ಭುವನೇಶ್ವರ: 2 ತಲೆ, ಮೂರು ಕಣ್ಣು ಇರುವ ಕರುವೊಂದು ಜನನವಾಗಿದೆ. ನವರಾತ್ರಿ ಸದಂರ್ಭದಲ್ಲಿಯೇ ಇಂಥಹ ವಿಚಿತ್ರ ಕರುವೊಂದು ಜನಿಸಿದ್ದರಿಂದ ದುರ್ಗಾದೇವಿಯ ಅವತಾರ ಎಂದು ಜನರು ಪೂಜೆ ಮಾಡಿರುವ ಘಟನೆ ಒರಿಸ್ಸಾದ ನಬ್ರಂಗ್ಪುರದಲ್ಲಿ ನಡೆದಿದೆ.
Advertisement
ನಬ್ರಂಗ್‍ಪುರದ ಧನಿರಾಂ ಅವರ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪವಾದ, ವಿಶೇಷವಾದ ಕರು ಜನಿಸಿದೆ. ಈ ಕರುಗೆ ಎರಡು ತಲೆ, ಮೂರು ಕಣ್ಣುಗಳಿವೆ. ಹೀಗೆ ವಿಶೇಷವಾಗಿ ಜನಿಸಿದ ಈ ಕರುವನ್ನು ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಕರು ಆರೋಗ್ಯದಿಂದಿದ್ದು, ದುರ್ಗಾ ಮಾತೆಯ ಪ್ರತಿರೂಪ ಎಂದು ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!
Advertisement
People in the locality of Bijapara village have begun worshipping a two headed calf as #Durga Avatar
After it was born with two heads and three eyes on the occasion of #Navratri to a farmer in Odisha’s Nabrangpur District. #DurgaPuja @aajtak @IndiaToday pic.twitter.com/tz9i9mpJ0O
— Suffian सूफ़ियान سفیان (@iamsuffian) October 12, 2021
Advertisement
ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದರು. ಈ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಹೀಗೆ ವಿಶೇಷವಾಗಿರುವ ಈ ಕರು ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ
Advertisement
ಮುಕ್ಕಣ್ಣನಂತಿರುವ ಈ ಕರುವಿಗೆ ಎರಡು ತಲೆಗಳಿರುವುದರಿಂದ ಹಾಲು ಕುಡಿಯಲು ಕಷ್ಟವಾಗುತ್ತಿದೆ. ಹಸುವಿನ ಕೆಚ್ಚಲಿನಿಂದ ಕರುವಿಗೆ ಹಾಲು ಕುಡಿಯುವುದು ಕಷ್ಟವಾದ್ದರಿಂದ ಹೊರಗಿನಿಂದ ಪ್ಯಾಕೆಟ್ ಹಾಲನ್ನು ಖರೀದಿಸಿ ನೀಡಲಾಗುತ್ತಿದೆ. ಈ ಕರುವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.