ಕೋಲ್ಕತ್ತಾ: 2010 ರಿಂದ ಪಶ್ಚಿಮ ಬಂಗಾಳದಲ್ಲಿ (West Bengal) ನೀಡಲಾದ ಎಲ್ಲಾ ಇತರ ಹಿಂದುಳಿದ ವರ್ಗಗಳ (OBC) ಪ್ರಮಾಣಪತ್ರಗಳನ್ನು ಕೋಲ್ಕತ್ತಾ ಹೈಕೋರ್ಟ್ (Calcutta High Court) ವಜಾಗೊಳಿಸಿದೆ.
ಒಬಿಸಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತಪಬ್ರತ ಚಕ್ರವರ್ತಿ ಮತ್ತು ರಾಜಶೇಖರ್ ಮಂಥ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ; ಕೊನೆಗೂ ಮೌನ ಮುರಿದ ಕೇಜ್ರಿವಾಲ್
Advertisement
Advertisement
ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗವು, 1993 ರ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯ ಆಧಾರದ ಮೇಲೆ OBC ಗಳ ಹೊಸ ಪಟ್ಟಿಯನ್ನು ತಯಾರಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ. ಹೈಕೋರ್ಟ್ ಪೀಠವು 2010 ರ ನಂತರ ಸಿದ್ಧಪಡಿಸಲಾದ ಒಬಿಸಿ ಪಟ್ಟಿಯನ್ನು ‘ಅಕ್ರಮ’ ಎಂದು ಹೇಳಿದೆ.
Advertisement
ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳು (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ) (ಸೇವೆಗಳು ಮತ್ತು ಹುದ್ದೆಗಳಲ್ಲಿ ಖಾಲಿ ಹುದ್ದೆಗಳ ಮೀಸಲಾತಿ) ಕಾಯಿದೆ-2012 ಸೆಕ್ಷನ್ 2H, 5, 6 ಮತ್ತು ಸೆಕ್ಷನ್ 16 ಮತ್ತು ಶೆಡ್ಯೂಲ್ I ಮತ್ತು III ಅನ್ನು ‘ಅಸಂವಿಧಾನಿಕ’ ಎಂದು ಹೈಕೋರ್ಟ್ ತಳ್ಳಿಹಾಕಿದೆ. ಇದನ್ನೂ ಓದಿ: ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ
Advertisement
2010 ರ ನಂತರ ನೀಡಲಾದ ಎಲ್ಲಾ OBC ಪ್ರಮಾಣಪತ್ರಗಳು 1993 (ಪಶ್ಚಿಮ ಬಂಗಾಳ ಹಿಂದುಳಿದ ವರ್ಗ ಆಯೋಗ) ಕಾಯಿದೆಯನ್ನು ಬೈಪಾಸ್ ಮಾಡಲಾಗಿದೆ ಎಂದು 2011 ರಲ್ಲಿ ಸಲ್ಲಿಸಿದ್ದ PILನಲ್ಲಿ ಆರೋಪಿಸಲಾಗಿತ್ತು. ವಾಸ್ತವವಾಗಿ ಹಿಂದುಳಿದ ವರ್ಗದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗಿಲ್ಲ ಎನ್ನಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಎಲ್ಲಾ OBC ಪ್ರಮಾಣಪತ್ರಗಳನ್ನು ರದ್ದುಗೊಳಿಸಿದೆ.
ಈಗಾಗಲೇ ಸೇವೆಯಲ್ಲಿರುವ ಅಥವಾ ಮೀಸಲಾತಿಯಿಂದ ಪ್ರಯೋಜನ ಪಡೆದಿರುವ ಅಥವಾ ರಾಜ್ಯದ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿರುವ ವರ್ಗಗಳ ನಾಗರಿಕರ ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.