ದಾವಣಗೆರೆ: ಎಲ್ಲೆಡೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ಜನರು ಕಾಯುತ್ತಿದ್ದಾರೆ. ಇತ್ತ ದಾವಣಗೆರೆಯಲ್ಲಿ ಕೇಕ್ ಮೇಳಗಳು ನಡೆದು ಹೊಸ ವರ್ಷಕ್ಕೆ ಮತ್ತಷ್ಟು ಮೆರಗು ತರುತ್ತಿವೆ.
ದಾವಣಗೆರೆಯ ಎಸಿಸಿ ಬಿ ಬ್ಲಾಕ್‍ನ ಸ್ನೇಹ ಕೇಕ್ ಪ್ಯಾಲೇಸ್ ಹಾಗೂ ಪಿಬಿ ರಸ್ತೆಯಲ್ಲಿರುವ ಅಹಾರ್ 2000ನಲ್ಲಿ ಗ್ರಾಹಕರಿಗಾಗಿ ಕೇಕ್ ಮೇಳವನ್ನೇ ಆಯೋಜನೆ ಮಾಡಿದ್ದಾರೆ. ಸ್ನೇಹ ಕೇಕ್ ಪ್ಯಾಲೇಸ್‍ನಲ್ಲಿ ಐತಿಹಾಸಿಕ ಸಂತೇಬೆನ್ನೂರು ಪುಷ್ಕರಣಿ ವಿನ್ಯಾಸ ಎಲ್ಲರನ್ನು ಆಕರ್ಷಿಸುತ್ತಿದ್ದು, ಪುಷ್ಕರಣಿ ಮಾದರಿ ಕೇಕನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹೊಸ ವರ್ಷ ಸಂಭ್ರಮದಲ್ಲಿರುವ ಜನರಿಗೆ ಹೊಸತನವನ್ನ ಕೇಕಿನಲ್ಲೇ ನೀಡಬೇಕು ಎಂಬ ಉದ್ದೇಶದಿಂದ ಹೋಟೆಲ್ ಮಾಲೀಕ ಸಂತೇಬೆನ್ನೂರಿನ ಪುಷ್ಕರಣಿ ನಿರ್ಮಾಣದಲ್ಲಿ ಕೇಕ್ ತಯಾರು ಮಾಡಿದ್ದಾರೆ.
ಕೇಕ್‍ಗೆ ಬಳಕೆ ಮಾಡಿದ ಸಾಮಗ್ರಿಗಳು:
ಸುಮಾರು 4 ಅಡಿ ಎತ್ತರ, ಮೂರುವರೆ ಅಡಿ ಅಗಲ ಈ ಕೇಕ್ ಇದ್ದು, 250 ಕೆಜಿ ಐಶಿನ್ ಸಕ್ಕರೆ, ಐದು ಕೆಜಿ ಜಿಲೇಟಿಯನ್, 300 ಮೊಟ್ಟೆ, ಐದು ಕೆಜಿ ಗ್ಲೇಜ್ ಬಳಸಿ ಈ ಕೇಕ್ ತಯಾರು ಮಾಡಲಾಗಿದೆ. ಇದನ್ನು ತಯಾರು ಮಾಡಲು 15 ದಿನ ತೆಗೆದುಕೊಂಡಿದ್ದು, ಸಂತೇಬೆನ್ನೂರು ಐತಿಹಾಸಿಕ ಪುಷ್ಕರಣಿಯ ಕೇಕ್ ಕಲಾಕೃತಿಯನ್ನ ನೋಡಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಜೊತೆಗೆ ಕೇಕ್ ಎದುರು ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಈ ಪುಷ್ಕರಣಿಯ ಜೊತೆಗೆ ವೆಡ್ಡಿಗ್ ಕೇಕ್, ಬೇಬಿ ಡಾಲ್, ಗಿಟಾರ್, ವಿವಿಧ ಹಣ್ಣಿನ ಮಾದರೀಯ ಸಾವಿರಾರು ಕೇಕ್‍ಗಳನ್ನು ತಯಾರು ಮಾಡಲಾಗಿದ್ದು, ಜನರು ಕೇಕ್‍ಗಳ ಮಾದರಿಗಳನ್ನು ಕಣ್ ತುಂಬಿಕೊಳ್ಳುತ್ತಿದ್ದಾರೆ. ಐದು ದಿನಗಳ ಕಾಲ ಕೇಕ್ ಪ್ರದರ್ಶನಕ್ಕೆ ಇಡಲಾಗಿದ್ದು, ಇದನ್ನು ನೋಡಲು ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಆಗಮಿಸಿ ಸಂತೇಬೆನ್ನೂರು ಪುಷ್ಕರಣಿಯ ಜೊತೆಯ ವಿವಿಧ ಕೇಕ್ ಮಾದರಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.