LatestMain PostNational

ಬೇಕಿದ್ರೆ ರಾಹುಲ್‌ ಗಾಂಧಿಯನ್ನು ಕಾಮಿಡಿ ಶೋಗೆ ಆಹ್ವಾನಿಸಿ: ಮಧ್ಯಪ್ರದೇಶ ಸಚಿವ ಲೇವಡಿ

ಭೋಪಾಲ್: ಕಾಮಿಡಿಯನ್‌ ಕುಣಾಲ್‌ ಕಮ್ರಾ ಮತ್ತು ಮುನವ್ವರ್‌ ಫಾರೂಕಿ ಅವರನ್ನು ಸ್ಟ್ಯಾಂಡ್‌ ಅಪ್‌ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ವಾಗ್ದಾಳಿ ನಡೆದಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಅವರು ಬೇಕಿದ್ದರೆ ರಾಹುಲ್‌ ಗಾಂಧಿ ಅವರನ್ನು ಕಾಮಿಡಿ ಶೋಗೆ ಆಹ್ವಾನಿಸಲಿ ಎಂದು ಸಚಿವ ನರೋತ್ತಮ್‌ ಮಿಶ್ರಾ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

ಕೆಲವರು ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ ಧರ್ಮದ ದೇವರುಗಳನ್ನು ಟೀಕಿಸಲು ಹೊರಟಿದ್ದಾರೆ. ಅಂತಹವರನ್ನು ಜೈಲಿಗೆ ಹಾಕುವುದು ಖಂಡಿತ. ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕುನಾಲ್‌ ಮತ್ತು ಮುನವ್ವರ್‌ ಅವರಿಂದ ಸ್ಟ್ಯಾಂಡ್‌ ಅಪ್‌ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಟ್ವೀಟ್‌ ಮಾಡಿ ತಿಳಿಸಿದ್ದರು. ಇದಕ್ಕೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್

ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಸಚಿವ ಮಿಶ್ರಾ ಆಗ್ರಹಿಸಿದ್ದರು. ಪೊಲೀಸರು ನೋಟಿಸ್‌ ನೀಡಿದ ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದಕ್ಕೆ ಕಾಂಗ್ರೆಸ್‌ ಹಾಗೂ ಕಾಮಿಡಿಯನ್‌ಗಳು ವಿರೋಧಿಸಿದ್ದರು.

Leave a Reply

Your email address will not be published.

Back to top button