಿಗೆ ಬರುತ್ತದೆ ಎಂದು ಯುಕೆ ಉದ್ಯೋಗ ನ್ಯಾಯ ಮಂಡಳಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಜೊನಾಥನ್ ಬ್ರೈನ್‌ ನೇತೃತ್ವದ ತ್ರಿಸದಸ್ಯ ನ್ಯಾಯಮಂಡಳಿ, ತಲೆಯಲ್ಲಿ ಕೂದಲಿಲ್ಲದ ವ್ಯಕ್ತಿಯನ್ನು ಹೀಯಾಳಿಸುವುದು ಅವಮಾನವೋ ಅಥವಾ ಕಿರುಕುಳಕ್ಕೆ ಸಮಾನವೋ ಎಂದು ನಿರ್ಧರಿಸಬೇಕಿತ್ತು. ಇದನ್ನೂ ಓದಿ: ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

man bald

ಕಳೆದ ವರ್ಷ ಮೇ ತಿಂಗಳಿನಲ್ಲಿ ಟೋನಿ ಫಿನ್ ಎಂಬ ವ್ಯಕ್ತಿಯನ್ನು ಕಂಪೆನಿಯಿಂದ ವಜಾಗೊಳಿಸಲಾಗಿತ್ತು. ಕಳೆದ 24 ವರ್ಷಗಳಿಂದ ಅವರು ಆ ಕಂಪೆನಿಯಲ್ಲಿ ಎಲೆಕ್ಟ್ರೀಷಿಯನ್‌ ಆಗಿ ಕೆಲಸ ಮಾಡುತ್ತಿದ್ದರು. ವಜಾಗೊಳಿಸಿದ ಬಳಿಕ ಬ್ರಿಟಿಷ್ ಬಂಗ್ ಕಂಪೆನಿಯ ವಿರುದ್ಧ ಟೋನಿ ಫಿನ್, ಲೈಂಗಿಕ ತಾರತಮ್ಯ ಹಾಗೂ ನ್ಯಾಯ ಸಮ್ಮತವಲ್ಲದೇ ವಜಾಗೊಳಿಸಿರುವ ಬಗ್ಗೆ ಆರೋಪ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ‘ಬೋಳು’ ಎಂಬ ಪದಕ್ಕೂ ಲೈಂಗಿಕತೆಯ ಗುಣಲಕ್ಷಣಕ್ಕೂ ಒಂದಕ್ಕೊಂದು ಸಂಬಂಧವಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಹಿಂದಿ ಅಥವಾ ಯಾವುದೋ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ: TN ರಾಜ್ಯಪಾಲ ಆರ್.ಎನ್.ರವಿ

man bald

ಬ್ರಿಟಿಷ್ ಬ್ಯಾಂಗ್ ಕಂಪನಿ ಲಿಮಿಟೆಡ್ ಪರವಾಗಿ ಹಾಜರಾದ ವಕೀಲರ ವಾದವನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ. ಆದಾಗ್ಯೂ ‘ಬೋಳು ತಲೆ’ ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಸ್ವಾಭಾವಿಕವಾಗಿ ಲೈಂಗಿಕತೆಗೆ ಸಂಬಂಧಿಸಿದೆ ಎಂದು ಕೋರ್ಟ್ ತೀರ್ಪು ಪ್ರಕಟಿಸಿತು.

ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಉತ್ತರ ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಫಿನ್‌ಗೆ ನೀಡಬಹುದಾದ ಪರಿಹಾರದ ಬಗ್ಗೆ ಶೀಘ್ರವೇ ತಿಳಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

Share This Article